ಕಳೆದೆರಡು ವರ್ಷಗಳಲ್ಲಿ ಲುಕ್ಕೇ ಬದಲಾಯ್ತು; ಗುಂಡಮ್ಮನಿಂದ ಬಾರ್ಬಿ ಡಾಲ್‌ ಲುಕ್‌ಗೆ ಇಶಾ ಅಂಬಾನಿ ಪಯಣ

First Published Jun 22, 2024, 4:14 PM IST

ಹೇಗಿದ್ದ ಇಶಾ ಅಂಬಾನಿ ಹೇಗಾದ್ರು ನೋಡಿ.. ಮನಸ್ಸು ಮಾಡಿದರೆ ನಮ್ಮ ಬೆಸ್ಟ್ ವರ್ಶನ್ ಆಗೋದು ಕಷ್ಟವಲ್ಲ ಎಂದು ಸಾಧಿಸಿ ತೋರಿಸಿದ್ದಾರೆ ಇಶಾ. ಬಾಲಿವುಡ್ ನಟಿಯರಿಗೇ ಸ್ಪರ್ಧೆ ಒಡ್ಡುವಂತೆ ಲುಕ್ಕು, ಸ್ಟೈಲ್ ಬದಲಿಸಿಕೊಂಡ ಇಶಾ ಅಂಬಾನಿ

ನಂತ್ ಅಂಬಾನಿ ತೂಕ ಇಳಿಸುವ ಪ್ರಯಾಣದ ಸುದ್ದಿಯನ್ನು ನೀವು ಅನೇಕ ಬಾರಿ ಓದಿರಬೇಕು, ಆದರೆ ಅವರ ಸಹೋದರಿ ಇಶಾ ಅಂಬಾನಿ ಕೂಡ ತಮ್ಮ ಕಠಿಣ ಪರಿಶ್ರಮ ಮತ್ತು ಬಲವಾದ ಇಚ್ಛಾಶಕ್ತಿಯ ಸಹಾಯದಿಂದ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಷ್ಟೇ ಅಲ್ಲ, ಲುಕ್ಕನ್ನೂ ಬದಲಿಸಿಕೊಂಡಿದ್ದಾರೆ.

ಅನಂತ್ ರಾಧಿಕಾ ವಿವಾಹಪೂರ್ವ ಸಮಾರಂಭಗಳು ನಡೆದಾಗೆಲ್ಲ ಹೆಚ್ಚು ಸುದ್ದಿಯಾಗಿದ್ದು ಇಶಾ ಅಂಬಾನಿಯ ಸೌಂದರ್ಯ, ಫ್ಯಾಶನ್.. ಆದರೆ, ಆಕೆ ಈ ರೂಪಾಂತರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. 

ಎಷ್ಟೇ ದುಡ್ಡಿದ್ದರೂ, ನಮ್ಮ ಬದಲಾವಣೆಗಾಗಿ ನಾವು ಕಷ್ಟಪಡಲೇಬೇಕು, ಯಾವುದೂ ಸುಲಭಕ್ಕೆ ದಕ್ಕುವುದಿಲ್ಲ ಎಂಬುದಕ್ಕೆ ಇಶಾ ಅಂಬಾನಿ ಉದಾಹರಣೆ. 

ಒಂದೊಮ್ಮೆ ದಪ್ಪಗಿದ್ದು ಸೌಂದರ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಇಶಾ ಅಂಬಾನಿ ಕಳೆದ 3-4 ವರ್ಷಗಳಲ್ಲಿ ಲುಕ್ ಕಡೆ ಗಮನ ಹರಿಸಿ ಸಾಕಷ್ಟು ಬದಲಾಗಿದ್ದಾರೆ. 

ಇಲ್ಲಿರುವ ಹುಡುಗಿಯನ್ನು ನೋಡಿದರೆ, ಇಂದು ಬಾಲಿವುಡ್ ಬೆಡಗಿಯರೂ ಸ್ಟೈಲ್, ಫ್ಯಾಶನ್‌ಗಾಗಿ ಇವರತ್ತ ನೋಡುತ್ತಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ, ಇಶಾ ಈಗ ಹೊಸ ಫ್ಯಾಶನ್ ಐಕಾನ್ ಆಗಿದ್ದಾರೆ. 

