ಗರ್ಭಧಾರಣೆಯ ನಂತರ ಕರಿಯರ್ ಆರಂಭಿಸೋದು ಹೇಗೆ?

First Published Jan 26, 2023, 10:30 AM IST

ಗರ್ಭಧಾರಣೆಯ ಅವಧಿಯು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬಹಳ ವಿಶೇಷವಾಗಿದೆ. ತಾಯಿಯಾದ ನಂತರ, ಪ್ರತಿಯೊಬ್ಬ ಮಹಿಳೆಯ ಜೀವನವು ಬದಲಾಗುತ್ತದೆ, ವಿಶೇಷವಾಗಿ ಕೆಲಸ ಮಾಡುವ ಮಹಿಳೆಯ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಅದರಲ್ಲಿ ವೃತ್ತಿ ಜೀವನದ ಬದಲಾವಣೆ ಕೂಡ ಒಂದು. ಹಾಗಿದ್ರೆ ಗರ್ಭಧಾರಣೆ ಬಳಿಕ ವೃತ್ತಿ ಜೀವನ ಮರುಪ್ರಾಂಭಿಸೋದು ಹೇಗೆ ಅನ್ನೋದನ್ನು ನೋಡೋಣ. 

ಮಹಿಳೆಯರು ಗರ್ಭ ಧರಿಸಿದಾಗ, ಜೀವನದಲ್ಲಿ ಅನೇಕ ಬದಲಾವಣೆ ಉಂಟಾಗುತ್ತೆ. ಅದರಲ್ಲಿ ವೃತ್ತಿ ಜೀವನದ (career life after delivery) ಬದಲಾವಣೆ ಕೂಡ ಒಂದು. ಅನೇಕ ಮಹಿಳೆಯರ ವೃತ್ತಿಜೀವನವು ವಿರಾಮ ತೆಗೆದುಕೊಳ್ಳುತ್ತದೆ. ಆಗಾಗ್ಗೆ, ಉದ್ಯೋಗಸ್ಥ ಮಹಿಳೆಯರು ತಮ್ಮ ಗರ್ಭಧಾರಣೆಯ ನಂತರ ಕುಟುಂಬ ಮತ್ತು ವೃತ್ತಿಜೀವನದ ನಡುವೆ ಆಯ್ಕೆ ಮಾಡಬೇಕಾಗುತ್ತದೆ. ವರ್ಷಗಳ ಅಧ್ಯಯನ ಮತ್ತು ಕಠಿಣ ಪರಿಶ್ರಮದ ನಂತರ ಕೆಲಸವನ್ನು ತೊರೆಯುವ ಆಲೋಚನೆ ಮಹಿಳೆಯರನ್ನು ಕುಗ್ಗಿಸುತ್ತೆ ನಿಜಾ. ಆದರೆ ಬದಲಾವಣೆ ಮಾಡಬೇಕಾದ್ದು ಅಷ್ಟೇ ಸತ್ಯ. 

ಅನೇಕ ಮಹಿಳೆಯರು ಗರ್ಭಧಾರಣೆಯ ನಂತರವೂ ತಮ್ಮ ವೃತ್ತಿಜೀವನ ಪ್ರಾರಂಭಿಸಲು ಯೋಚಿಸುತ್ತಾರೆ. ಆದರೆ ಗರ್ಭಧಾರಣೆಯ ನಂತರ ತನ್ನ ವೃತ್ತಿಜೀವನವನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಚಿಂತೆ ಇದ್ದೇ ಇರುತ್ತೆ. ಹೆರಿಗೆಯ ನಂತರ ವೃತ್ತಿಜೀವನವನ್ನು ಮರುಪ್ರಾರಂಭಿಸಲು ನೀವು ಬಯಸಿದರೆ, ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಮತ್ತೆ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಹೇಗೆ ಅನ್ನೋದನ್ನು ತಿಳಿಯೋಣ.

ಗರ್ಭಧಾರಣೆಯ ನಂತರ ವೃತ್ತಿಜೀವನವನ್ನು ಮರುಪ್ರಾರಂಭಿಸುವುದು ಹೇಗೆ?
ಕರೋನಾ ಸೋಂಕಿನ ನಂತರ (corona virus), ಮನೆಯಿಂದ ಕೆಲಸ ಮಾಡುವ ಸಂಸ್ಕೃತಿಯೂ ಪ್ರಾರಂಭವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ, ಮಹಿಳೆಯರು ತಮ್ಮ ಮನೆಯಲ್ಲಿಯೇ ಉಳಿದುಕೊಂಡು ತಮ್ಮ ಕೆಲಸ ಮುಂದುವರಿಸಬಹುದು. 
 

ಹೆರಿಗೆಯ ನಂತರ ನೀವು ಮಗುವಿನ ಆರೈಕೆಯೊಂದಿಗೆ ಕೆಲಸ ಮಾಡಲು ಬಯಸಿದರೆ, ನೀವು ಮನೆಯಿಂದ ಸುಲಭವಾಗಿ ಕೆಲಸ ಮಾಡುವಂತಹ ಕೆಲಸವನ್ನು ಹುಡುಕಿ. ನೀವು ಅರೆಕಾಲಿಕ ಉದ್ಯೋಗ ಆಯ್ಕೆಗಳನ್ನು (part time jobs) ಸಹ ಹುಡುಕಬಹುದು. ಇದರಿಂದ ಮಗುವಿನ ಆರೈಕೆಯೊಂದಿಗೆ ವೃತ್ತಿಜೀವನವನ್ನು ನಡೆಸೋದು ಸಹ ಸುಲಭವಾಗುತ್ತೆ. 

