ಬಟ್ಟೆ ತಿಕ್ಕಿ ತಿಕ್ಕಿ ಕಷ್ಟಪಡೋದು ಬೇಡ, ಇದೊಂದನ್ನು ನೀರಿನಲ್ಲಿ ಬೆರೆಸಿ ಹಠಮಾರಿ ಕೊಳೆ ಬಿಟ್ಟು ಹೋಗುತ್ತೆ!

Published : Jun 11, 2025, 03:00 PM ISTUpdated : Jun 11, 2025, 03:03 PM IST

ಬಟ್ಟೆಗಳನ್ನು ಹೊಸದರಂತೆ ಹೊಳೆಯುವಂತೆ ಮಾಡಲು ದುಬಾರಿ ಡಿಟರ್ಜೆಂಟ್‌ಗಳ ಅವಶ್ಯಕತೆ ಇಲ್ಲ.  ಕೆಲವು ಮನೆಮದ್ದುಗಳು ಕೊಳೆಯನ್ನು ಸುಲಭವಾಗಿ ತೆಗೆಯುವುದಲ್ಲದೆ, ಕೆಟ್ಟ ವಾಸನೆಯನ್ನು ನಿವಾರಿಸುತ್ತವೆ. 

PREV
16
ಅದೆಂಥಹ ಕೊಳೆಯಿದ್ದರೂ ಮಾಯ

ಯಾರಿಗೆ ಆಗಲಿ ಕೊಳಕು ಬಟ್ಟೆಗಳನ್ನು ಸ್ವಚ್ಛಗೊಳಿಸುವುದು ದೊಡ್ಡ ತಲೆನೋವೇ ಸರಿ. ಆದರೆ ಈ ಒಂದು ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಬಟ್ಟೆ ಒಗೆಯುವುದರಿಂದ, ನಿಮ್ಮ ಬಟ್ಟೆಯಲ್ಲಿ ಅದೆಂಥಹ ಕೊಳೆಯಿದ್ದರೂ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ಬಿಡುತ್ತದೆ. ಈ ರೀತಿಯಾಗಿ ನೀವು ನಿಮ್ಮ ಬಟ್ಟೆಗಳನ್ನು ಬಹಳ ಸುಲಭವಾಗಿ ತೊಳೆಯಬಹುದು. 

26
ದುಬಾರಿ ಡಿಟರ್ಜೆಂಟ್‌ ಬೇಡ

ದುಬಾರಿ ಡಿಟರ್ಜೆಂಟ್‌ಗಳು ನಿಮ್ಮ ಬಟ್ಟೆಗಳನ್ನು ಪ್ರತಿ ಬಾರಿಯೂ ಹೊಸದಾಗಿ ಹೊಳೆಯುವಂತೆ ಮಾಡುತ್ತದೆ ಎಂದು ನೀವು ಭಾವಿಸಿದರೆ, ಇನ್ಮೇಲೆ ಪ್ರತಿ ಬಾರಿಯೂ ಇದರ ಅಗತ್ಯವಿಲ್ಲ. ಹಾಗೆ ನೋಡಿದರೆ ಕೆಲವೊಮ್ಮೆ ದುಬಾರಿ ಡಿಟರ್ಜೆಂಟ್‌ಗಳು ಸಹ ಬಟ್ಟೆಗಳ ಹೊಳಪನ್ನು ಮರಳಿ ತರಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಮನೆಮದ್ದುಗಳು ನಿಮಗೆ ಸಾಕಷ್ಟು ಸಹಾಯ ಮಾಡಬಹುದು. 

