67ರ ಹರೆಯದಲ್ಲೂ ಚಿರಯೌವ್ವನೆ, ರೇಖಾ ಬ್ಯೂಟಿ ಸೀಕ್ರೇಟ್ ಏನು?

First Published Sep 23, 2022, 3:03 PM IST

ರೇಖಾ..ಬಾಲಿವುಡ್‌ನಲ್ಲಿ ಚಿರಯೌವ್ವನೆ ಎಂದು ಕರೆಸಿಕೊಳ್ಳೋ ನಟಿ.  67ರ ಹರೆಯದಲ್ಲೂ 20ರ ತರುಣಿಯಂತೆ ಸುಂದರವಾಗಿದ್ದಾರೆ. ಯಾವಾಗ್ಲೂ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವ ರೇಖಾ ಬ್ಯೂಟಿ ಸೀಕ್ರೆಟ್ ಏನು ? ತಿಳಿಯೋ ಕುತೂಹಲ ನಿಮ್ಗೂ ಇದೆಯಲ್ವಾ ? ಇಲ್ಲಿದೆ ಮಾಹಿತಿ.

ರೇಖಾ ಬಾಲಿವುಡ್‌ನ ಬಂಗಾರದ ಬೆಡಗಿ..ಲಕ್ಷಾಂತರ ಅಭಿಮಾನಿಗಳ ಹೃದಯದ ರಾಣಿ. 67ರ ಹರೆಯದಲ್ಲೂ ರೇಖಾ ಸೌಂದರ್ಯ ಮರೆಯಾಗಿಲ್ಲ. ಸುಂದರ ನಗುವಿನೊಂದಿಗೆ ಎಲ್ಲರನ್ನೂ ಸೆಳೆಯುವ ಅದೇ ರೂಪವನ್ನು ಹೊಂದಿದ್ದಾರೆ. ರೇಖಾ ಅವರ ನಿಜವಾದ ಹೆಸರು ಭಾನುರೇಖಾ ಗಣೇಶನ್. ಅವರು ತನ್ನ ನಿಯಮಿತ ಜೀವನಶೈಲಿ, ಆಹಾರ ಮತ್ತು ವ್ಯಾಯಾಮದಿಂದ ಯಾವಾಗಲೂ ಯಂಗ್ ಆಗಿ ಕಾಣಿಸುತ್ತಾರೆ. 67ರ ಹರೆಯದಲ್ಲೂ 20ರ ಯುವತಿಯಂತೆ ಕಾಣುತ್ತಿರುವ ರೇಖಾ ಸೌಂದರ್ಯದ ಗುಟ್ಟೇನು ತಿಳಿಯೋಣ.

ಹೆಚ್ಚು ನೀರು ಕುಡಿಯಿರಿ
67ರ ಹರೆಯದಲ್ಲೂ ಯಂಗ್‌ ಆಂಡ್ ಬ್ಯೂಟಿಫುಲ್‌ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಾರೆ. ಈ ವಯಸ್ಸಿನಲ್ಲೂ, ಆಕೆಯ ಆರೋಗ್ಯಕರ ಚರ್ಮವು ಅನೇಕ ಜನರಿಗೆ ಸ್ಫೂರ್ತಿ ನೀಡುತ್ತದೆ. ಇದಕ್ಕೆ ಕಾರಣವೇನು ಗೊತ್ತಾ? ನಟಿ ರೇಖಾ ದೇಹವನ್ನು ಯಾವಾಗಲೂ ಹೈಡ್ರೀಕರಿಸಿದಂತೆ ನೋಡಿಕೊಳ್ಳುತ್ತಾಳೆ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಚರ್ಮ ಹೆಚ್ಚು ಕಾಂತಿಯುತವಾಗಿ ಕಂಗೊಳಿಸುತ್ತದೆ.

ಕಡಿಮೆ ಆಹಾರ ಸೇವಿಸಿ
ರೇಖಾ ಅವರು ಎಲ್ಲಾ ರೀತಿಯ ಪೋಷಕಾಂಶಗಳೊಂದಿಗೆ ಸರಳವಾದ ಆಹಾರವನ್ನು ತಿನ್ನಲು ಬಯಸುತ್ತಾರೆ. ಪ್ರತಿದಿನ ಅವರ ಆಹಾರದಲ್ಲಿ ಸಲಾಡ್‌ಗಳು, ತರಕಾರಿಗಳು, ಚಪಾತಿ, ಅನ್ನ ಮತ್ತು ಬೇಳೆಕಾಳುಗಳು ಇದ್ದೇ ಇರುತ್ತವೆ. ಹಸಿರು ತರಕಾರಿಗಳು ಮತ್ತು ಬೇಳೆ ಕಾಳುಗಳಿಗೆ ರೇಖಾ ತಮ್ಮ ಆಹಾರದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಎಣ್ಣೆಯುಕ್ತ ಆಹಾರ, ಜಂಕ್ ಫುಡ್ಸ್ ಬೇಡ
ರೇಖಾ ಎಣ್ಣೆಯುಕ್ತ ಆಹಾರಗಳು ಮತ್ತು ಜಂಕ್ ಫುಡ್‌ಗಳಿಂದ ದೂರವಿರುತ್ತಾರೆ. ಅದಕ್ಕಾಗಿಯೇ ಅವರು ಉತ್ತಮ ರೀತಿಯ ದೇಹದ ಆಕಾರವನ್ನು ಹೊಂದಿದ್ದಾರೆ. ಈ ಸರಳ, ಆರೋಗ್ಯಕರ ಆಹಾರ ಯೋಜನೆಯು ಅವರನ್ನು ಸಾರ್ವಕಾಲಿಕವಾಗಿ ಶಕ್ತಿಯುತವಾಗಿರಿಸುತ್ತದೆ. ವಯಸ್ಸನ್ನು ತೋರಿಸುವುದಿಲ್ಲ.