ಇಂದಿನ ಸಮಯದಲ್ಲಿ, ಕಚೇರಿಗಳಲ್ಲಿ ಹೆರಿಗೆ ರಜೆ ಸಿಗುತ್ತೆ. ಆದರೆ ಗರ್ಭಧಾರಣೆಯ ಸಮಯದಲ್ಲಿ ಕೆಲವು ಕಾರಣಗಳಿಗಾಗಿ ನೀವು ಕೆಲಸವನ್ನು ತೊರೆಯಬೇಕಾಗಿ ಬಂದರೂ, ನಿಮ್ಮ ಕೆಲಸವನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಲು ನೀವು ಇನ್ನೂ ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇಲ್ಲವಾದರೆ ಕೆಲಸ ಮರೆತುಬಿಡುವ ಸಾಧ್ಯತೆ ಇದೆ. 

ಹೊಸ ಉದ್ಯೋಗಗಳು ಮತ್ತು ಕಂಪನಿಗಳ ಬಗ್ಗೆ ಗೂಗಲ್ ನಲ್ಲಿ ಹುಡುಕುತ್ತಲೇ ಇರಿ. ನಿಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಹೊಸ ಕೆಲಸವನ್ನು ಪ್ರಾರಂಭಿಸಿದಾಗಲೆಲ್ಲಾ, ಅಥವಾ ಹೊಸ ಕೆಲಸಕ್ಕಾಗಿ ನೀವು ಕಾಂನ್ಫಿಡೆಂಟ್ ನಿಂದ ಇಂಟರ್ವ್ಯೂ (interview) ನೀಡಬಹುದು.

ಅನೇಕ ಮಹಿಳೆಯರು ತಮ್ಮ ಗರ್ಭಧಾರಣೆಯ ನಂತರ ಕೆಲಸವನ್ನು ಪ್ರಾರಂಭಿಸಲು ಮಗು ಬೆಳೆಯುವವರೆಗೆ ಕಾಯುತ್ತಾರೆ. ಆದರೆ ನಿಮ್ಮ ವೃತ್ತಿಜೀವನಕ್ಕೆ ವಿರಾಮ ಹಾಕಲು ನೀವು ಬಯಸದಿದ್ದರೆ, ಹೆರಿಗೆಯ ನಂತರ ವೃತ್ತಿಜೀವನವನ್ನು ಪ್ರಾರಂಭಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ.

ನೀವು ನಿಮ್ಮ ಗಂಡ ಅಥವಾ ತಾಯಿಯ ಸಹಾಯವನ್ನು ಪಡೆಯಬಹುದು. ನೀವು ಹೆಚ್ಚಿನ ಸಂಬಳವನ್ನು ಪಡೆಯುತ್ತಿದ್ದರೆ, ನಿಮ್ಮ ಮಗುವನ್ನು ನೋಡಿಕೊಳ್ಳಲು ನೀವು ಬೇಬಿ ಸಿಟ್ಟರ್ ಅನ್ನು ಸಹ ನೇಮಿಸಿಕೊಳ್ಳಬಹುದು. ಇದರಿಂದ ಮಗುವಿನ ಬಗ್ಗೆ ಹೆಚ್ಚು ಚಿಂತಿಸದೆ ಕೆಲಸ ಮಾಡಲು ಸಾಧ್ಯವಾಗುತ್ತದೆ.
 

ಗರ್ಭಧಾರಣೆಯ ನಂತರ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಪ್ರಯತ್ನಿಸಿದಾಗ, ಅನೇಕ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬರುತ್ತವೆ. ನಾನು ಇದನ್ನು ಮತ್ತೆ ಮಾಡಲು ಸಾಧ್ಯವಾಗುತ್ತದೆಯೇ?, ನನಗೆ ಕೆಲಸ ಸಿಗುತ್ತದೆಯೇ? ಹೀಗೆ ಹಲವು ಪ್ರಶ್ನೆಗಳು ಕಾಡುತ್ತವೆ. ಆದರೆ ಈ ಸಮಯದಲ್ಲಿ, ನಿಮ್ಮ ಆತ್ಮವಿಶ್ವಾಸವನ್ನು ಮುರಿಯಲು ಬಿಡಬೇಡಿ. ನಿಮ್ಮ ಕೆಲಸ ಮತ್ತು ಕಠಿಣ ಪರಿಶ್ರಮದಲ್ಲಿ (hard work) ಸಂಪೂರ್ಣ ನಂಬಿಕೆ ಇರಿಸಿ, ಇದರಿಂದ ಸಂದರ್ಶನದ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ದುರ್ಬಲಗೊಳ್ಳುವುದಿಲ್ಲ ಮತ್ತು ನೀವು ಮತ್ತೆ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಬಹುದು.

click me!