ಮಗು ರಾತ್ರಿ ಪದೇ ಪದೇ ಎಚ್ಚರಗೊಳ್ಳುತ್ತಾ? ಹಾಗಿದ್ರೆ ಈ ಕೆಲಸ ಮಾಡಿ ನೋಡಿ

First Published | Jun 5, 2021, 4:55 PM IST

ಮಗುವಿಗೆ ಸಾಕಷ್ಟು ನಿದ್ರೆ ಸಿಗದಿದ್ದರೆ ಮತ್ತು ರಾತ್ರಿಯಲ್ಲಿ ಎಚ್ಚರಗೊಂಡು ಕಿರಿಕಿರಿ ಆಗುತಿದ್ದರೆ, ಈ ಸುದ್ದಿ ನಿಮಗೆ ಉಪಯೋಗಕ್ಕೆ ಬರಬಹುದು. ವಾಸ್ತವವಾಗಿ, ಅನೇಕ ತಾಯಂದಿರು ತಮ್ಮ ಮಗು ದಿನವಿಡೀ ಮಲಗುತ್ತದೆ ಮತ್ತು ರಾತ್ರಿ ಎಚ್ಚರಗೊಳ್ಳುತ್ತದೆ, ಇದರಿಂದ ಇಡೀ ಮನೆಗೆ ತೊಂದರೆ ಎಂದು ದೂರುತ್ತಾರೆ. ನಿಮಗೂ ಈ ಸಮಸ್ಯೆ ಇದ್ದರೆ ಗಾಬರಿಯಾಗಬೇಡಿ. ಇಲ್ಲಿ ಮಗು ರಾತ್ರಿ ಮಲಗದಿರಲು ಕಾರಣಗಳೇನು, ಇದಕ್ಕಾಗಿ ಏನು ಮಾಡಬೇಕು ಎಂಬುದನ್ನೂ ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿಯಿರಿ. 

ಮಗುವಿನ ನಿದ್ರೆ ಏಕೆ ಪೂರ್ಣಗೊಳ್ಳಬೇಕು?ಚಿಕ್ಕ ಮಗುತನ್ನ ನಿದ್ರೆಯನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ, ಏಕೆಂದರೆ ಇದು ಮಗುವಿನ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಮಗುವನ್ನು ಉತ್ತಮ ಮನಸ್ಥಿತಿಯಲ್ಲಿರಿಸುತ್ತದೆ. ಮಗುವಿಗೆ ನಿದ್ರೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಅದು ಅಳುತ್ತದೆ ಅಥವಾ ದಿನವಿಡೀ ಸಿಡುಕುತ್ತದೆ .
ಇವುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.ಮಕ್ಕಳು ಮುಗ್ಧರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅವರು ಸೂಕ್ಷ್ಮಮತ್ತು ನಿಮ್ಮ ಇರುವಿಕೆಯ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ತೊಡೆಮೇಲೆ ಮಲಗಿಸಿ ಅಥವಾ ಮಗುವಿನ ಪಕ್ಕದಲ್ಲಿ ಸ್ವಲ್ಪ ಸಮಯ ಮಲಗಿ. ಇದರಿಂದ ಮಗು ಸುರಕ್ಷಿತ ಭಾವನೆ ಹಾಗೂ ಆರಾಮವಾಗಿ ನಿದ್ರಿಸುತ್ತದೆ.
Tap to resize