ನಿಯಮಿತ ವ್ಯಾಯಾಮ
ದೇಹ ಸುಂದರವಾಗಿರಲು ಯಾವಾಗಲೂ ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ರೇಖಾ ಮನೆಯಲ್ಲೇ ಸರಳವಾದ ವ್ಯಾಯಾಮಗಳನ್ನು ಮಾಡುತ್ತಾರೆ. ಪ್ರತಿದಿನ 10-15 ನಿಮಿಷಗಳ ಕಾಲ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ಇವುಗಳ ಹೊರತಾಗಿ, ಅವರು ತೋಟಗಾರಿಕೆಯನ್ನು ಪ್ರೀತಿಸುತ್ತಾರೆ. ನೃತ್ಯವು ಅವರ ನೆಚ್ಚಿನ ಹವ್ಯಾಸವಾಗಿದೆ. ಈ ಎಲ್ಲಾಅಭ್ಯಾಸಗಳ ಮೂಲಕ ರೇಖಾ ಯಂಗ್‌ ಅಂಡ್ ಎನರ್ಜಿಟಿಕ್, ಚಿರಯೌವ್ವನೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ರಾತ್ರಿ ಊಟ ಬೇಗನೇ ಮುಗಿಸಿ
ಬೇಗ ವಯಸ್ಸಾಗದಂತೆ ಕಾಣಲು ನಾವು ಆರೋಗ್ಯವಾಗಿರಬೇಕು. ಆರೋಗ್ಯಕರವಾಗಿರಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ಮರೆಯಬಾರದು. ಅದರಲ್ಲೂ ರಾತ್ರಿಯ ಊಟವನ್ನು ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಮಾಡುವುದು ಒಳ್ಳೆಯದು. ರೇಖಾ ಸಹ ರಾತ್ರಿಯ ಊಟವನ್ನು ಬೇಗ ಮುಗಿಸುತ್ತಾರೆ. 7.30 ರ ಹೊತ್ತಿಗೆ ತನ್ನ ಭೋಜನವನ್ನು ಮುಗಿಸುತ್ತಾರೆ. ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ 2-3 ಗಂಟೆಗಳ ಅಂತರ ಇರುವಂತೆ ನೋಡಿಕೊಳ್ಳುತ್ತಾರೆ.

ಊಟದೊಂದಿಗೆ ಮೊಸರು ಸೇವನೆ
ಯಾವುದೇ ರೀತಿಯ ಆಹಾರ ಸೇವಿಸುವುದಾದರೂ ಕೊನೆಯಲ್ಲಿ ಮೊಸರನ್ನು ತಿನ್ನುವ ಅಭ್ಯಾಸ ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ತಿಂದ ಆಹಾರ ಬೇಗನೇ ಕರಗುವುದರಿಂದ ಬೊಜ್ಜು ಉಂಟಾಗುತ್ತದೆ ಎಂಬ ಭಯವಿಲ್ಲ. ರೇಖಾ ತಮ್ಮ ದೈನಂದಿನ ಆಹಾರದಲ್ಲಿ ಮೊಸರು ಅತ್ಯಗತ್ಯವಾಗಿ ಬಳಸಿಕೊಳ್ಳುತ್ತಾರೆ.ಮುಖ್ಯ ಕೋರ್ಸ್ ಅನ್ನು ಮೊಸರಿನೊಂದಿಗೆ ಮುಗಿಸಲು ಇಷ್ಟಪಡುತ್ತಾರೆ.
 

ಹೆಚ್ಚಿನ ಪ್ರಮಾಣದಲ್ಲಿ ದಾಳಿಂಬೆ ಸೇವನೆ
ತಿಂಡಿಗಳ ವಿಚಾರಕ್ಕೆ ಬಂದರೆ ನಟಿ ರೇಖಾ ಜಂಕ್ ಫುಡ್ ಗಳ ಮೊರೆ ಹೋಗುವುದೇ ಇಲ್ಲ. ವಾಲ್ ನಟ್ಸ್ ಮತ್ತು ದಾಳಿಂಬೆ ಬೀಜಗಳನ್ನು ಹೆಚ್ಚು ತಿನ್ನುತ್ತಾರೆ. ದಾಳಿಂಬೆ ಬೀಜ ಹಲವು ಪೋಷಕಾಂಶಗಳನ್ನು ಹೊಂದಿದ್ದು ಇದರಿಂದ ದೇಹವು ಉತ್ಸಾಹ ಮತ್ತು ಸಂತೋಷದಿಂದ ಕೂಡಿರುತ್ತದೆ. 

ಸಸ್ಯಾಹಾರ ಮಾತ್ರ ಸೇವನೆ
ರೇಖಾ ಹಾರ್ಡ್ ಕೋರ್ ಸಸ್ಯಾಹಾರಿ. ಅವರು ಅಪ್ಪಿತಪ್ಪಿಯೂ ತಮ್ಮ ಆಹಾರದಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಸರಳವಾದ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಆಹಾರದಲ್ಲಿ ಹಸಿರು, ಸೊಪ್ಪು ತರಕಾರಿಗಳು ಮತ್ತು ಧಾನ್ಯಗಳನ್ನು ಹೆಚ್ಚು ಸೇರಿಸುತ್ತಾರೆ.
 

click me!