ಮೊದಲ ಬಾರಿಗೆ ತಾಯಿಯಾಗುವ ಮಹಿಳೆ ಈ ತಪ್ಪು ಮಾಡಬಾರದು !

First Published | Dec 9, 2022, 5:40 PM IST

ನವಜಾತ ಶಿಶುವಿನ ಪಾಲನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಮೊದಲ ಬಾರಿಗೆ ತಾಯಿಯಾಗುವ ಮಹಿಳೆಯರಿಗೆ ಹೆಚ್ಚು ತಿಳಿದಿಲ್ಲದಿದ್ದಾಗ ಹೆಚ್ಚು ಸಮಸ್ಯೆ ಉಂಟಾಗುತ್ತೆ. ಹಾಗಾಗಿ, ನೀವು ಮೊದಲ ಬಾರಿಗೆ ತಾಯಿಯಾಗುವವರಾದರೆ, ನೀವು ನವಜಾತ ಶಿಶುವಿನ ಆರೈಕೆ ಮಾಡೋದು ಹೇಗೆ ಅನ್ನೋದನ್ನು ತಿಳಿದಿರಬೇಕು.

ಮನೆಯಲ್ಲಿ ಮಗು (Child) ಜನಿಸಿದ ತಕ್ಷಣ, ಕುಟುಂಬ ಪೂರ್ಣಗೊಳ್ಳುತ್ತೆ. ಆದರೆ ಮಗುವಿನ ಬಗ್ಗೆ ಪೋಷಕರ ಅನೇಕ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ವಿಶೇಷವಾಗಿ ಮೊದಲ ಬಾರಿಗೆ ತಾಯಿಯಾಗುತ್ತಿರುವಾಗ. ನವಜಾತ ಶಿಶುವು ತುಂಬಾ ದುರ್ಬಲವಾಗಿರುತ್ತೆ. ಮಗುವಿಗೆ ಪ್ರೀತಿಯ ಜೊತೆಗೆ ಸಾಕಷ್ಟು ಕಾಳಜಿಯ ಅಗತ್ಯವಿದೆ. ಈ ಪುಟಾಣಿ ಮಕ್ಕಳ ಆರೈಕೆ ಮಾಡುವಲ್ಲಿ ಸಣ್ಣ ತಪ್ಪಾದರೂ ಮಗುವಿಗೆ ತೊಂದರೆಯಾಗುತ್ತದೆ. ಹಾಗಾದರೆ ಮಕ್ಕಳನ್ನು ಸಾಕುವ ಸರಿಯಾದ ವಿಧಾನ ಯಾವುವು ನೋಡೋಣ.

ಚಿಕ್ಕ ಮಕ್ಕಳ ಇಮ್ಮ್ಯೂನ್ ಸಿಸ್ಟಮ್ (Immune system) ದುರ್ಬಲವಾಗಿರೋದ್ರಿಂದ , ಅವರು ಬೇಗ ರೋಗಗಳಿಗೆ ತುತ್ತಾಗುತ್ತಾರೆ. ನವಜಾತ ಶಿಶುವಿನ ಪಾಲನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಮೊದಲ ಬಾರಿಗೆ ತಾಯಿಯಾಗುವಂತ ಮಹಿಳೆ ಹೆಚ್ಚು ತಿಳಿದಿಲ್ಲದಿದ್ದಾಗ ಸಮಸ್ಯೆ ಉಲ್ಬಣಗೊಳ್ಳುತ್ತೆ. ಹಾಗಾಗಿ, ಮೊದಲ ಬಾರಿಗೆ ತಾಯಿಯಾದರೆ, ನವಜಾತ ಶಿಶುವಿನ ಆರೈಕೆಗೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. 

Tap to resize

ನವಜಾತ ಶಿಶುವನ್ನು ನೋಡಿಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ-

ಶುಚಿತ್ವ(Cleanliness) - 
ನವಜಾತ ಶಿಶುವಿನ ರೋಗ ನಿರೋಧಕ ಶಕ್ತಿ ದುರ್ಬಲವಾಗಿರೋದ್ರಿಂದ, ಮಗು ಬೇಗನೆ ರೋಗಗಳಿಗೆ ತುತ್ತಾಗುತ್ತಾನೆ. ಹಾಗಾಗಿ, ಮಗುವಿನ ಮತ್ತು ಅವನ ಸುತ್ತಮುತ್ತಲಿನ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಒಬ್ಬ ವ್ಯಕ್ತಿ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದರೆ, ಆಗ ಅವನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಮಗುವನ್ನು ಮೇಲೆತ್ತಬೇಕು. ಇದಲ್ಲದೆ, ಮಗುವನ್ನು ಅನಾರೋಗ್ಯ(Unhealthy) ಪೀಡಿತ ವ್ಯಕ್ತಿಯಿಂದ ದೂರವಿಡಿ, ನೀವು ಅಥವಾ ಬೇರೆ ಯಾರೂ ಮಗುವನ್ನು ಚುಂಬಿಸಲು ಬಿಡಬೇಡಿ. ಮಗುವಿಗೆ ಹೆಚ್ಚು ಪರಿಮಳಯುಕ್ತ ವಸ್ತುಗಳನ್ನು ಬಳಸಬೇಡಿ. ಇದು ಮಗುವಿಗೆ ಹಾನಿಕಾರಕವಾಗಬಹುದು.  