ಇಲ್ನೋಡಿ, ಅನಂತ್ ರಾಧಿಕಾ ಕ್ರೂಸ್ ಪಾರ್ಟಿಯಲ್ಲಿ ಇಶಾ ಅಂಬಾನಿಯ ಲುಕ್. ಮೇಲಿನ ಚಿತ್ರಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆಯಲ್ಲವೇ?

ರಿಲಯನ್ಸ್ ರಿಟೇಲ್‌ನ ಮುಖ್ಯಸ್ಥೆಯಾಗಿರುವ ಇಶಾ ವ್ಯಾಪಾರ ವಲಯದಲ್ಲಿ ಹೆಸರು ಮಾಡುವುದಲ್ಲದೆ, ನಿಧಾನವಾಗಿ ಸೆಲೆಬ್ರಿಟಿ ಸ್ಥಾನಮಾನವನ್ನೂ ಪಡೆಯುತ್ತಿದ್ದಾರೆ. ಆಕೆಯ ಫ್ಯಾಶನ್ ಸೆನ್ಸ್ ಅನ್ನು ಹೆಚ್ಚಾಗಿ ಹೊಗಳಲಾಗುತ್ತಿದೆ. 

ಇಶಾ ಈ ಲುಕ್‌ಗೆ ಬರಲು ಏನೆಲ್ಲ ಮಾಡಿದರು, ಆಹಾರ, ವ್ಯಾಯಾಮ, ಸ್ಟೈಲ್ ಸೆನ್ಸ್ ಎಲ್ಲದರಲ್ಲೂ ಹೇಗೆ ಬದಲಾವಣೆ ತಂದುಕೊಂಡರು ನೋಡೋಣ. 

ಇಶಾ ಮೊದಲು ತೂಕ ಕಳೆದುಕೊಳ್ಳುವುದರತ್ತ ಗಮನ ಹರಿಸಿ ಜಿಮ್ ಕಡೆ ಮುಖ ಮಾಡಿದರು. ಆಕಾಶ್ ಅಂಬಾನಿ ಜೊತೆಗೆ ಜಿಮ್‌ನಲ್ಲಿ ಸಾಕಷ್ಟು ಬೆವರು ಸುರಿಸಿದರು. 

ಇತ್ತ ಡಯಟ್ ಕಡೆಗೂ ಗಮನ ಹರಿಸಿದ ಇಶಾ, ಆರೋಗ್ಯಯುತ ಸಸ್ಯಾಹಾರವನ್ನಷ್ಟೇ ಮಿತಿಯಲ್ಲಿ ಸೇವಿಸುವುದನ್ನು ಆರಂಭಿಸಿದರು. ಇದರಿಂದ ರೂಪ ಬದಲಾವಣೆ ಬರುತ್ತಿದ್ದಂತೆ ಅರಲ್ಲಿ ಮೋಟಿವೇಶನ್ ಹೆಚ್ಚಿತು. 

ಇಶಾ ಅಂಬಾನಿ ತಮ್ಮ ತೂಕವನ್ನು ಕಾಪಾಡಿಕೊಳ್ಳಲು ತೂಕ ತರಬೇತಿ, ಯೋಗ ಮತ್ತು ಉತ್ತಮ ಆಹಾರ ಕ್ರಮವನ್ನು ತಪ್ಪದೇ ಅನುಸರಿಸುತ್ತಾರೆ.

ಸಣ್ಣಗಾಗುತ್ತಿದ್ದಂತೆಯೇ ಇಶಾ ಫ್ಯಾಶನ್ ಆಯ್ಕೆಗಳು ಬದಲಾದವು. ಅವು ಹೆಚ್ಚು ಬೋಲ್ಡ್ ಆದವು. ಇಶಾಗಾಗಿಯೇ ಪರ್ಸನಲ್ ಫ್ಯಾಶನ್ ಡಿಸೈನರ್ ಜೊತೆಯಾದರು. ಅಂತೂ ತಮ್ಮನ ಮದುವೆಯ ಹೊತ್ತಿಗೆ ಇಶಾ ಜಗತ್ತೇ ಆಕೆಯ ಸೌಂದರ್ಯ, ಫ್ಯಾಶನ್ ಪ್ರಶಂಸಿಸುವ ಮಟ್ಟಿಗೆ ಬದಲಾಗುವಲ್ಲಿ ಯಶಸ್ವಿಯಾದರು. 

Latest Videos

click me!