ಬಿಲಿಯನೇರ್ ಇಶಾ ಅಂಬಾನಿ, ಮಿಡಲ್‌ ಕ್ಲಾಸ್ ಜನರಂತೆ ಈ ಕೆಲ್ಸ ಮಾಡೋಕೆ ಇಷ್ಟ ಪಡ್ತಾರಂತೆ!

First Published | Apr 18, 2024, 4:34 PM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಕೋಟಿ ಕೋಟಿ ಬೆಲೆಯ ಸೀರೆ, ಡ್ರೆಸ್‌, ಒಡವೆಗಳನ್ನು ಧರಿಸಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. ಆದರೆ ಮಿಡಲ್‌ ಕ್ಲಾಸ್ ಜನರಂತೆ ಈ ಒಂದು ಅಭ್ಯಾಸವನ್ನು ಬಿಲಿಯನೇರ್ ಇಶಾ ಅಂಬಾನಿ ಹೊಂದಿದ್ದಾರೆ ಅನ್ನೋದು ನಿಮ್ಗೊತ್ತಾ?
 

ಬಿಲಿಯನೇರ್‌ ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಕೋಟಿ ಕೋಟಿ ಬೆಲೆಯ ಸೀರೆ, ಡ್ರೆಸ್‌, ಒಡವೆಗಳನ್ನು ಧರಿಸಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. 

ಬಿಲಿಯನೇರ್‌ ಮುಕೇಶ್ ಅಂಬಾನಿಯ ಮಗಳು ಇಶಾ ಅಂಬಾನಿ ರಿಲಯನ್ಸ್‌ನ ಕೋಟಿ ಕೋಟಿ ಬಿಸಿನೆಸ್‌ನ್ನು ನಿರ್ವಹಿಸುತ್ತಾರೆ. ಬ್ಯೂಟಿ ಬ್ರ್ಯಾಂಡ್‌ಗಳ ಬಿಸಿನೆಸ್ ಮಾಡುತ್ತಾರೆ.

Tap to resize

ಆದರೆ ಮಿಡಲ್‌ ಕ್ಲಾಸ್ ಜನರಂತೆ ಈ ಒಂದು ಅಭ್ಯಾಸವನ್ನು ಬಿಲಿಯನೇರ್ ಇಶಾ ಅಂಬಾನಿ ಹೊಂದಿದ್ದಾರೆ ಅನ್ನೋದು ನಿಮ್ಗೊತ್ತಾ? ಇತ್ತೀಚಿಗೆ ವೈರ್ ಆದ ವೀಡಿಯೋದಲ್ಲಿ ಇಶಾ ಅಂಬಾನಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಇಶಾ ಅಂಬಾನಿಯ ಲಕ್ಸುರಿಯಸ್ ವಿಲ್ಲಾ, ಕಾರುಗಳು, ದುಬಾರಿ ಡ್ರೆಸ್, ಜ್ಯುವೆಲ್ಲರಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇಶಾ ಅಂಬಾನಿ ಇತ್ತೀಚಿಗೆ ತಮ್ಮ ಬಗ್ಗೆ ಕಡಿಮೆ ತಿಳಿದಿರುವ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ.

ಇತ್ತೀಚೆಗೆ, ಇಶಾ ಅಂಬಾನಿ ಪಿರಮಾಲ್ ಅವರ ಅಭಿಮಾನಿ ಪೇಜ್‌ನಲ್ಲಿ ಅವರ ಬಗ್ಗೆ ಒಂದು ವೀಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಇಶಾ ಅಂಬಾನಿ ತಮ್ಮ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದಾರೆ. 

ವ್ಯಕ್ತಿತ್ವವನ್ನು ವಿವರಿಸಲು ಕೇಳಿದಾಗ, ಇಶಾ ಅಂಬಾನಿ ನನ್ನ ವ್ಯಕ್ತಿತ್ವ ಅಂತರ್ಮುಖಿ, ಅರ್ಥಗರ್ಭಿತವಾಗಿದೆ ಎಂದರು. ನಿಮ್ಮನ್ನು ನಗಿಸುವವರು ಯಾರು ಎಂದು ಕೇಳಿದಾಗ, ಇಶಾ ಅವರ ಪತಿ ಆನಂದ್ ಅವರು ಅತ್ಯುತ್ತಮ ಹಾಸ್ಯ ಪ್ರಜ್ಞೆಯನ್ನು ಪಡೆದಿದ್ದಾರೆ ಎಂದು ಹೇಳಿದರು. 

ವೀಡಿಯೊದಲ್ಲಿ ಇಶಾ ಅಂಬಾನಿಯ ಬಳಿ ಜನರು ಆಕೆಯ ಬಗ್ಗೆ  ಹೊಂದಿರುವ ತಪ್ಪು ಕಲ್ಪನೆಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ, ಯುವ ಉದ್ಯಮಿ, ಜನರು ಯಾವಾಗಲೂ ನಾನು ಕಾಸ್ಟ್ಲೀ ಬಟ್ಟೆ ಧರಿಸುತ್ತೇನೆ ಎಂದು ಭಾವಿಸುತ್ತಾರೆ. ಆದರೆ ನಾನು ಸಾಮಾನ್ಯವಾಗಿ ಪ್ರತಿದಿನ ಕಾಟನ್ ಸಲ್ವಾರ್ ಕಮೀಜ್ ಧರಿಸುತ್ತೇನೆ ಎಂದು ತಿಳಿಸಿದರು.

ಇತ್ತೀಚಿಗೆ ಇಶಾ ಮಗಳನ್ನು ಸ್ಕೂಲ್‌ನಿಂದ ಕರೆದೊಯ್ಯಲು ಕುರ್ತಾ ಸೆಟ್ ಧರಿಸಿ ಬಂದಿದ್ದು ಸುದ್ದಿಯಾಗಿತ್ತು. ಬಿಲಿಯನೇರ್ ಮಗಳ ಸಿಂಪಲ್ ಲುಕ್ ಎಲ್ಲರ ಗಮನ ಸೆಳೆದಿತ್ತು.

Latest Videos

click me!