ಮಗುವಿಗೆ ಹಸಿವಾದರೆ, ಅದು ಎಂದಿಗೂ ಸರಿಯಾಗಿ ಮಲಗುವುದಿಲ್ಲ. ಮತ್ತೆ ಮತ್ತೆ ಮಗು ನಿದ್ರೆಗೆ ಜಾರುತ್ತದೆ. ಆದ್ದರಿಂದ ಮಗು ನಿದ್ದೆ ಮಾಡುವ ಸಮಯದಲ್ಲಿ ಆಹಾರ ನೀಡಿ, ಇದರಿಂದ ಹೊಟ್ಟೆ ತುಂಬುತ್ತದೆ ಮತ್ತು ಆರಾಮವಾಗಿ ಮಲಗಬಹುದು.
ಮಕ್ಕಳಿಗೆ ಮಸಾಜ್ ಮಾಡುವುದರಿಂದ ಅವರ ದೇಹಕ್ಕೆ ಸಾಕಷ್ಟು ಆರಾಮವೂ ಸಿಗುತ್ತದೆ. ಆದ್ದರಿಂದ ಹಗುರವಾದ ಕೈಗಳಿಂದ ಮಕ್ಕಳ ದೇಹಕ್ಕೆ ಮಸಾಜ್ ಮಾಡಿ.
ಮಕ್ಕಳಿಗೆ ಮಸಾಜ್ ಮಾಡುವುದು ಅವರಿಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಸ್ವಲ್ಪ ಸಮಯದ ನಂತರ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದ ನಂತರ ಮಗುವನ್ನು ಮಲಗಿಸಿ. ಇದರಿಂದ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆ.
ಮಗುವಿಗೆ ಸ್ನಾನ ಮಾಡಲು ಯಾವಾಗಲೂ ಉಗುರುಬೆಚ್ಚಗಿನ ನೀರನ್ನು ಬಳಸಿ. ಇದರಿಂದ ನವಜಾತ ಶಿಶುವಿಗೆ ಸಾಕಷ್ಟು ಸಮಾಧಾನ ದೊರೆತು ಅವರಿಗೆ ಉತ್ತಮ ನಿದ್ರೆ ಬರುತ್ತದೆ.
ಮಲಗುವಾಗ ಮಗುವಿಗೆ ಡೈಪರ್ ಹಾಕಿ. ಆಗಾಗ್ಗೆ ಮೂತ್ರವು ಅವನ ಹಾಸಿಗೆಯನ್ನು ಒದ್ದೆ ಮಾಡುತ್ತದೆ. ಒದ್ದೆಯಾದರೆ ಮಕ್ಕಳು ಸರಿಯಾಗಿ ನಿದ್ರಿಸೋಲ್ಲ.
ಮಗು ಮಲಗುವಾಗ ಹಾಡು ಅಥವಾ ಕಥೆಗಳನ್ನು ಹೇಳುತ್ತಾ ಮಲಗಿಸಿ, ಇದರಿಂದ ಮಗುವಿಗೆ ಬೇಗನೆ ನಿದ್ರೆ ಬರುತ್ತದೆ. ಕಥೆ, ಪದ್ಯಗಳು ಮಗುವಿಗೆ ಅರ್ಥವಾಗಬೇಕೆಂದೇನೂ ಇಲ್ಲ, ಭಾವನೆಗಳು ಅರ್ಥವಾದರೆ, ನೀವು ಜೊತೆಗಿದ್ದೀರಿ ಎಂಬ ಭಾವದಿಂದ ಮಗು ಬೇಗನಿದ್ದೆ ಮಾಡುತ್ತದೆ.
ಸಾಮಾನ್ಯವಾಗಿ ಮಕ್ಕಳಿಗೆ ಮೊದಲ 6 ತಿಂಗಳಲ್ಲಿ ಮಲಗಲು ಯಾವ ಸಮಯವೆಂದು ಇರುವುದಿಲ್ಲ, ಶಿಶುಗಳು ಯಾವುದೇ ಕಾರಣವಿಲ್ಲದೆ ರಾತ್ರಿಸಮಯದಲ್ಲಿ ಎಚ್ಚರಗೊಳ್ಳಬಹುದು,
ಪ್ರತಿದಿನ ಮಗು ರಾತ್ರಿ ಎಚ್ಚರಗೊಳ್ಳುತ್ತಿದ್ದು, ಸರಿಯಾಗಿ ನಿದ್ರೆಯೇ ಮಾಡದೇ ಹೋದಲ್ಲಿಕೆಲವುಸಮಸ್ಯೆಗಳನ್ನು ಹೊಂದಿರಬಹುದು. ಆದಷ್ಟು ಬೇಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Latest Videos

click me!