ಸಕಾಲಿಕ ಲಸಿಕೆ(Vaccination)-

ಮಗುವನ್ನು ರೋಗಗಳಿಂದ ದೂರವಿರಿಸಲು ಕಾಲ ಕಾಲಕ್ಕೆ ಲಸಿಕೆ ಪಡೆಯೋದು ಬಹಳ ಮುಖ್ಯ. ಮಗುವಿಗೆ ಒಂದೇ ಒಂದು ಲಸಿಕೆಯನ್ನು ಬಿಡಬೇಡಿ, ಕಾಲಕಾಲಕ್ಕೆ ವೈದ್ಯರು ಸೂಚಿಸಿದ ಲಸಿಕೆಗಳನ್ನು ಖಂಡಿತವಾಗಿಯೂ ಪಡೆಯಿರಿ.
 

ಮಗುವಿನ ಅಳು(Cry)-

ಮಗುವಿನ ಅಳು ಹಸಿವು ಮತ್ತು ನಿದ್ರೆಗೆ ಸಂಬಂಧಿಸಿದೆ. ಆದರೆ ಮಗುವಿನ ಅಳುವಿಕೆಗೆ ಇತರ ಅನೇಕ ಕಾರಣಗಳು ಸಹ ಕಾರಣವಾಗಬಹುದು ಎಂದು ಹೊಸ ತಾಯಿ ಅರ್ಥಮಾಡಿಕೊಳ್ಳಬೇಕು. ಹಸಿವು ಅಥವಾ ನಿದ್ರೆಯ ಕಾರಣದಿಂದಾಗಿ ಮಗು ಪ್ರತಿ ಬಾರಿಯೂ ಅಳುವ ಅಗತ್ಯವಿಲ್ಲ. ಹಾಗಾಗಿ, ತಾಯಿ ಜಾಗರೂಕರಾಗಿರಬೇಕು. ಮಗು ಏಕೆ ಅಳುತ್ತಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಒದ್ದೆ ಮತ್ತು ಕಿಬ್ಬೊಟ್ಟೆ ನೋವಿನಿಂದಾಗಿ ಮಗು ಅನೇಕ ಬಾರಿ ಅಳುತ್ತೆ. ಮಗು ದೀರ್ಘಕಾಲದವರೆಗೆ ಡೈಪರ್ ಧರಿಸಿದ್ರೂ ಸಹ, ಕಿರಿಕಿರಿ ಉಂಟಾಗಿ ಅಳಲು ಪ್ರಾರಂಭಿಸಬಹುದು. 

ಮಗುವಿನ ಮಸಾಜ್ (Massage)

ಮಗುವಿನ ಬೆಳವಣಿಗೆ ಮತ್ತು ಆರೈಕೆಗಾಗಿ, ಪ್ರತಿದಿನ ಬೇಬಿ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡಬೇಕು. ಇದು ಮಗುವಿನ ಮೂಳೆಗಳನ್ನು ಬಲಪಡಿಸುತ್ತೆ. ನೀವು ದಿನಕ್ಕೆ ಎರಡು ಬಾರಿ ಮಗುವಿಗೆ ಮಸಾಜ್ ಮಾಡಬಹುದು. ಇದನ್ನು ಮಾಡುವಾಗ, ಹಗುರವಾದ ಕೈಗಳಿಂದ ಮಗುವಿಗೆ ಮಸಾಜ್ ಮಾಡಬೇಕು ಅನ್ನುದನ್ನು ನೆನಪಿನಲ್ಲಿಡಿ. 

ತಾಯಿ ಮತ್ತು ಮಗುವಿನ ಆಹಾರ ಕ್ರಮ

ನವಜಾತ ಶಿಶು ಸಂಪೂರ್ಣವಾಗಿ ತಾಯಿಯ ಹಾಲಿನ ಮೇಲೆ ಅವಲಂಬಿತವಾಗಿರುತ್ತೆ. ಹಾಗಾಗಿ, ತಾಯಿಯ ಆಹಾರವು ಸಮತೋಲನ ಮತ್ತು ಪೌಷ್ಟಿಕವಾಗಿರೋದು ಬಹಳ ಮುಖ್ಯ. ಮಗುವಿಗೆ ಕೆಟ್ಟ ಪರಿಣಾಮ ಬೀರದಂತೆ ತಾಯಿ ತನ್ನ ಆಹಾರದ (Food) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಆಹಾರದಲ್ಲಿ ಡ್ರೈ ಫ್ರೂಟ್ಸ್, ಓಟ್ ಮೀಲ್ ನಂತಹ ಪೌಷ್ಟಿಕ ಆಹಾರಗಳನ್ನು ಸೇರಿಸಬೇಕು. ಇದರಿಂದ ಮಗುವಿಗೆ ಸಾಕಷ್ಟು ಹಾಲು ಸಿಗುತ್ತೆ.    

Latest Videos

click me!