Home remedies: ಇಲಿಗಳನ್ನು ಕೊಲ್ಲದೆ ಮನೆಯಿಂದ ಓಡಿಸೋಕೆ ಈ ಟಿಪ್ಸ್ ಟ್ರೈ ಮಾಡಿ

First Published | Nov 7, 2021, 4:12 PM IST

ಸಾಮಾನ್ಯವಾಗಿ ಮನೆಗಳಲ್ಲಿ ಹೆಚ್ಚು ಸಮಯದವರೆಗೆ ವಸ್ತುಗಳನ್ನು ಒಂದೆಡೆ ರಾಶಿ ಹಾಕಿದ್ದರೆ ಅಲ್ಲಿ ಇಲಿಗಳು (rats) ಸಾಮನ್ಯವಾಗಿ ಸೇರಿಕೊಳ್ಳುತ್ತವೆ.  ನಿಮ್ಮ ಮನೆಯಲ್ಲಿ ಇಲಿಗಳು ಭೀತಿಯನ್ನು ಸೃಷ್ಟಿಸಿದ್ದರೆ  ಚಿಂತಿಸಬೇಕಾಗಿಲ್ಲ. ಇಲಿಗಳು ಮನೆಯಿಂದ ಓಡಿಹೋಗಲು ಕೆಲವು ಸಲಹೆಗಳು ಇಲ್ಲಿವೆ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಈ ಮನೆಮದ್ದುಗಳನ್ನು ಬಳಸುವುದರಿಂದ ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಗೆ ಓಡಿಸಬಹುದು.

ಅನೇಕ ಜನರು ಇಲಿಗಳಿಂದ ತೊಂದರೆಗೊಳಗಾಗುತ್ತಾರೆ. ಹಳ್ಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ನಗರಗಳಲ್ಲಿ ಇಲಿಗಳು ಜನರ ಸಂಕಟಗಳನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ಬಟ್ಟೆ, ಅಡುಗೆ ಮನೆಯ ವಸ್ತುಗಳಂತಹ ವಸ್ತುಗಳು ಹೆಚ್ಚಾಗಿ ಇಲಿಗಳಿಂದ ನಾಶವಾಗುತ್ತವೆ. ತಿಳಿಯದೆ ಇಲಿಗಳು ಸ್ಪರ್ಶಿಸಿದ ಆಹಾರವನ್ನು ನಾವೇನಾದರೂ ತಿಂದರೆ ಅದು ನಮ್ಮ ದೇಹಕ್ಕೆ ಅಪಾಯಕಾರಿಯೂ (dangerouse) ಆಗಬಹುದು. 

ಮಾರುಕಟ್ಟೆಯಲ್ಲಿ ಇಲಿಗಳನ್ನು ಕೊಲ್ಲಲು ಅನೇಕ ವಿಷಕಾರಿ ಔಷಧಿಗಳಿವೆ (rat poison). ಬಳಸಿದಾಗ ಅವು ಸಾಯುತ್ತವೆ, ಆದರೆ ವಾಸನೆ ಮನೆಯಲ್ಲಿ ಹರಡುತ್ತದೆ ಮತ್ತು ಅದನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಗೆ ಓಡಿಸಬಹುದು. ಇಲಿಗಳನ್ನು ಕೊಲ್ಲದೆ ಮನೆಯಿಂದ ಓಡಿಹೋಗಲು ಇಲ್ಲಿ ಒಂದಿಷ್ಟು ಸರಳ ಮನೆಮದ್ದುಗಳಿವೆ. 

Tap to resize

ಪುದೀನಾ (mint leaves): ನಿಮ್ಮ ಮನೆಯಲ್ಲಿರುವ ಇಲಿಗಳು ಭಯವನ್ನು ಹರಡಿದ್ದರೆ, ಈ ಸಮಸ್ಯೆಯನ್ನು ತೊಡೆದು ಹಾಕಲು ಪುದೀನಾ ಎಲೆ ಅಥವಾ ಹೂವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಇಲಿ ಬಿಲದ ಬಳಿ ಅಥವಾ ಮುಂಬರುವ ಸ್ಥಳಗಳ ಬಳಿ ಇರಿಸಿ. ಅದರ ವಾಸನೆಯನ್ನು ಕಂಡುಕೊಂಡ ನಂತರ ಇಲಿಗಳು ತಕ್ಷಣ ಓಡಿಹೋಗುತ್ತದೆ. ಮತ್ತೆ ವಾಪಸ್ ಬರೋದಿಲ್ಲ. 

