ಅರಿಶಿನವನ್ನು (turmeric) ಭಾರತೀಯ ಅಡುಗೆಮನೆ ಮತ್ತು ಮದುವೆಯ ಆಚರಣೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಅರಿಶಿನವು ಬಟ್ಟೆಗಳ ಮೇಲೆ ಬಿದ್ದು ಕಲೆಯಾದ್ರೆ, ಅದನ್ನು ತೆಗೆದುಹಾಕಲು ತುಂಬಾನೆ ಕಷ್ಟಪಡಬೇಕಾಗುತ್ತೆ. ಕೆಲವರು ಅರಿಶಿನ ಕಲೆ ಇರುವ ಬಟ್ಟೆಗಳ ಮೇಲೆ ನೇರವಾಗಿ ಸೋಪನ್ನು ಹಚ್ಚುತ್ತಾರೆ, ಇದರಿಂದ ಬಟ್ಟೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ.
26
ಈಗ ಸಾಮಾನ್ಯ ವಾಶ್ ಮೂಲಕ ಅರಿಶಿನ ಕಲೆಗಳನ್ನು (stains) ಶಾಶ್ವತವಾಗಿ ತೆಗೆದುಹಾಕುವುದು ಸುಲಭವಲ್ಲ. ಹಾಗಾಗಿ ಕಲೆಯಾಗಿರುವ ಬಟ್ಟೆಯನ್ನು ಜನರು, ನೆಲ ಒರೆಸೋದಕ್ಕೆ ಉಪಯೋಗ ಮಾಡುತ್ತಾರೆ, ನೀವು ಯಾವುದೇ ಶ್ರಮವಿಲ್ಲದೆ ಬಟ್ಟೆಯಿಂದ ಕಲೆಯನ್ನು ಸುಲಭವಾಗಿ ತೆಗೆದುಹಾಕಬಹುದು. ಇದಕ್ಕಾಗಿ ಸೂಪರ್ ಆಗಿರುವ ಟ್ರಿಕ್ ಇಲ್ಲಿದೆ.
36
ಮೊದಲು ಈ ಕೆಲಸ ಮಾಡಿ
ಅರಿಶಿನ ಕಲೆ ತೆಗೆಯಲು, ನಿಮಗೆ ಒಂದು ರೂಪಾಯಿ ಯ ಶಾಂಪೂ (shampoo) ಮತ್ತು ಡಿಟರ್ಜೆಂಟ್ ಬೇಕಾಗುತ್ತದೆ. ಮೊದಲನೆಯದಾಗಿ, ಒಂದು ಬಕೆಟ್‌ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಡಿಟರ್ಜೆಂಟ್ ಅನ್ನು ಕರಗಿಸಿ. ಈಗ ಒಂದು ಶಾಂಪೂ ಸ್ಯಾಚೆಟ್ ಸೇರಿಸಿ. ಈಗ ನೀವು ಅರಿಶಿನ ಕಲೆ ಇರುವ ಬಟ್ಟೆಗಳನ್ನು 10 ನಿಮಿಷಗಳ ಕಾಲ ನೆನೆಸಿಡಬೇಕು.
46
Image credits: stock photo- Getty
ಅದು ಹೇಗೆ ಸ್ವಚ್ಛವಾಗುತ್ತದೆ?
ಹತ್ತು ನಿಮಿಷದ ನಂತರ, ನೀವು ಅದನ್ನು ಹೆಚ್ಚು ಶ್ರಮವಿಲ್ಲದೆ ನಿಧಾನವಾಗಿ ಉಜ್ಜಬೇಕು. ನಂತರ, ಬಟ್ಟೆಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ತಂತ್ರದಿಂದ ಅರಿಶಿನ ಕಲೆಯನ್ನು ಸುಲಭವಾಗಿ ತೆಗೆದುಹಾಕಬಹುದು ಎನ್ನುವ ವಿಡೀಯೋ ವೈರಲ್ ಆಗುತ್ತಿದೆ. ನೀವು ಕೂಡ ಟ್ರೈ ಮಾಡಿ ನೋಡಿ.
56
ಈ ಟ್ರಿಕ್ಸ್ ಕೂಡ ಟ್ರೈ ಮಾಡಬಹುದು
ಟೂತ್‌ಪೇಸ್ಟ್ ಅನ್ನು ಅಡಿಗೆ ಸೋಡಾದೊಂದಿಗೆ (baking soda) ಬೆರೆಸಿ ಅರಿಶಿನ ಕಲೆಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಕಲೆಯನ್ನು ಮಾಯವಾಗಿಸುತ್ತದೆ.
ಸ್ವಲ್ಪ ನೀರಿನಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಮತ್ತು ಬಿಳಿ ವಿನೆಗರ್ ಬೆರೆಸಿ ಅರಿಶಿನ ಕಲೆ ಇರುವ ಜಾಗಕ್ಕೆ ಉಜ್ಜಿ. ಕಲೆ ತೆಗೆದ ನಂತರ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
66
ಬಟ್ಟೆಯ ಕಲೆ ಇರುವ ಭಾಗಕ್ಕೆ ನಿಂಬೆ ರಸ ಹಚ್ಚಿ ಸ್ವಲ್ಪ ಸಮಯ ಬಿಡಿ. ಈಗ ಅದನ್ನು ಸಾಮಾನ್ಯ ನೀರು ಮತ್ತು ಡಿಟರ್ಜೆಂಟ್ ಹಾಕಿ ತೊಳೆದು ಒಣಗಿಸಿ.
ಅರಿಶಿನ ಕಲೆಗಳನ್ನು ತೆಗೆದುಹಾಕಲು, ಒಂದು ಬಟ್ಟಲಿನಲ್ಲಿ 3-4 ಹನಿ ಲಿಕ್ವಿಡ್ ಬ್ಲೀಚ್ (liquid bleech) ತೆಗೆದುಕೊಂಡು ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ. ಡ್ರೈ ಡಿಟರ್ಜೆಂಟ್ ಬೆರೆಸಿದ ಬ್ರಶ್ ನಿಂದ ಕಲೆಯಾದ ಜಾಗವನ್ನು ಒರೆಸಿ.