ವಯಸ್ಸು 50 ಆಯ್ತು ಎಂದವಳ ಬದುಕು ಬದಲಾಯಿಸಿದ್ದು ಒಳ ಉಡುಪಿನ ಮಾಡೆಲಿಂಗ್

Published : Apr 08, 2025, 08:10 AM ISTUpdated : Apr 08, 2025, 09:45 AM IST

ಹದಿ ವಯಸ್ಸಲ್ಲಿ ಆಕೆಗೂ ಸಹಜವಾಗಿಯೇ ಮಾಡೆಲ್ ಆಗೋ ಕನಸಿತ್ತು. 50ನೇ ವಯಸ್ಸಿನವರೆಗೂ ಅದು ಈಡೇರಲಿಲ್ಲ. ಆದರೆ, ಆ ನಂತರ ರೂಪದರ್ಶಿಯಾಗುವ ಕನಸನ್ನು ನನಸಾಗಿಕೊಂಡಳು. ಅದೂ ಇನ್ನರ್ ವೇಲ್ ಮಾಡೆಲ್ ಆಗಿ. ಆಕೆಯ ಕುತೂಹಲಕಾರಿ ಜರ್ನಿ ಇಲ್ಲಿದೆ.

PREV
111
ವಯಸ್ಸು 50 ಆಯ್ತು ಎಂದವಳ ಬದುಕು ಬದಲಾಯಿಸಿದ್ದು ಒಳ ಉಡುಪಿನ ಮಾಡೆಲಿಂಗ್

ಪುಟ್ಟೋಳಾಗಿದ್ದಾಗಿನಿಂದಲೂ ನಂಗೆ ಮಾಡೆಲ್ ಆಗ ಬೇಕೆಂಬ ಕನಸಿತ್ತು. ನೋಡಲು ಮುದ್ದು ಮುದ್ದಾಗಿದ್ದ ನನ್ನನ್ನು ನೋಡಿ ಜನರು ಮಾಡೆಲಿಂಗ್ ಕರೋ ಎನ್ನುತ್ತಿದ್ದರು. ಆದರೆ, ನಂಗೆ ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಿಗೆ ಇರುವಂತೆ ಸಿಕ್ಕಾಪಟ್ಟೆ ರಿಸ್ಟ್ರಿಕ್ಷನ್ಸ್ ಇತ್ತು. ಮನೆಯಿಂದ ಹೊರ ಹೋಗುವುದೇ ಕನಸಾಗಿತ್ತು

211

ಕೆಲಸ ಅಂತ ಮಾಡುವುದಾದರೆ ರೆಸ್ಪೆಕ್ಟ್ ಇರೋ ಜಾಬನ್ನೇ ಮಾಡಬೇಕಿತ್ತು. ಆದರೂ ನನ್ನ ಜೀವನದ ಕನಸಿನ ಬೆನ್ನತ್ತಿ ಕದ್ದು ಮುಚ್ಚಿ ನಾಟಕಗಳಲ್ಲಿ ಅಭಿನಯಿಸಲು ಶುರು ಮಾಡಿದೆ. ಬಾಲಿವುಡ್ ನಟಿಯರಾದ ಜೀನತ್ ಅಮಾನ್ ಮತ್ತು ಪರ್ವೀನ್ ಬಾಬಿಯನ್ನು ಅನುಕರಿಸಲು ಯತ್ನಿಸುತ್ತಿದ್ದೆ. ಕಡೆಗೊಂದು ದಿನ ಗುಜರಾತಿ ಚಲನಚಿತ್ರದಲ್ಲೂ ಸಿಕ್ತು ಆಫರ್. ಅಬ್ಬಾ ಅದೆಂಥ ಅದ್ಭುತ ಕ್ಷಣ. ಕಂಡ ಕನಸು ನನಸಾಗುವ ಘಳಿಗೆಯದು. 

311

ಆದರೆ ಮತ್ತದೇ ಸೊಸೈಟಿಕಲ್ ರಿಸ್ಟ್ರಿಕ್ಷನ್ಸ್. ಗೌರವಾನ್ವಿತ ಮನೆತನದ ಹೆಣ್ಣು ಅಂಥ ಕೆಲಸ ಮಾಡಬಾರದು ಎನ್ನೋ ಮಾತು. ಬಂಡಾಯ ಏಳಲಿಲ್ಲ. ಕಟ್ಟಿಕೊಂಡ ಕನಸಿಗೆ ಮಣ್ಣು ಎರಚಿಕೊಂಡೆಯಷ್ಟೇ.  ಪದವಿ, ಸ್ನಾತಕೋತ್ತರ ಪದವಿ ಪಡೆದೆ. ಕಂಪನಿಯೊಂದರ ನಿರ್ವಾಹಕ ಅಧಿಕಾರಿಯಾಗಿಯೂ ಕೆಲಸ ಸಿಕ್ಕಿತು. ಅಲ್ಲಿಯೇ ಭಾವಿ ಗಂಡನನ್ನು ನಾನು ಭೇಟಿಯಾದೆ. ಪ್ರೀತಿಸಿದೆವು. ಮದುವೆಯಾದೆವು. 

