ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ನಮ್ಮ ಆರೋಗ್ಯಕ್ಕೆ, ಚರ್ಮಕ್ಕೆ ಒಳ್ಳೆಯದನ್ನು ಮಾಡುವ ಹಲವು ರೀತಿಯ ಪೋಷಕಾಂಶಗಳು ಹೇರಳವಾಗಿರುತ್ತವೆ. ಪಾಲಕ್, ಎಲೆಕೋಸು ಮುಂತಾದ ಹಸಿರು ತರಕಾರಿಗಳಲ್ಲಿ ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಸಿ ಮುಂತಾದ ಹಲವು ರೀತಿಯ ಪೋಷಕಾಂಶಗಳಿವೆ.
ಈ ಹಸಿರು ತರಕಾರಿಗಳನ್ನು ಹುರಿದು ತಿಂದರೂ, ಅಥವಾ ಸೂಪ್, ತರಕಾರಿ ಸಲಾಡ್‌ಗಳಲ್ಲಿ ಹೇಗೆ ತಿಂದರೂ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಈ ಹಸಿರು ತರಕಾರಿಗಳಲ್ಲಿರುವ ಪೋಷಕಾಂಶಗಳು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಚರ್ಮವನ್ನು ಆರೋಗ್ಯವಾಗಿಡುತ್ತವೆ. ಮುಖ್ಯವಾಗಿ ಇವು ದೇಹಕ್ಕೆ ಹಾನಿಕಾರಕವಾದ ವಿಷವನ್ನು ತೆಗೆದುಹಾಕುತ್ತವೆ.