How to Spot Fresh Fish: ತಾಜಾ ಮೀನು ಖರೀದಿಸುವಾಗ ಗೊಂದಲವಾಗುತ್ತಿದೆಯೇ?, ಶೆಫ್ ಅಜಯ್ ಚೋಪ್ರಾ 7 ಸುಲಭ ಸಲಹೆ ತಿಳಿಸಿದ್ದಾರೆ. ಕಣ್ಣುಗಳು, ವಾಸನೆ, ಚರ್ಮ ಮತ್ತು ಕಿವಿರುಗಳನ್ನು ಪರಿಶೀಲಿಸಿ ಪ್ರತಿ ಬಾರಿ ಆರೋಗ್ಯಕರ ಮೀನು ಆರಿಸಿ.
ಮೀನು ತಿನ್ನೋದಕ್ಕೆ ಇಷ್ಟ. ಆದ್ರೆ ತಾಜಾ ಮೀನು ಗುರುತಿಸೋದು ಕಷ್ಟ ಅನ್ಸುತ್ತಾ? ಫೇಮಸ್ ಶೆಫ್ ಅಜಯ್ ಚೋಪ್ರಾ ಅವರ ಈ ಸಲಹೆಗಳು ನಿಮಗಾಗಿ. ಮೀನಿನ ಕಣ್ಣುಗಳನ್ನು ಗಮನಿಸಿ. ತಾಜಾ ಮೀನಿನ ಕಣ್ಣುಗಳು ಸ್ಪಷ್ಟ, ಹೊಳೆಯುವ ಮತ್ತು ಉಬ್ಬಿದಂತಿರುತ್ತವೆ.
25
ಮೀನಿನ ಚರ್ಮ ಗಮನಿಸಿ
2. ಮೀನಿನ ವಾಸನೆ ಗಮನಿಸಿ
ತಾಜಾ ಮೀನಿನ ವಾಸನೆ ಹಗುರವಾದ ಸಮುದ್ರದ ವಾಸನೆಯಂತೆ ಇರುತ್ತದೆ, ಕಟುವಾದ ಅಥವಾ ಅಮೋನಿಯದ ವಾಸನೆಯಂತೆ ಇರಬಾರದು. ಕೆಟ್ಟ ವಾಸನೆ ಬಂದರೆ, ಮೀನು ಹಳೆಯದಾಗಿದೆ ಎಂದರ್ಥ.
3. ಚರ್ಮ ಹೊಳೆಯುವ ಮತ್ತು ತೇವವಾಗಿರಬೇಕು
ಮೀನಿನ ಚರ್ಮ ತೇವ ಮತ್ತು ಹೊಳೆಯುತ್ತಿದ್ದರೆ, ಅದು ತಾಜಾ. ಹಳೆಯ ಮೀನಿನ ಚರ್ಮ ಒಣಗಿದ, ಮಂದ ಮತ್ತು ನಿರ್ಜೀವವಾಗಿ ಕಾಣುತ್ತದೆ.
35
ಮೀನಿನ ದೇಹ ಒತ್ತಿ ನೋಡಿ
4. ಕಿವಿರುಗಳ ಬಣ್ಣ ನೋಡಿ
ಕಿವಿರುಗಳ ಬಣ್ಣ ಗಾಢ ಕೆಂಪು ಅಥವಾ ಗುಲಾಬಿ ಬಣ್ಣದ್ದಾಗಿರಬೇಕು ಮತ್ತು ತೇವವಾಗಿರಬೇಕು. ಕೊಳಕು, ಬಣ್ಣಗೆಟ್ಟ ಅಥವಾ ಒಣಗಿದ ಕಿವಿರುಗಳು ಮೀನು ಹಳೆಯದಾಗಿದೆ ಎಂದು ಸೂಚಿಸುತ್ತದೆ.
5. ಮೀನಿನ ದೇಹವನ್ನು ನಿಧಾನವಾಗಿ ಒತ್ತಿ
ನೀವು ಮೀನನ್ನು ಬೆರಳಿನಿಂದ ಒತ್ತಿದಾಗ ಅದು ಮತ್ತೆ ತನ್ನ ಆಕಾರಕ್ಕೆ ಮರಳಿದರೆ, ಅದು ತಾಜಾ. ಗುಳಿ ಉಳಿದು ಮೀನು ಮೃದುವಾಗಿದ್ದರೆ, ಅದು ಹಳೆಯದಾಗಿದೆ.
45
ಮೀನು ಸಂಗ್ರಹ ವಿಧಾನ ಪರಿಶೀಲಿಸಿ
6. ಸಂಗ್ರಹ ವಿಧಾನ ಪರಿಶೀಲಿಸಿ
ಮಾರುಕಟ್ಟೆ ಅಥವಾ ಮಾಲ್‌ನಿಂದ ಮೀನು ಖರೀದಿಸುತ್ತಿದ್ದರೆ, ಅದನ್ನು ಪುಡಿಮಾಡಿದ ಐಸ್‌ನಲ್ಲಿ ಸಂಗ್ರಹಿಸಲಾಗಿದೆಯೇ ಎಂದು ಗಮನಿಸಿ. ಉತ್ತಮ ಅಂಗಡಿಗಳಲ್ಲಿ ಮೀನನ್ನು ಸರಿಯಾದ ತಂಪಾದ ತಾಪಮಾನದಲ್ಲಿ ಇರಿಸಲಾಗುತ್ತದೆ.
55
ಮೀನನ್ನು ಚೆನ್ನಾಗಿ ಪರಿಶೀಲಿಸಿ
7. ಖರೀದಿಸುವ ಮೊದಲು ಮೀನನ್ನು ಚೆನ್ನಾಗಿ ಪರಿಶೀಲಿಸಿ
ಬ್ರ್ಯಾಂಡ್ ಅಥವಾ ರಿಯಾಯಿತಿ ನೋಡಿ ಮೀನು ಖರೀದಿಸಬೇಡಿ. ಖರೀದಿಸುವ ಮೊದಲು ಅದರ ಕಣ್ಣುಗಳು, ವಾಸನೆ, ಕಿವಿರುಗಳು ಮತ್ತು ಚರ್ಮವನ್ನು ಚೆನ್ನಾಗಿ ಪರಿಶೀಲಿಸಿ.