411

ಕೆಲಸ ಬಿಟ್ಟೆ.  ಎಲ್ಲವನ್ನು ಬಿಟ್ಟು ಫುಲ್‌ಟೈಮ್ ಗೃಹಿಣಿಯಾದೆ. ನಾನು ಒಳ್ಳೆಯ ಹೆಂಡತಿ, ತಾಯಿಯಾಗಿರಲು ಟ್ರೈ ಮಾಡ್ದೆ. ಅದಕ್ಕೆ ನನ್ನನ್ನು ನಾನು ಅರ್ಪಿಸಿಕೊಂಡೆ. ಜೀವನವೇ ನನ್ನವರ ಸುತ್ತ ಸುತ್ತುತ್ತಿತ್ತು. ನನ್ನ ಅಸ್ಮಿತೆಯನ್ನೇ ನಾನು ಕಳೆದುಕೊಂಡಂತಿದ್ದೆ. 

511

ಆದರೂ, ಮನಸ್ಸಿನಲ್ಲಿ ಹುದುಗಿದ್ದ ಆಸೆಯೊಂದು ಜೀವಂತವಾಗಿಯೇ ಇತ್ತು. ಮದುವೆಯಾಗಿ ಎರಡು ದಶಕಗಳ ನಂತ ಟೀಚರ್ ಕೆಲಸಕ್ಕೆ ಅರ್ಜಿ ಹಾಕಿದ್ದೆ. ಆಗ ನನಗೆ 45 ವರ್ಷ. ಹೀಗಾಗಿ ಸಿಗೋದು ಅಷ್ಟು ಸುಲಭವಾಗಿರಲಿಲ್ಲ. 'ಯುವ ಶಿಕ್ಷಕರನ್ನು' ಅವರು ಹುಡುಕುತ್ತಿದ್ದರು. ಆದರೂ, ಛಲ ಬಿಡದೇ ಅದೇ ಕೆಲಸ ಗಿಟ್ಟಿಸಿಕೊಂಡೆ. ನಂತರ 'ಅತ್ಯಂತ ಕ್ರಿಯಾಶೀಲ ಶಿಕ್ಷಕಿ' ಪ್ರಶಸ್ತಿಯನ್ನೂ ಗೆದ್ದು ಜನರಿಗಿದ್ದ ಅಭಿಪ್ರಾಯವನ್ನೇ ಬುಡ ಮೇಲು ಮಾಡಿದೆ. 

611

ಆನ್‌ಲೈನ್‌ನಲ್ಲೊಮ್ಮೆ ಸ್ಕ್ರೋಲ್ ಮಾಡುವಾಗ 'ಏಜ್ ನೋ ಬಾರ್' ಎಂಬೊಂದು ಸೌಂದರ್ಯ ಸ್ಪರ್ಧೆಯ ಆ್ಯಡ್ ಕಾಣಿಸಿತು. ಒಂದು ಕ್ಷಣವೂ ನಾನು ಯೋಚಿಸಲಿಲ್ಲ,  ತಕ್ಷಣವೇ ಅರ್ಜಿ ಸಲ್ಲಿಸಿದೆ. ನಾನು ಮಾಡೆಲ್ ಆಗಬೇಕು ಎಂದು ನನ್ನ ಕುಟುಂಬದವರಿಗೆ ಹೇಳಿದಾಗ ಫುಲ್ ಸಪೋರ್ಟ್ ಸಿಕ್ತು. 

711

ಸ್ಪರ್ಧೆಗೆ ನನ್ನ ದೇಹವನ್ನು ನಾನು ಹುರುಪುಗೊಳಿಸಿದೆ. ಸ್ಪರ್ಧಿಸಿದೆ. 1ನೇ ರನ್ನರ್ ಅಪ್ ಪ್ರಶಸ್ತಿಯನ್ನೂ ದಕ್ಕಿಸಿಕೊಂಡೆ. 'ನೀನು ಅಂದ್ರೆ ನಮಗೆ ಹೆಮ್ಮೆ ಅಮ್ಮಾ' ಎಂದು ಮನಸಾರೆ ಹೇಳಿದವರು ಮಕ್ಕಳು. ನಂತರವೂ ಮತ್ತೊಂದು ಸ್ಪರ್ಧೆಯಲ್ಲಿ ಪಾಲ್ಗೊಂಡೆ. ಮತ್ತೆ ಗೆದ್ದೆ! ಆಗ 50 ದಾಟಿತ್ತು. ಆದರೂ ಮಾಡೆಲಿಂಗ್ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡೆ. 