36
ಬಿಳಿ ವಿನೆಗರ್

ನಿಮ್ಮ ಬಟ್ಟೆಗಳಿಗೆ ಹೊಸ ಹೊಳಪು ತರಲು ದುಬಾರಿ ಡಿಟರ್ಜೆಂಟ್ ಬೇಡ್ವೇ ಬೇಡ. ಬದಲಿಗೆ ನೀರಿಗೆ ಬಿಳಿ ವಿನೆಗರ್ (White vinegar)ಸೇರಿಸಿ. ನಂತರ, ಈ ಮಿಶ್ರಣದಲ್ಲಿ ಕೊಳಕು ಬಟ್ಟೆಗಳನ್ನು ಹಾಕಿ ಸ್ವಲ್ಪ ಸಮಯ ಬಿಡಿ. ವಿನೆಗರ್ ಬಟ್ಟೆಯ ಎಲ್ಲಾ ಕಲೆಗಳನ್ನು ಸ್ವಚ್ಛಗೊಳಿಸುತ್ತದೆ. ಇದಲ್ಲದೆ, ಇದು ನಿಮ್ಮ ಬಟ್ಟೆಗಳನ್ನು ಮೃದುಗೊಳಿಸುತ್ತದೆ.

46
30 ನಿಮಿಷ ಬಿಡಿ

ಇದನ್ನು ಬಳಸಲು, ಮೊದಲು ಬಿಳಿ ವಿನೆಗರ್ ಅನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬಟ್ಟೆಗಳನ್ನು ಅದರಲ್ಲಿ ಹಾಕಿ 30 ನಿಮಿಷಗಳ ಕಾಲ ಬಿಡಿ. ಇದು ಬಟ್ಟೆಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತಕ್ಷಣವೇ ತೆಗೆದುಹಾಕುತ್ತದೆ. ಇದರ ನಂತರ, ಬಟ್ಟೆಗಳನ್ನು ತೆಗೆದು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. 

56
ಕೆಟ್ಟ ವಾಸನೆ ಇರಲ್ಲ

ಈ ರೀತಿ ಬಟ್ಟೆಗಳನ್ನು ತೊಳೆಯುವುದರಿಂದ, ನಿಮ್ಮ ಬಟ್ಟೆಗಳು ಸ್ವಚ್ಛವಾಗುವುದಲ್ಲದೆ, ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತವೆ. ಈ ವಿಧಾನವು ನಿಮ್ಮ ಬಟ್ಟೆಗಳಿಂದ ಕೆಟ್ಟ ವಾಸನೆಯನ್ನು ಸಹ ತೆಗೆದುಹಾಕುತ್ತದೆ. ದುಬಾರಿ ಡಿಟರ್ಜೆಂಟ್‌ಗಳು ಸಹ ಈ ಪರಿಹಾರದ ಮುಂದೆ ಠುಸ್ ಪಠಾಕಿಯಾಗುತ್ತವೆ.

66
ಅಗ್ಗದ ಮತ್ತು ಪರಿಣಾಮಕಾರಿ ವಿಧಾನ

ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ಸಹ ಬಟ್ಟೆಗಳನ್ನು ತೊಳೆಯಬಹುದು. ಸೋಡಿಯಂ ಬೈಕಾರ್ಬನೇಟ್ ಎಂದೂ ಕರೆಯಲ್ಪಡುವ ಅಡುಗೆ ಸೋಡಾ ಅದ್ಭುತವಾದ ಪರಿಹಾರ. ಇದನ್ನು ಆಹಾರದಲ್ಲಿ ಮಾತ್ರವಲ್ಲದೆ, ಅನೇಕ ವಸ್ತುಗಳನ್ನು ಶುಚಿಗೊಳಿಸಲೂ ಬಳಸಲಾಗುತ್ತದೆ. ಹಾಗಾಗಿ ಬಟ್ಟೆ ಒಗೆಯುವಲ್ಲಿ ಅಡುಗೆ ಸೋಡಾವನ್ನು ಬಳಸುವುದು ಅಗ್ಗದ ಮತ್ತು ಪರಿಣಾಮಕಾರಿ ವಿಧಾನವಾಗಿದೆ.

Read more Photos on
click me!

Recommended Stories