ಸ್ಥಿರ ವೆಚ್ಚಗಳು
ನಿಮ್ಮ ನಿಗದಿತ ಮಾಸಿಕ ವೆಚ್ಚಗಳ ಕನಿಷ್ಠ ಆರು ಪಟ್ಟು ಹೆಚ್ಚು ಆಕಸ್ಮಿಕ ನಿಧಿಯನ್ನು ರಚಿಸಿ. ಇದು ವಿಮಾ ಪ್ರೀಮಿಯಂಗಳು, EMI ಗಳು (ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ಸಾಲಗಳು), ನಿಮ್ಮ ಮಕ್ಕಳ ಶಿಕ್ಷಣ ಶುಲ್ಕಗಳು ಮತ್ತು ಇತರ ಅನಿವಾರ್ಯ ವೆಚ್ಚಗಳಂತಹ ನಿಮ್ಮ ನಿಶ್ಚಿತ ಬದ್ಧತೆಗಳನ್ನು ಒಳಗೊಂಡಿರುತ್ತದೆ. ಈ ನಿಧಿಯು ವೈದ್ಯಕೀಯ ಸಮಸ್ಯೆಗಳು, ಉದ್ಯೋಗ ನಷ್ಟ, ಮನೆ ರಿಪೇರಿ ಇತ್ಯಾದಿಗಳಂತಹ ತುರ್ತು ಪರಿಸ್ಥಿತಿಗಳೆದುರಾದಾಗ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತದೆ.