ಫ್ರಿಡ್ಜ್‌ ಸ್ವಚ್ಛಗೊಳಿಸಲು ಟಿಪ್ಸ್‌: ಫಂಗಸ್ ಬರದಂತೆ ತಡೆಯುವುದು ಹೇಗೆ?

First Published | Nov 19, 2024, 4:26 PM IST

ಎಲ್ಲವನ್ನು ತುಂಬಿಡುವ ಫ್ರಿಡ್ಜ್ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕಪ್ಪು ಫಂಗಸ್‌ ಬರುತ್ತದೆ. ಇದರಿಂದ ಆರೋಗ್ಯಕ್ಕೂ ಅಪಾಯ ಹಾಗಿದ್ರೆ. ಫ್ರಿಡ್ಜ್‌ನಲ್ಲಿರುವ ಫಂಗಸ್‌ನ್ನು ಸಲುಭವಾಗಿ ತೆಗೆದು ಸ್ವಚ್ಚಗೊಳಿಸುವುದು ಹೇಗೆ ಅಂತ ಈಗ ನೋಡೋಣ. 

ಫ್ರಿಡ್ಜ್‌ನಲ್ಲಿ ಕಪ್ಪು ಫಂಗಸ್‌ ಬರುವುದು ಸಾಮಾನ್ಯ ಸಮಸ್ಯೆ. ಇದಕ್ಕೆ ಮುಖ್ಯ ಕಾರಣ ಫ್ರಿಡ್ಜ್ ಸರಿಯಾಗಿ ಸ್ವಚ್ಛಗೊಳಿಸದಿರುವುದು ಹಾಗೂ ಒಂದು ಆಹಾರವನ್ನು ದೀರ್ಘಕಾಲ ತೆಗೆಯದೇ ಅಲ್ಲೇ ಇಡುವುದು, ಒಳಗೆ ತೇವಾಂಶ ಇರುವುದು, ಫ್ರಿಡ್ಜ್ ಸದಾ ಸ್ವಿಚ್ ಆನ್ ಮಾಡಿರುವುದು ಹೀಗೆ ಹಲವು ಕಾರಣಗಳಿವೆ. 

ಫ್ರಿಡ್ಜ್ ಸ್ವಚ್ಛಗೊಳಿಸುವ ಸಲಹೆಗಳು: ಕಪ್ಪು ಫಂಗಸ್‌ ಮುಖ್ಯವಾಗಿ ಫ್ರಿಡ್ಜ್‌ನ ಗ್ಯಾಸ್ಕೆಟ್ ಮತ್ತು ಅದರ ಒಳಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಫ್ರಿಡ್ಜ್ ಕೊಳಕಾಗಿದ್ದರೆ ನಮ್ಮ ಆರೋಗ್ಯಕ್ಕೂ ಇದರಿಂದ ತೊಂದರೆ. ಹಾಗಿದ್ರೆ  ಫ್ರಿಡ್ಜ್‌ನಲ್ಲಿರುವ ಕಪ್ಪು ಫಂಗಸ್‌ನ್ನು ತೆಗೆಯುವುದು ಕಷ್ಟ ಎಂದು ನೀವು ಭಾವಿಸಿದರೆ, ಅದನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ಈ ಪೋಸ್ಟ್‌ನಲ್ಲಿ ನೋಡೋಣ.

Tap to resize

ಫ್ರಿಡ್ಜ್‌ನಲ್ಲಿರುವ ಕಪ್ಪು ಫಂಗಸ್ ತೆಗೆಯುವುದು ಹೇಗೆ?

ನಿಂಬೆಹಣ್ಣು

ಫ್ರಿಡ್ಜ್‌ನಲ್ಲಿರುವ ಕಪ್ಪು ಫಂಗಸನ್ನು ಸ್ವಚ್ಛಗೊಳಿಸಲು ನಿಂಬೆಹಣ್ಣು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ. ಈಗ ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ತುಂಬಿಸಿ ಅದರಲ್ಲಿ ನಿಂಬೆರಸವನ್ನು ಹಿಂಡಿ. ಈ ನೀರನ್ನು ಚೆನ್ನಾಗಿ ಕಾಯಿಸಿ ನಂತರ ಫ್ರಿಡ್ಜ್‌ನಲ್ಲಿ ಇರಿಸಿ. 20 ನಿಮಿಷಗಳ ನಂತರ ಫ್ರಿಡ್ಜ್ ತೆರೆದು ಡಿಶ್ ಕ್ಲೀನರ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಫ್ರಿಡ್ಜ್‌ನಲ್ಲಿರುವ ಹಾವಳ ಸುಲಭವಾಗಿ ತೆಗೆಯಬಹುದು. ಜೊತೆಗೆ ಫ್ರಿಡ್ಜ್‌ನಲ್ಲಿ ದುರ್ವಾಸನೆ ಬರುವುದಿಲ್ಲ. ಫ್ರಿಡ್ಜ್ ಸಂಪೂರ್ಣವಾಗಿ ಸ್ವಚ್ಛವಾಗಿ ಮತ್ತು ಹೊಸದಾಗಿ ಕಾಣುತ್ತದೆ.

ಬಿಸಿ ನೀರು & ಸೋಪು

ಇದಕ್ಕಾಗಿ ಬಿಸಿ ನೀರಿನಲ್ಲಿ ಪಾತ್ರೆ ತೊಳೆಯುವ ಸೋಪನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ನೀರಿನಿಂದ ಫ್ರಿಡ್ಜ್‌ನ ಒಳಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದನ್ನು ಮಾಡುವಾಗ ಕೈಗವಸುಗಳನ್ನು ಬಳಸಲು ಮರೆಯಬೇಡಿ. 

ಬೇಕಿಂಗ್ ಸೋಡಾ & ಡಿಶ್‌ವಾಶ್

ಫ್ರಿಡ್ಜ್‌ನಲ್ಲಿರುವ ಫಂಗಸನ್ನು ಸ್ವಚ್ಛಗೊಳಿಸಲು ಒಂದು ವಿಧಾನವೆಂದರೆ ನೀರಿನಲ್ಲಿ ಒಂದು ಚಮಚ ಬೇಕಿಂಗ್ ಸೋಡಾ ಮತ್ತು ಸ್ವಲ್ಪ ಡಿಶ್‌ವಾಶ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಫಂಗಸ್‌ ಮೇಲೆ ವಿನೆಗರ್ ಸಿಂಪಡಿಸಿ ಸುಮಾರು 10 ನಿಮಿಷಗಳ ನಂತರ ಬೇಕಿಂಗ್ ಸೋಡಾ ಮತ್ತು ಡಿಶ್‌ವಾಶ್ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿದರೆ ಫಂಗಸ್‌ ನಿವಾರಣೆಯಾಗುತ್ತದೆ. 

ಗ್ಯಾಸ್ಕೆಟ್ ಸ್ವಚ್ಛಗೊಳಿಸಲು

ಫ್ರಿಡ್ಜ್ ಬಾಗಿಲಿನಲ್ಲಿ ಅಳವಡಿಸಲಾಗಿರುವ ರಬ್ಬರ್‌ನಲ್ಲಿ ಆಗಾಗ್ಗೆ ಫಂಗಸ್‌ ಬರುತ್ತದೆ. ಆದ್ದರಿಂದ ಅದನ್ನು ಸ್ವಚ್ಛಗೊಳಿಸಲು ಅದರ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ ಸುಮಾರು 10 ನಿಮಿಷಗಳ ನಂತರ ಬೇಕಿಂಗ್ ಸೋಡಾದಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಅದರ ಒಳಭಾಗವನ್ನು ಸ್ವಚ್ಛಗೊಳಿಸಲು ಟೂತ್ ಬ್ರಷ್ ಬಳಸಬಹುದು. 

ಗಮನಿಸಿ: ಫ್ರಿಡ್ಜ್ ಸ್ವಚ್ಛಗೊಳಿಸುವ ಮೊದಲು ಮುಖ್ಯವಾಗಿ ಸ್ವಿಚ್ ಆಫ್ ಮಾಡಲು ಮರೆಯದಿರಿ ಮತ್ತು ಫ್ರಿಡ್ಜ್‌ನಲ್ಲಿ ಯಾವುದೇ ಆಹಾರ ಪದಾರ್ಥಗಳು ಇರದಂತೆ ನೋಡಿಕೊಳ್ಳಿ.

ಫ್ರಿಡ್ಜ್‌ನಲ್ಲಿ ಫಂಗಸ್‌ ಬಾರದಂತೆ ತಡೆಯುವುದು ಹೇಗೆ?

1. ಫ್ರಿಡ್ಜ್‌ನಲ್ಲಿ ಫಂಗಸ್‌ ಬಾರದಂತೆ ತಡೆಯಲು ಫ್ರಿಡ್ಜ್‌ನ ತೇವಾಂಶವನ್ನು ಒರೆಸಿ ಮತ್ತು ನೀರು ಸೋರದಂತೆ ನೋಡಿಕೊಳ್ಳಿ.

2. ಫ್ರಿಡ್ಜ್‌ನಲ್ಲಿ ಇಡುವ ಆಹಾರಗಳನ್ನು ತೆರೆದಿಡದೆ ಮುಚ್ಚಿಡಿ.  ಯಾವುದೇ ಆಹಾರವನ್ನು ದೀರ್ಘಕಾಲ ಫ್ರಿಡ್ಜ್‌ನಲ್ಲಿ ಇಡಬೇಡಿ.

3. ವಾರಕ್ಕೊಮ್ಮೆ ಫ್ರಿಡ್ಜ್‌ನಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳನ್ನು ತೆಗೆದು ಫ್ರಿಡ್ಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

4. ಒಮ್ಮೆ ಫ್ರಿಡ್ಜ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಇಲ್ಲದಿದ್ದರೆ ತಿಂಗಳಿಗೊಮ್ಮೆಯಾದರೂ ಮಾಡಿ. ಆಗ ಮಾತ್ರ ಫಂಗಸ್ ಬೆಳೆಯುವುದಿಲ್ಲ.

Latest Videos

click me!