ಹುಡುಗೀರು ಹೀಗೆಲ್ಲಾ ಟೆಕ್ಸ್ಟ್ ಮಾಡಿದ್ರೆ ಪಕ್ಕಾ ನಿಮ್ ಮೇಲೆ ಲವ್ವಾಗಿದೆ ಅಂತಾನೆ ಅರ್ಥ

Published : Sep 07, 2023, 05:14 PM ISTUpdated : Sep 07, 2023, 05:32 PM IST

ಹುಡುಗಿಯರ ಮನಸ್ಸಿನ ಫೀಲಿಂಗ್ ತಿಳ್ಕೊಳ್ಳೋದು ತುಂಬಾ ಕಷ್ಟ. ಅದನ್ನು ತಿಳ್ಕೊಳ್ಳೋಕಾಗ್ದೆ ಹುಡುಗರು ಒದ್ದಾಡ್ತಾರೆ. ನೀವು ಸಹ ಅಂಥವರು ಆದ್ರೆ ಅವಳ ಮನಸ್ಸಲ್ಲಿ ನಿಮ್ಗೆ ಜಾಗವಿದ್ಯಾ ಅಂತ ಅವರು ಮಾಡೋ ಟೆಕ್ಸ್ಟ್‌ನಿಂದ ತಿಳ್ಕೊಳ್ಳಿ.

PREV
19
ಹುಡುಗೀರು ಹೀಗೆಲ್ಲಾ ಟೆಕ್ಸ್ಟ್ ಮಾಡಿದ್ರೆ ಪಕ್ಕಾ ನಿಮ್ ಮೇಲೆ ಲವ್ವಾಗಿದೆ ಅಂತಾನೆ ಅರ್ಥ

ಮೀನಿನ ಹೆಜ್ಜೆ ಬೇಕಾದ್ರೂ ಕಂಡು ಹಿಡಿ ಬಹುದು ಆದ್ರೆ ಹುಡುಗಿ ಮನಸ್ಸು ತಿಳ್ಕೊಳ್ಳೋದಕ್ಕೆ ಆಗಲ್ಲ ಅಂತ ಹಿರಿಯರು ಹೇಳ್ತಾರೆ. ಇತ್ತೀಚಿನ ಹುಡುಗರು ಸಹ ಅದು ಅಕ್ಷರಹಃ ನಿಜಾನೇ ಬಿಡೀಪ್ಪ ಅಂತಾರೆ. ಯಾಕಂದ್ರೆ ಹುಡುಗಿಯರ ಮನಸ್ಸಿನ ಫೀಲಿಂಗ್ ತಿಳ್ಕೊಳ್ಳೋದು ತುಂಬಾ ಕಷ್ಟ. ಅದನ್ನು ತಿಳ್ಕೊಳ್ಳೋಕಾಗ್ದೆ ಹುಡುಗರು ಒದ್ದಾಡ್ತಾರೆ. ನೀವು ಸಹ ಅಂಥವರು ಆದ್ರೆ ಅವಳ ಮನಸ್ಸಲ್ಲಿ ನಿಮ್ಗೆ ಜಾಗವಿದ್ಯಾ ಅಂತ ಹೀಗೆ ತಿಳ್ಕೊಳ್ಳಿ.

29

ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಹೇಳಲಾಗಿದೆ. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ವಿಷಯ ಅಂದ್ರೆ ಹೆಣ್ಣಿನ ಮನಸ್ಸು. ಹೆಣ್ಣು ಅತ್ತರೆ, ನಕ್ಕರೆ, ಮೌನವಾದರೆ, ವಿಪರೀತ ಮಾತನಾಡಿದರೆ ಏನರ್ಥ ಎಂಬುದು ಸಂಪೂರ್ಣ ಗೊಂದಲಮಯವಾಗಿದೆ. ಹೀಗಾಗಿಯೇ ಹೆಣ್ಣಿಗೆ ಪ್ರಪೋಸ್ ಮಾಡುವುದು, ಆಕೆಯ ಒಪಿನೀಯನ್ ತಿಳಿದುಕೊಳ್ಳುವುದು ಹಲವು ಹುಡುಗರ ಪಾಲಿಗೆ ಕಬ್ಬಿಣದ ಕಡಲೆ.

39

ಬಹುತೇಕ ಹುಡುಗಿಯರು ಯಾರಾದರೂ ತಮಗೆ ಇಷ್ಟವಾದರೂ ನೇರವಾಗಿ ಹೇಳುವುದಿಲ್ಲ. ಬದಲಿಗೆ ತಮ್ಮ ನಡವಳಿಕೆಯ ಮೂಲಕ ಅದನ್ನು ತೋರ್ಪಡಿಸುತ್ತಾರೆ. ಹುಡುಗರು ಅವರ ನಡವಳಿಕೆಯಿಂದ ಮನಸ್ಸನ್ನು ಗ್ರಹಿಸಬೇಕು. ನೀವು ಹುಡುಗಿಯರಿಂದ ಕೆಲವು ನಿರ್ಧಿಷ್ಟ ಸಂದೇಶಗಳನ್ನು ಪಡೆಯುತ್ತಿದ್ದರೆ, ಹುಡುಗಿಗೆ ನಿಮ್ ಜೊತೆ ಲವ್ವಾಗಿದೆ. ನಿಮ್ಮೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ ಎಂದು ಅರ್ಥ. ಆ ಸಂದೇಶಗಳು ಯಾವುವು ಎಂದು ನೋಡೋಣ.

