ವಿವಿಧ ಕ್ಷೇತ್ರಗಳಲ್ಲಿ ಮೊದಲ ಹೆಜ್ಜೆ ಗುರುತು ಮೂಡಿಸಿದ ಭಾರತೀಯ ಮಹಿಳೆಯರಿವರು!

First Published Sep 5, 2023, 1:17 PM IST

ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಸದ್ಯ ಮಹಿಳೆಯರು ಮುಂದಿದ್ದಾರೆ, ಅದು ಕ್ರಿಕೆಟ್ ಆಗಿರಲಿ, ಬಾಕ್ಸಿಂಗ್ ಆಗಿರಲಿ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ, ರಾಜಕೀಯ ಹೀಗೆ ಎಲ್ಲದರಲ್ಲೂ ಅವರು ಮುಂದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳೆಯರ ಬಗ್ಗೆ ತಿಳಿಯೋಣ. 
 

ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ
ಇವರ ಹೆಸರು ಕೇಳದವರೇ ಇಲ್ಲ ಅಲ್ವಾ? ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿ (IPS Officer) ದೇಶದ ಮೂಲೆ ಮೂಲೆಯಲ್ಲಿ ಮಹಿಳೆಯರಿಗೆ ಪ್ರೇರಣೆಯಾದವರು ಕಿರಣ್ ಬೇಡಿ. ಪುರುಷ ಪ್ರಾಧಾನ್ಯದ ಐಪಿಎಸ್ ಕ್ಷೇತ್ರದಲ್ಲಿ ಲಿಂಗ ತಾರತಮ್ಯತೆ ತೊಡೆದು, ಇವರು ಪ್ರಥಮ ಐಪಿಎಸ್ ಅಧಿಕಾರಿಯಾಗಿ ಜನಪ್ರಿಯತೆ ಪಡೆದಿದ್ದರು. 

ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ
ನೊಬೆಲ್ ಪ್ರಶಸ್ತಿ (Nobel Prize) ಪಡೆದ ಮೊದಲ ಭಾರತದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಮದರ್ ಥೆರೇಸಾ. 1979 ರಲ್ಲಿ ಸಮಾಜ ಸೇವೆಗಾಗಿ ಇವರಿಗೆ ನೊಬೆಲ್ ಪ್ರಶಸ್ತಿ ದೊರೆತಿತ್ತು. ಇವರು 1950ರಲ್ಲಿ ಇವರು ಸಮಾಜ ಸೇವೆಗಾಗಿ ಮಿಷನರಿ ಆರಂಭಿಸಿದರು.

ಮೌಂಟ್ ಎವರೆಸ್ಟ್ ಏರಿದ ಪ್ರಥಮಾ ಭಾರತೀಯ ಮಹಿಳೆ
ಭಾರತ ಶ್ರೇಷ್ಟ ಪರ್ವತಾರೋಹಿಯಾಗಿರುವ ಬಚೇಂದ್ರಿ ಪಾಲ್ (Bachendri Pal), ಪ್ರಪಂಚದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ. 1984ರಲ್ಲಿ ಇವರು ಮೌಂಟ್ ಎವರೆಸ್ಟ್ ಏರಿದ್ದರು. 2019 ರಲ್ಲಿ ಇವರಿಗೆ ಪದ್ಮ ಭೂಷಣ ಲಭಿಸಿತ್ತು. 

ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ
ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ (President) . ಭಾರತದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ವೃತ್ತಿಯಲ್ಲಿ ಲಾಯರ್ ಆಗಿದ್ದ ಪ್ರತಿಭಾ ಸಿಂಗ್ ದೇಶದ 12ನೇ ರಾಷ್ಟ್ರಪತಿಯಾಗಿ, 2007 ರಿಂದ 2012 ರವರೆಗೆ ಅಧಿಕಾರದಲ್ಲಿದ್ದರು.

ಭಾರತದ ಮೊದಲ ಮಿಸ್ ಯೂನಿವರ್ಸ್ 
ಬಾಲಿವುಡ್ ನಟಿ ಸುಷ್ಮಿತಾ ಸೇನ್ (Sushmita Sen) ಭಾರತದ ಮೊದಲ ಮಿಸ್ ಯೂನಿವರ್ಸ್. ಇವರು ಮೇ 21, 1994 ರಲ್ಲಿ ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮ ಮುಡಿಗೇರಿಸುವ ಮೂಲಕ ಅಮೋಘ ದಾಖಲೆ ನಿರ್ಮಿಸಿದರು. 

ಆಸ್ಕರ್ ಪಡೆದ ಪ್ರಥಮ ಭಾರತೀಯ ಮಹಿಳೆ
ಸಿನಿಮಾ ರಂಗದ ಅತ್ಯುನ್ನತ ಪುರಸ್ಕಾರ ಆಸ್ಕರ್ ಪಡೆದ ಮೊದಲ ಭಾರತೀಯ ಮಹಿಳೆ ಎಂದರೆ ಭಾನು ಅಥಯ್ಯಾ.(Bhanu Athaiyya)  ಇವರು ಪೈಂಟರ್ ಮತ್ತು ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಇವರು ಸುಮಾರು 100ಕ್ಕೂ ಹೆಚ್ಚು ಬಾಲಿವುಡ್ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 

ಭಾರತ ರತ್ನ ಪಡೆದ ಮೊದಲ ಮಹಿಳೆ
ಭಾರತದ ಪ್ರಥಮಾ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿದ್ದ  (Prime Minister) ಇಂದಿರಾ ಗಾಂಧಿಯವರಿಗೆ ದೇಶದ ಪ್ರಥಮ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಇವರಿಗೆ 1971 ರಲ್ಲಿ ಭಾರತದ ಏಳಿಗೆ ಮತ್ತು ಬೆಳವಣಿಗೆಗಾಗಿ ಶ್ರಮಿಸಿದ ಹಿನ್ನೆಲೆಯಲ್ಲಿ ಭಾರತರತ್ನ ನೀಡಲಾಯಿತು. 

ಏಷಿಯನ್ ಗೇಮ್ಸಲ್ಲಿ ಚಿನ್ನ ಗೆದ್ದ ಮಹಿಳೆ
ಏಷಿಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿರುವವರು ಕಮಲ್ ಜೀತ್ ಸಂಧು (Kamaljeet Sandhu). ಇವರು 1970 ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಏಶಿಯನ್ ಗೇಮ್ಸ್ ನಲ್ಲಿ 400 ಮೀಟರ್ ರೇಸ್ ನ್ನು 57.3 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. 
 

click me!