ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರ ಜೀವನ, ಆಹಾರ ಕ್ರಮ ಹೇಗಿರಬೇಕು?

Suvarna News   | Asianet News
Published : Jan 11, 2021, 03:35 PM IST

ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ. 

PREV
111
ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರ ಜೀವನ, ಆಹಾರ ಕ್ರಮ ಹೇಗಿರಬೇಕು?

ಚಳಿಗಾಲದ ಗರ್ಭಧಾರಣೆಯ ಆರೈಕೆಯಲ್ಲಿ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ತಾಯಿ ಮತ್ತು ಮಗುವನ್ನು ಆರೋಗ್ಯವಾಗಿಡಬೇಕು. ಸರಿಯಾದ ಆಹಾರವನ್ನು ಸೇವಿಸುವುದು, ತಂಪಾದ ಗಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸುವುದು ಮತ್ತು ಶುಷ್ಕತೆ ತಡೆಗಟ್ಟಲು ಚರ್ಮವನ್ನು ಹೈಡ್ರೀಕರಿಸುವುದು ಮುಖ್ಯ. 

211

ಚಳಿಗಾಲದಲ್ಲಿ ಗರ್ಭಿಣಿಯರು ತಮ್ಮನ್ನು ಮತ್ತು ಹುಟ್ಟಲಿರುವ ಮಗುವನ್ನು ನೋಡಿಕೊಳ್ಳಲು ಕೆಲವು ತಜ್ಞರು ಸೂಚಿಸಿದ ಸಲಹೆಗಳು ಇಲ್ಲಿವೆ:

311

ಆಗಾಗ್ಗೆ ಕ್ರೀಮ್ ಮತ್ತು ಲೋಷನ್ ಹಚ್ಚಿ 
ಶೀತ, ಶುಷ್ಕ ಚಳಿಗಾಲದ ಗಾಳಿ  ಚರ್ಮವನ್ನು ಅದರ ನೈಸರ್ಗಿಕ ತೇವಾಂಶ ಮತ್ತು ತೈಲಗಳಿಂದ ಕಸಿದುಕೊಳ್ಳುತ್ತದೆ. ಹೊಟ್ಟೆ ವಿಸ್ತರಿಸಿದಂತೆ, ಚರ್ಮವೂ ಹಿಗ್ಗುತ್ತದೆ ಮತ್ತು ಒಣ ಚರ್ಮದ ಸಮಸ್ಯೆ ಹೆಚ್ಚುತ್ತದೆ. ಇದಲ್ಲದೆ, ಇದು ಸ್ಟ್ರೆಚ್ ಮಾರ್ಕ್‌ಗಳನ್ನು ಬಿಡುತ್ತದೆ. ಆದ್ದರಿಂದ,  ಚರ್ಮವನ್ನು ಹೈಡ್ರೀಕರಿಸುವುದಕ್ಕಾಗಿ ಆಗಾಗ್ಗೆ ಕ್ರೀಮ್, ಲೋಷನ್ ಮತ್ತು ಹಿತವಾದ ಎಣ್ಣೆಯನ್ನು ಹಚ್ಚಲು ಸೂಚಿಸಲಾಗುತ್ತದೆ.

411

ಹಣ್ಣು-ಸಮೃದ್ಧ ಆಹಾರವನ್ನು ಸೇವಿಸಿ
ಸಾಕಷ್ಟು ಹಣ್ಣುಗಳನ್ನು ಒಳಗೊಂಡಂತೆ ಸಮತೋಲಿತ ಆಹಾರಕ್ರಮಕ್ಕೆ ಅಂಟಿ ಕೊಳ್ಳುವುದು  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಅಮ್ಲಾ ಎಂದು ಕರೆಯಲ್ಪಡುವ ಭಾರತೀಯ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ತುಂಬಾ ಅಧಿಕವಾಗಿದೆ, ಇದು ಆರೋಗ್ಯಕರ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

511

ಆಮ್ಲಾ ಜ್ಯೂಸ್ ಬೆಳಗಿನ ಕಾಯಿಲೆ ಕಡಿಮೆ ಮಾಡಲು, ವಾಕರಿಕೆ, ಮಲಬದ್ಧತೆ ಮತ್ತು ಗರ್ಭಧಾರಣೆಯ ಇತರ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಕ್, ಮೆಂತ್ಯ ಎಲೆಗಳು ಮತ್ತು ಹಸಿರು ಈರುಳ್ಳಿ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ.

611

ಹೆಚ್ಚು ನೀರು ಕುಡಿಯಿರಿ 
ಚಳಿಯ ವಾತಾವರಣವು ಜನರು ನೀರನ್ನು ಕುಡಿಯಲು ಮರೆಯುವಂತೆ ಮಾಡುತ್ತದೆ, ಇದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣವು ಕಡಿಮೆ ಮಟ್ಟದ ಆಮ್ನಿಯೋಟಿಕ್ ದ್ರವಕ್ಕೆ ಕಾರಣವಾಗಬಹುದು, ಇದು ಅವಧಿಪೂರ್ವ ಪ್ರಸವಕ್ಕೆ ಕಾರಣವಾಗಬಹುದು ಮತ್ತು ಎದೆ ಹಾಲಿನ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ.

