ದಶಲಕ್ಷ ಫಾಲೋವರ್ಸ್ ಪಡೆದ ಸೌತ್‌ನ ಮೊದಲ ಮಹಿಳಾ ರಾಜಕಾರಣಿ..! ಹಿಂದಿದ್ದಾರೆ ರಮ್ಯಾ

First Published | Sep 21, 2020, 6:42 PM IST

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮಾಜಿ ಸಂಸದೆ ಕಲ್ವಕುಂಟ್ಲ ಕವಿತಾ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 10 ಲಕ್ಷದ ಗಡಿ ಮುಟ್ಟಿದೆ.

ಮಾಜಿ ಸಂಸದೆ ಕಲ್ವಕುಂಟ್ಲ ಕವಿತಾ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 10 ಲಕ್ಷದ ಗಡಿ ಮುಟ್ಟಿದೆ.
ಈ ಮೂಲಕ ಕವಿತಾ ಅವರು ದಶಲಕ್ಷ ಫಾಲೋವರ್ಸ್ ಸಂಪಾದಿಸಿದ ದಕ್ಷಿಣ ಭಾರತದ ಮೊದಲ ಮಹಿಳಾ ರಾಜಕಾರಣಿಯಾಗಿ ಮೂಡಿ ಬಂದಿದ್ದಾರೆ.
Tap to resize

ನಾವು ದಶಲಕ್ಷ ಆಗಿದ್ದೇವೆ. ನಿಮ್ಮೆಲ್ಲೆ ಬೆಂಬಲಕ್ಕೆ ಧನ್ಯವಾದ ಎಂದು ಅವರು ಬರೆದಿದ್ದಾರೆ.
ನಾವು ದಶಲಕ್ಷ ಆಗಿದ್ದೇವೆ. ನಿಮ್ಮೆಲ್ಲೆ ಬೆಂಬಲಕ್ಕೆ ಧನ್ಯವಾದ ಎಂದು ಅವರು ಬರೆದಿದ್ದಾರೆ.
ಮಂಡ್ಯದ ಮಾಜಿ ಸಂಸದೆ ನಟಿ ದಿವ್ಯ ಸ್ಪಂದನ(ರಮ್ಯಾ)ಗೆ 831.1 ಸಾವಿರ ಫಾಲೋವರ್ಸ್ ಇದ್ದಾರೆ
ಡ್ರಾವಿಡ ಮುನ್ನೇಟ್ರ ಕಳಗಂನ ಕನಿಮೊಳಿಗೆ 524 ಸಾವಿರ ಫಾಲೋವರ್ಸ್, ತಮಿಳುನಾಡಿದ ಕರೂರ್ ಕ್ಷೇತ್ರದ ಸಂಸದೆ ಜ್ಯೋತಿಮಣಿ ಸೆನ್ನಿಮಲೈಗೆ 122 ಸಾವಿರ ಫಾಲೋವರ್ಸ್ ಇದ್ದಾರೆ.
ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್‌ಗೆ 1 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವರು ಪ್ರಸಿದ್ಧ ನಟಿಯೂ ಆಗಿರುವುದು ಇದಕ್ಕೆ ಕಾರಣವಿರಬಹುದು.
ಕೊರೋನಾದಿಂದಾಗಿ ಜನರು ಪರಸ್ಪರ ಭೇಟಿಯಾಗಲು ಸಾಧ್ಯವಾಗದ ಕಾರಣ ಇದೀಗ ಸೋಷಿಯಲ್ ಮೀಡಿಯಾ ಸಂವಹನ ಹೆಚ್ಚಾಗಿದೆ.
ನಾನು ಸೋಷಿಯಲ್ ಮೀಡಿಯಾ ಮೂಲಕವೇ ಈಗ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ.
ಜನರೊಂದಿಗೆ ಕಾಂಟಾಕ್ಟ್‌ನಲ್ಲಿದ್ದು, ಅವರ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಆಲಿಸುತ್ತಿದ್ದೇನೆ ಎಂದಿದ್ದಾರೆ ಕವಿತಾ.
2014-18ರಲ್ಲಿ ನಿಝಾಮಾಬಾದ್ ಕ್ಷೇತ್ರ ಪ್ರತಿನಿಧಿಸಿದ್ದ ಕವಿತಾ ಅವರು 2008ರಿಂದಲೂ ಪ್ರತ್ಯೇಕ ತೆಲಂಗಾಣ ಅಭಿಯಾನದಲ್ಲಿ ಸಕ್ರಿಯರಾಗಿದ್ದರು.
ಅಭಿಯಾನ ಜೋರಾಗಿದ್ದ ಸಂದರ್ಭ 2010ರಲ್ಲಿ ಟ್ವಿಟರ್‌ಗೆ ಸೇರಿದೆ. ತೆಲಂಗಾಣ ರಾಜ್ಯ ಬೇಕೆನ್ನುವ ವಿಷಯಗಳನ್ನು ತಿಳಿಸಲು ಟ್ವಿಟರ್ ಬಳಸುತ್ತಿದ್ದೆ ಎಂದಿದ್ದಾರೆ.

Latest Videos

click me!