ಪಲಾವ್ ಎಲೆ  (bay leaves): ಸಾಮಾನ್ಯವಾಗಿ ಪಲಾವ್, ಬಿರಿಯಾನಿಗಳಲ್ಲಿ ಬಳಕೆ ಮಾಡಲಾಗುವ ಪಲಾವ್ ಎಲೆ ಅಥವಾ ಬೇ ಲೀಪ್ ಉತ್ತಮ ಔಷಧವಾಗಿದೆ.  ಮಸಾಲೆಗಳಾಗಿ ಬಳಸುವ ಬೇ ಲೀಫ್ ಇಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದರ ಸುಗಂಧವು ತುಂಬಾ ತೀಕ್ಷ್ಣವಾಗಿದೆ. ಆದ್ದರಿಂದ ಇಲಿಗಳು ಹೆಚ್ಚು ಬರುವ ಮನೆಯಲ್ಲಿ ನೀವು ಬೇ ಲೀಫ್ ಅನ್ನು ಇಡಬಹುದು. 

ಫಿನೈಲ್ ಮಾತ್ರೆಗಳು (phenyl tablets): ಫಿನೈಲ್ ಮಾತ್ರೆಗಳು ಬಲವಾದ ವಾಸನೆಯನ್ನು ಗ್ರಹಿಸುತ್ತದೆ. ಇದರಿಂದ ಇಲಿಗಳು ಓಡಿಹೋಗುವ ಸಾಧ್ಯತೆ ಇದೆ. ಇದಕ್ಕಾಗಿ ನೀವು ಫಿನೈಲ್ ಮಾತ್ರೆಗಳನ್ನು ಬಟ್ಟೆಗಳಲ್ಲಿ ಇಟ್ಟುಕೊಳ್ಳಬೇಕು. ಈ ಮೂಲಕ ಇಲಿಗಳು ಮನೆಗೆ ಬರುವುದಿಲ್ಲ. ಅಥವಾ ಅದನ್ನು ಮನೆಯ ಮೂಲೆ ಮೂಲೆಗಳಲ್ಲಿ ಇಟ್ಟರೂ ಸಹ ಇದರ ವಾಸನೆಗೆ ಇಲಿಗಳು ದೂರ ಹೋಗುತ್ತವೆ. 

ಕೆಂಪು ಮೆಣಸಿನಕಾಯಿ (red chillies): ಕೆಂಪು ಮೆಣಸಿನಕಾಯಿ  ಎಷ್ಟೊಂದು ಖಾರ ಮತ್ತು ಅದರ ವಾಸನೆ ಎಷ್ಟೊಂದು ಎಫೆಕ್ಟಿವ್ ಅನ್ನೋದು ನಿಮಗೆ ಗೊತ್ತೇ ಇದೆ. ತಿನ್ನಲು ಬಳಸುವ ಕೆಂಪು ಮೆಣಸಿನಕಾಯಿಗಳು ಇಲಿಗಳನ್ನು ಓಡಿಸಲು ತುಂಬಾ ಪರಿಣಾಮಕಾರಿಯಾಗಿವೆ. ಇಲಿಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡಲು ಇಲಿಗಳು ಹೆಚ್ಚು ಬರುವ ಸ್ಥಳಕ್ಕೆ ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ.

ಈರುಳ್ಳಿ  (onion): ಈರುಳ್ಳಿ ಇಲಿಗಳನ್ನು ಓಡಿಸಲು ಇದು ನೈಸರ್ಗಿಕ ಮಾರ್ಗವಾಗಿದೆ. ಏಕೆಂದರೆ ಇಲಿಗಳು ಈರುಳ್ಳಿಯ ವಾಸನೆಯನ್ನು ಇಷ್ಟಪಡೋದಿಲ್ಲ. ಇದಕ್ಕಾಗಿ, ಇಲಿ ಬಿಲದ ಬಳಿ ಅಥವಾ ಅವು ಹೆಚ್ಚು ಬರುವ ಸ್ಥಳಗಳಲ್ಲಿ ಈರುಳ್ಳಿಯ ತುಂಡನ್ನು ಇರಿಸಿ. ಈರುಳ್ಳಿಯ ಗಾಢ ವಾಸನೆಗೆ ಇಲಿಗಳು ದೂರ ಓಡಿ ಹೋಗುತ್ತವೆ. ಬೇಕಾದರೆ ಟ್ರೈ ಮಾಡಿ ನೋಡಿ. 
 

ಮಾನವನ ಕೂದಲು (Human Hair): ಇಲಿಗಳನ್ನು ಮನೆಯಿಂದ ಹೊರಗೆ ಓಡಿಸಲು ಅತ್ಯಂತ ಸುಲಭ ಮಾರ್ಗವೆಂದರೆ ಮಾನವ ಕೂದಲು. ಮಾನವನ ಕೂದಲು ಸಹ ಇಲಿಗಳನ್ನು ಓಡಿಸಲು ಅತ್ಯುತ್ತಮ ಮಾರ್ಗವಾಗಿದೆ. ಏಕೆಂದರೆ ಅದು ಕಪ್ಪಾಗಿರುವುದರಿಂದ ಇಲಿ ಅದರ ಹತ್ತಿರ ಬರಲು ತುಂಬಾ ಹೆದರುತ್ತಾರೆ. ಆದುದರಿಂದ ಈ ಸುಲಭ ಟ್ರಿಕ್ಸ್ ನೀವು ಟ್ರೈ ಮಾಡಬಹುದು. 

Latest Videos

click me!