49

ವಿನಾಕಾರಣ ಟೆಕ್ಸ್ಟ್‌ ಮಾಡುವುದು
ಸಾಮಾನ್ಯವಾಗಿ ಹೆಣ್ಣು ಯಾವತ್ತೂ ನೇರವಾಗಿ ತನ್ನ ಮನಸ್ಸನ್ನು ತಾನು ಇಷ್ಟಪಟ್ಟವರಿಗೆ ಹೇಳುವುದಿಲ್ಲ. ಆದರೆ ಹುಡುಗ ಅವಳ ನಡವಳಿಕೆಯಿಂದ ಅರ್ಥಮಾಡಿಕೊಳ್ಳಬೇಕು. ನಿಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ಹುಡುಗಿ ನಿಮಗೆ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅವಳು ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದಾಳೆ ಎಂದರ್ಥ.

59

ಭಾವನೆಗಳನ್ನು ಹಂಚಿಕೊಂಡರೆ
ಅವಳು ತನ್ನ ಎಲ್ಲಾ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡರೆ, ಅದು ನಿಮ್ಮೊಂದಿಗೆ ಸಂಬಂಧಕ್ಕೆ ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ. ಒಂದು ಹುಡುಗಿ ನಿಮ್ಮ ಬಗ್ಗೆ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಕಾಳಜಿ ವಹಿಸುತ್ತಾಳೆ, ಅದು ಅವಳ ಪ್ರೀತಿಯ ಬಗ್ಗೆ ನಿಮಗೆ ನೀಡುವ ಸಂಕೇತವಾಗಿದೆ. ನೀವೇ ಅರ್ಥಮಾಡಿಕೊಳ್ಳಬೇಕು.

69

ಹೆಚ್ಚು ಕಾಳಜಿ ವಹಿಸುವುದು
ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ನಿಮ್ಮೊಂದಿಗೆ ತನ್ನ ಕ್ಷಣಗಳನ್ನು ಹಂಚಿಕೊಳ್ಳಲು ಮತ್ತು ಹತ್ತು ಜನರಿಗೆ ನಿಮ್ಮ ಬಗ್ಗೆ ಧನಾತ್ಮಕವಾಗಿ ಹೇಳಲು ಹುಡುಗಿ ಇಷ್ಟಪಟ್ಟರೆ, ಅಂತಹ ಹುಡುಗಿ ನಿಮ್ಮೊಂದಿಗೆ ಸಂಬಂಧಕ್ಕೆ ಸಿದ್ಧವಾಗಿದ್ದಾಳೆ ಎಂದರ್ಥ. ಅಲ್ಲದೆ, ಪದೇ ಪದೇ ಸಣ್ಣಪುಟ್ಟ ವಿಷಯಕ್ಕೂ ನಿಮ್ಮ ಬಗ್ಗೆ ಆಕೆ ಕಾಳಜಿ ವಹಿಸುತ್ತಿದ್ದರೆ ಆಕೆಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು.

79

ಗುಡ್ ಮಾರ್ನಿಂಗ್, ಗುಡ್ ನೈಟ್ ಟೆಕ್ಸ್ಟ್‌
ಯಾವುದೇ ಹುಡುಗಿ ತನ್ನ ದಿನದ ಆರಂಭದಲ್ಲಿ ಹಾಗೂ ತಾನು ಮಲಗುವ ಹೊತ್ತಿನಲ್ಲಿ ತಾನು ಪ್ರೀತಿಸುವವನನ್ನು ನೆನಪಿಸಿಕೊಳ್ಳಲು ಬಯಸುತ್ತಾಳೆ. ಆಕೆ ಪ್ರತಿದಿನ ನಿಮಗೆ ತಪ್ಪದೆ ಗುಡ್ ಮಾರ್ನಿಂಗ್, ಗುಡ್‌ನೈಟ್ ಕಳುಹಿಸುತ್ತಿದ್ದರೆ ಆಕೆಗೆ ನಿಮ್ಮ ಬಗ್ಗೆ ಫೀಲಿಂಗ್ಸ್ ಇದೆ ಎಂದು ಅರ್ಥ ಮಾಡಿಕೊಳ್ಳಿ.

89

ಪೊಸೆಸಿವ್ ಗುಣ
ಹುಡುಗಿ ಎಲ್ಲರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಾನು ಪ್ರೀತಿಸುವ ಹುಡುಗನ ಬಗ್ಗೆ ಹೆಚ್ಚು ಪೊಸೆಸಿವ್ ಆಗಿರುತ್ತಾಳೆ. ನೀವು ಇನ್ನೊಬ್ಬರ ಜೊತೆ ಹೆಚ್ಚು ಮಾತನಾಡಿದಾಗ ಆಕೆಗೆ ಸಿಟ್ಟು ಬರುತ್ತಿದ್ದರೆ ಆಕೆಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ನೀವು ಎಲ್ಲಿ ಮಿಸ್ ಆಗುತ್ತೀರೋ ಎಂಬ ಚಿಂತೆ ಅವರನ್ನು ಕಾಡುವ ಕಾರಣ ಹೀಗೆ ಮಾಡುತ್ತಾರೆ.

99

ಇನ್ಯಾಕೆ ತಡ, ನಿಮ್ ಕ್ರಶ್‌ ಅಥವಾ ನೀವು ಇಷ್ಟಪಡೋ ಹುಡುಗಿ ಹೀಗೆಲ್ಲಾ ಮಾಡ್ತಿದ್ರೆ ನಿಮ್ಗೆ ಜಾಕ್‌ಪಾಟ್‌ ಹೊಡೀತು. ಆಕೆಗೆ ನಿಮ್ ಮೇಲೆ ಲವ್ವಾಗಿರೋದು ಕನ್ಫರ್ಮ್‌. ಇನ್ನು ಪ್ರಪೋಸ್ ಮಾಡೋದಷ್ಟೇ ಬಾಕಿಯಿರೋದು.

Read more Photos on
click me!

Recommended Stories