811

ಯಾರಿಗೆ ಬೇಕು ಇಷ್ಟು ವಯಸ್ಸಾದ ಮಾಡೆಲ್ಸ್? 

ಹೀಗೊಮ್ಮೆ ಆಲೋಚಿಸುವಾಗ ಇನ್ನರ್ ವೇರ್ ಕಂಪನಿಗಳು ಸದಾ ಯಂಗಸ್ಟರ್ಸ್ ಮಾಡೆಲ್‌ಗಳನ್ನೇ ಬಳಸುತ್ತಿರುವುದು ಗಮನಕ್ಕೆ ಬಂತು. ಪ್ಲಸ್ ಗಾತ್ರದವರಿಗೆ ಬೇರೆ ಸೆಕ್ಷನ್ ಇದೆ. ಆದರೆ, ನಡು ವಯಸ್ಸು ದಾಟಿದ ಹೆಂಗಳೆಯರಿಗೆ ಮಾತ್ರ ಏನೂ ಇರಲಿಲ್ಲ. ಇದೇ ಯೋಚನೆ ನಂಗೆ ಒಳ ಉಡುಪಿನ ಮಾಡೆಲ್ ಆಗುವ ನನ್ನ ಆಸೆ ಟಿಸಿಲೊಡೆಯುವಂತೆ ಮಾಡಿತು. ಆಗೊಂದು ಸ್ಟಾರ್ಟಪ್ ಕಂಪನಿ ನನ್ನ ಬಳಿಗೆ ಬಂದರೂ ಹತ್ತಿ ಬಟ್ಟೆಯ ಬ್ರಾಗೆ ಮಾಡೆಲ್ ಆಗಬೇಕೆಂದರು.

911

ಹೀಗಾಗಿ ನಾನೇ ಶೂಟ್ ಮಾಡಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದೆ. ಪ್ರತಿಕ್ರಿಯೆ ಅದ್ಭುತವಾಗಿತ್ತು. ಆತ್ಮವಿಶ್ವಾಸ ನೋಡಿ ಖುಷಿ ಪಟ್ಟು, ಬೆನ್ನು ತಟ್ಟಿದವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಮತ್ತೆ ಕೆಲವರು ಸಹಜವಾಗಿಯೇ ಈ ವಯಸಲ್ಲಿ ಇದು ಬೇಕಿತ್ತಾ ಎಂದು ಕುಹಕವಾಡಿದರು. 

1011

ಇದು ಬೂಟಾಟಿಕೆಯಲ್ವಾ? ಸಲ್ಮಾನ್ ಖಾನ್ 60ನೇ ವಯಸ್ಸಿನಲ್ಲಿ ಶರ್ಟ್ ಇಲ್ಲದೆ ತಿರುಗಾಡುವಾಗ, 50ನೇ ವಯಸ್ಸಲ್ಲಿ ಲಿಂಗೇರಿ ಮಾಡೆಲ್ ಆದರೆ ತಪ್ಪೇನು? ಇದರಲ್ಲಿ ಮರ್ಯಾದೆ ಹೋಗುವುದೇನಿದೆ ಹೇಳಿ? 

1111

'ಸುಶಿಕ್ಷಿತ' ಆಪ್ತ ಸ್ನೇಹಿತರೊಬ್ಬರು 'ನೀವೇನು ಮಾಡುತ್ತಿದ್ದೀರಿ? ಎಂದು ಮೂಗು ಮುರಿದು ಕೇಳಿದರು. ಆದರೆ, ನಾನು 15ನೇ ವಯಸ್ಸಿಗೆ ಕಂಡ ಕನಸನ್ನು 50ನೇ ವರ್ಷದಲ್ಲಿ ನನಸಾಗಿಸಿಕೊಂಡೆ. ವಯಸ್ಸು ಯಾರಿಗೂ ಪಂಜರದಂತೆ  ಆಗಲೂಬಾರದು. ಕನಸುಗಳಿಗೂ ಎಕ್ಸ್‌ಪೈರಿ ಡೇಟ್ ಇರೋಲ್ಲ ಅಲ್ಲವೇ?. 
ಅಂದಹಾಗೆ 50ನೇ ವಯಸ್ಸಿನಲ್ಲಿ ಮಾಡೆಲ್ ಆದ ಇವರ ಹೆಸರು ಗೀತಾ.

Read more Photos on
click me!

Recommended Stories