711

ಗಾಳಿಯು ಒಣಗಿದಂತೆ, ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚುವರಿ ನೀರು ಬೇಕಾಗುತ್ತದೆ. ದೇಹದ ವ್ಯವಸ್ಥೆಯನ್ನು ಹೈಡ್ರೇಟ್ ಮಾಡಲು ನೀರು ಉತ್ತಮ ಮಾರ್ಗ, ಎಳನೀರು ಮತ್ತು ಜ್ಯೂಸ್ ಸೇವನೆ ಒಳಿತು.

811

ಫ್ಲೂ ಲಸಿಕೆ ಪಡೆಯಿರಿ
ಗರ್ಭಾವಸ್ಥೆಯಲ್ಲಿ ಫ್ಲೂ ಶಾಟ್ ಪಡೆಯುವುದರಿಂದ ತಾಯಿ, ಮಗುವನ್ನು ಜ್ವರದಿಂದ ರಕ್ಷಿಸಬಹುದು. ನವಜಾತ ಶಿಶುವನ್ನು ಜನಿಸಿದ ಆರು ತಿಂಗಳವರೆಗೆ ಜ್ವರದಿಂದ ರಕ್ಷಿಸಬಹುದು ಎಂದು ತಜ್ಞರು ಹೇಳುತ್ತಾರೆ. 

911

ಫ್ಲೂ ಲಸಿಕೆ ಹೊಂದಿರುವುದು ಗರ್ಭಿಣಿ ಮಹಿಳೆಯರಲ್ಲಿ ಜ್ವರ ಸಂಬಂಧಿತ ತೀವ್ರ ಉಸಿರಾಟದ ಸೋಂಕಿನ ಅಪಾಯ ಕಡಿಮೆ ಮಾಡುತ್ತದೆ. ಚಿಂತಿಸಬೇಡಿ! ಫ್ಲೂ ಲಸಿಕೆ ನಿರೀಕ್ಷಿತ ತಾಯಂದಿರು ಮತ್ತು ಹುಟ್ಟಲಿರುವ ಶಿಶುಗಳಿಗೆ ಸುರಕ್ಷಿತವಾಗಿದೆ ಎಂದು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಘೋಷಿಸಿದೆ.

1011

ಕೂದಲಿನ ಚಿಕಿತ್ಸೆಯನ್ನು ತಪ್ಪಿಸಿ
ಸಲೂನ್ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಹುಟ್ಟಲಿರುವ ಮಗುವಿಗೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಗರ್ಭಿಣಿಯರು ಕೂದಲಿನ ಚಿಕಿತ್ಸೆಯಾದ ಸ್ಟ್ರೈಟನಿಂಗ್ ಅಥವಾ ಬಣ್ಣ ಮಾಡುವುದು ತಪ್ಪಿಸಬೇಕು. ಕೂದಲಿನ ಬಣ್ಣದ ಉತ್ಪನ್ನಗಳು ಸೀಸವನ್ನು ಹೊಂದಿರಬಹುದು, ಇದು ಅತ್ಯಂತ ವಿಷಕಾರಿ. ಗರ್ಭಾವಸ್ಥೆಯಲ್ಲಿ ಸೀಸದ ವಿಷ ಭ್ರೂಣದ ಬೆಳವಣಿಗೆ ಕುಂಠಿತಗೊಳಿಸಿ, ಅಕಾಲಿಕ ಜನನಕ್ಕೆ ಕಾರಣವಾಗಬಹುದು.

1111

ಪಾದಗಳನ್ನು ಬೆಚ್ಚಗೆ ಇರಿಸಿ
ಶೀತ ಹವಾಮಾನಕ್ಕೆ ಒಡ್ಡಿ ಕೊಳ್ಳುವುದರಿಂದ ಕಳಪೆ ರಕ್ತಪರಿಚಲನೆಗೆ ಕಾರಣವಾಗಬಹುದು, ಇದರಿಂದ ಕಾಲು ಊದಿಕೊಳ್ಳುತ್ತದೆ. ಚರ್ಮದಲ್ಲಿನ ಸಣ್ಣ ರಕ್ತನಾಳಗಳ ನೋವಿನ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದು ಕೈ ಕಾಲುಗಳ ಮೇಲೆ ತುರಿಕೆ, ಕೆಂಪು ತೇಪೆಗಳು, ಊತ ಮತ್ತು ಗುಳ್ಳೆಗಳಿಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು, ಪಾದಗಳನ್ನು ಚೆನ್ನಾಗಿ ಮುಚ್ಚಿ, ಬೆಚ್ಚಗಾಗಿಸಿ ಮತ್ತು ರಕ್ಷಿಸಿ.  

click me!

Recommended Stories