ಮೋದಿಯಿಂದ ಪ್ರಶಸ್ತಿ ಪಡೆದ ರಿಕ್ಷಾವಾಲಾನ ಮಗಳು; ಈ ಯೂಟ್ಯೂಬರ್ ಆಸ್ತಿ ಮೌಲ್ಯ ಇಷ್ಟೊಂದಾ?

First Published | Jun 10, 2024, 11:47 AM IST

ಈಕೆಯ ತಂದೆ ದಿನಕ್ಕೆ 20 ರೂ.ಗೆ ಆಟೋ ಬಾಡಿಗೆಗೆ ಬಿಡುತ್ತಿದ್ದರು. ಆದರೆ, ಇಂದೀಗ ಈಕೆಯ ನಿವ್ವಳ ಆಸ್ತಿ ಮೌಲ್ಯ ಅಚ್ಚರಿಗೊಳಿಸುತ್ತದೆ. ವಿದೇಶಗಳನ್ನು ಸುತ್ತುತ್ತಾ, ಆ ವಿಡಿಯೋಗಳ ಮೂಲಕವೇ ಕೋಟಿ ಕೋಟಿ ಸಂಪಾದಿಸಿದ್ದಾರೆ ಕಾಮಿಯಾ ಜಾನಿ. 

ಶಿಕ್ಷಣ ಮತ್ತು ಮಾಡುವ ಕೆಲಸದ ಮೇಲಿನ ಅತಿಯಾದ ಪ್ರೀತಿ ಯಾರನ್ನಾದರೂ ಯಾವ ಎತ್ತರಕ್ಕೆ ಕೊಂಡೊಯ್ಯಬಹುದೆನ್ನುವುದಕ್ಕೆ ಕಾಮಿಯಾ ಜಾನಿ ಕತೆಯೇ ಸಾಕ್ಷಿ. 

ರಿಕ್ಷಾವಾಲಾನ ಮಗಳಾಗಿ ಮುಂಬೈನಲ್ಲಿ 1988ರಲ್ಲಿ ಜನಿಸಿದ ಕಾಮಿಯಾ ಜಾನಿಯ ತಂದೆಯ ಆದಾಯ ಆ ದಿನಗಳಲ್ಲಿ ದಿನಕ್ಕೆ 20 ರೂ. ಆದರೆ, ಮಗಳ ಶಿಕ್ಷಣದ ವಿಷಯದಲ್ಲಿ ಅವರು ರಾಜಿಯಾಗಲಿಲ್ಲ. 

Tap to resize

ಕರ್ಲಿ ಟೇರ್ಲ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಕಾಮಿಯಾ ಜಾನಿ ಈ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯಿಂದ ಬೆಸ್ಟ್ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅವಾರ್ಡನ್ನು ಗಳಿಸಿದ್ದಾರೆ. 

ಜರ್ನಲಿಸಂ ಓದಿ, ಬಳಿಕ ಎಲ್ಎಲ್‌ಬಿಯನ್ನೂ ಮಾಡಿದ ಕಾಮಿಯಾ ಜಾನಿ, ಸ್ವತಂತ್ರ ಪತ್ರಕರ್ತೆಯಾಗಿ 2006ರಲ್ಲಿ ವೃತ್ತಿಜೀವನ ಆರಂಭಿಸಿದರು. 

ಸಮಯ ಕಳೆದಂತೆ, ಕಾರ್ಪೊರೇಟ್ ಜೀವನಶೈಲಿ, ವೈಯಕ್ತಿಕ ಹಣಕಾಸು, ಕಾರ್ಪೊರೇಟ್ ಪ್ರಯಾಣ, ಆರೋಗ್ಯ, ಫಿಟ್‌ನೆಸ್, ಜೀವನಶೈಲಿ ಮತ್ತು ಅಂದಗೊಳಿಸುವಿಕೆಯಂತಹ ವಿವಿಧ ವಿಷಯಗಳ ಕುರಿತು ಸಂಶೋಧನೆ ಮತ್ತು ಲೇಖನಗಳನ್ನು ಬರೆಯುವ ಮೂಲಕ ಅವರು ತಮ್ಮ ಪರಿಣತಿಯ ಕ್ಷೇತ್ರವನ್ನು ವಿಸ್ತರಿಸಿದರು. 

ಇವೆಲ್ಲ ಅವರಲ್ಲಿ ಹೆಚ್ಚಿನ ಜ್ಞಾನ ತುಂಬುತ್ತಿದ್ದಂತೆಯೇ 2016ರಲ್ಲಿ ಆಕೆ ಯೂಟ್ಯೂಬ್ ಚಾನೆಲ್ ತೆರೆದರು. ಕರ್ಲಿ ಟೇಲ್ಸ್ ಹೆಸರಿನಲ್ಲಿ ಶುರುವಾದ ಚಾನೆಲ್‌ನಲ್ಲಿ ಅವರ ತಿರುಗಾಟ ಮತ್ತು ಆಹಾರ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. 

ಜನರು ಇದನ್ನು ಬಹಳ ಇಷ್ಟಪಡಲು ಶುರು ಮಾಡುತ್ತಿದ್ದಂತೆ ಕಾಮಿಯಾ ಬದುಕೇ ಬದಲಾಯಿತು. ಪ್ರಯಾಣ ಮತ್ತು ಜೀವನಶೈಲಿ ಉದ್ಯಮದಲ್ಲಿ ಜನರ ಮೆಚ್ಚಿನ ಕಂಟೆಂಟ್ ಕ್ರಿಯೇಟರ್ ಆದರು. 

ಅಲ್ಲಿಂದ ಕಾಮಿಯಾ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಇದುವರೆಗೂ 40 ದೇಶಗಳು, 123 ನಗರಗಳು ಮತ್ತು ಪ್ರಪಂಚದ ಇತರ ಭಾಗಗಳಿಗೆ ಭೇಟಿ ನೀಡಿದ್ದಾರೆ. 

11 ವರ್ಷದ ಮಗಳಿಗೆ ಒಳ್ಳೆಯ ಅಮ್ಮ, ಗಂಡನಿಗೆ ನೆಚ್ಚಿನ ಪತ್ನಿಯಾಗಿದ್ದು, ಜೊತೆಗೆ ಪ್ರಪಂಚ ಸುತ್ತುತ್ತಲೇ ಜನರಿಗೆ ಜಗತ್ತನ್ನು ತೋರಿಸುತ್ತಿದ್ದಾರೆ. 

ಇಂದು ಕರ್ಲಿ ಟೇಲ್ಸ್‌ ಚಾನೆಲ್‌ನಲ್ಲಿ ವಿರಾಟ್ ಕೊಹ್ಲಿಯಿಂದ ಜಾನ್ವಿ ಕಪೂರ್‌ವರೆಗೆ ಯಾವುದೇ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲು ಬಯಸುತ್ತಾರೆ. 

ಕಾಮಿಯಾ ಜಾನಿಯ ನಿವ್ವಳ ಆಸ್ತಿ ಕೇವಲ ಯೂಟ್ಯೂಬ್‌ ಚಾನೆಲ್‌ನಿಂದ ಗಳಿಸಿದ್ದೇ 2022ರ ಅಂಕಿಅಂಶದಂತೆ ಬರೋಬ್ಬರಿ 8 ಕೋಟಿ ರೂ.
 

Latest Videos

click me!