ಮೆಣಸಿನಕಾಯಿ ಗಿಡದ ಪಾಟ್‌ನಲ್ಲಿ ಈ 2 ಪದಾರ್ಥ ಬೆರೆಸಿ; ಕಾಯಿಗಳ ಸಂಖ್ಯೆ, ಗಾತ್ರ ಎರಡೂ ಹೆಚ್ಚಾಗುತ್ತೆ

Published : Mar 07, 2026, 03:38 PM IST

Chilli plant care tips: ನಿಮ್ಮ ಅಡುಗೆಮನೆಯಲ್ಲಿಯೇ ಲಭ್ಯವಿರುವ ಕೆಲವು ಸಾವಯವ ಪದಾರ್ಥಗಳನ್ನು ಬಳಸಿಕೊಂಡು ಮೆಣಸಿನಕಾಯಿ ಗಿಡದಲ್ಲಿ ಬಂಪರ್ ಇಳುವರಿ ಪಡೆಯುವುದು ಹೇಗೆ ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.     

PREV
15
ಹೇರಳವಾದ ಇಳುವರಿ ನೀಡುತ್ತೆ

ಗಾರ್ಡನಿಂಗ್ ಅಭ್ಯಾಸ ಇರುವವರು, ತರಕಾರಿ ಪ್ರಿಯರು ಸಾಮಾನ್ಯವಾಗಿ ತಮ್ಮ ಬಾಲ್ಕನಿ ಅಥವಾ ಟೆರೇಸ್‌ ಮೇಲೆ ಮೆಣಸಿನಕಾಯಿ ಬೀಜ ಹಾಕುತ್ತಾರೆ. ಏಕೆಂದರೆ ಹಸಿರುಮೆಣಸಿನಕಾಯಿ ಇಲ್ಲದೆ ಅಡುಗೆ ಅಪೂರ್ಣ. ಆದರೆ ಗಿಡದಲ್ಲಿ ಕಾಯಿ ಹೆಚ್ಚು ಬಿಡುವುದಿಲ್ಲ ಎಂಬುದು ಬಹುತೇಕರ ಚಿಂತೆ, ದೂರು.

ಇನ್ಮೇಲೆ ಈ ಸಮಸ್ಯೆಯನ್ನ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಕೆಲವು ಮನೆಮದ್ದು ಉಪಯೋಗಿಸುವುದರಿಂದ ಮೆಣಸಿನಕಾಯಿ ಗಿಡಗಳು ಹೇರಳವಾದ ಇಳುವರಿ ನೀಡುತ್ತವೆ. ಹಾಗಾದರೆ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುವ, ಮನೆಯಲ್ಲಿ ತಯಾರಿಸಿದ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

25
1.ಹಸುವಿನ ಸಗಣಿ ಗೊಬ್ಬರ (Cow Dung Fertilizer)

ಮೆಣಸಿನಕಾಯಿ ಗಿಡದ ಉತ್ತಮ ಇಳುವರಿಗೆ ಪೊಟ್ಯಾಶಿಯಂ, ರಂಜಕ ಮತ್ತು ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಅತಿಯಾದ ಸಾರಜನಕ (Nitrogen) ಬಳಕೆಯಿಂದ ಗಿಡ ಕೇವಲ ಎಲೆಗಳಿಂದ ಸಮೃದ್ಧವಾಗಿ ಬೆಳೆಯುತ್ತದೆಯೇ ಹೊರತು ಕಾಯಿ ಬಿಡುವುದಿಲ್ಲ. ಚೆನ್ನಾಗಿ ಕೊಳೆತ ಹಸುವಿನ ಸಗಣಿ ಅಥವಾ ವರ್ಮಿಕಾಂಪೋಸ್ಟ್ ಬಳಸುವುದರಿಂದ ಗಿಡದ ಬೇರುಗಳು ಬಲಗೊಳ್ಳುತ್ತವೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

35
2. ಮರದ ಬೂದಿ ಮತ್ತು ಕ್ಯಾಲ್ಸಿಯಂ ಪೂರೈಕೆ

ಮರದ ಬೂದಿ:ಇದು ಪೊಟ್ಯಾಶಿಯಂ ಮತ್ತು ರಂಜಕದ ಉತ್ತಮ ಮೂಲವಾಗಿದ್ದು, ಗಿಡಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ.
ಕ್ಯಾಲ್ಸಿಯಂ:ಮೊಟ್ಟೆಯ ಚಿಪ್ಪಿನ ಪುಡಿ, ಸುಣ್ಣ ಅಥವಾ ಸೀಮೆಸುಣ್ಣದ ಪುಡಿಯನ್ನು ಬಳಸುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.
ಬಳಕೆ:ಇವುಗಳನ್ನು ನೀರಿನಲ್ಲಿ ಕರಗಿಸಿ ಪ್ರತಿ ಮೂರು ವಾರಕ್ಕೊಮ್ಮೆ ಗಿಡದ ಬುಡಕ್ಕೆ ಹಾಕುವುದರಿಂದ ಮೆಣಸಿನಕಾಯಿಗಳ ಗಾತ್ರ ದೊಡ್ಡದಾಗುತ್ತದೆ.

45
3. ಮನೆಯಲ್ಲಿ ತಯಾರಿಸಿದ ಪೋಷಕಾಂಶ ದ್ರಾವಣ

ತಯಾರಿಸುವ ವಿಧಾನ:ಬಾಳೆಹಣ್ಣಿನ ಸಿಪ್ಪೆ, ಈರುಳ್ಳಿ ಸಿಪ್ಪೆ ಮತ್ತು ತರಕಾರಿ ತ್ಯಾಜ್ಯಗಳನ್ನು 2 ರಿಂದ 3 ವಾರಗಳ ಕಾಲ ನೀರಿನಲ್ಲಿ ನೆನೆಸಿಡಿ.
ಪ್ರಯೋಜನ:ಈ ದ್ರಾವಣವನ್ನು ಸೋಸಿ ಗಿಡಗಳಿಗೆ ಹಾಕುವುದರಿಂದ ಕಬ್ಬಿಣಾಂಶ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತವೆ.

55
ಗಮನಿಸಬೇಕಾದ ಮುಖ್ಯ ಅಂಶಗಳು:

ಸೂರ್ಯನ ಬೆಳಕು:ಮೆಣಸಿನಕಾಯಿ ಗಿಡಗಳನ್ನು ಯಾವಾಗಲೂ ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇಡಬೇಕು.
ನೀರಿನ ನಿರ್ವಹಣೆ: ಗಿಡಕ್ಕೆ ಅತಿಯಾಗಿ ನೀರು ಹಾಕಬಾರದು. ಹೆಚ್ಚು ನೀರು ಹಾಕುವುದರಿಂದ ಹೂವುಗಳು ಉದುರುತ್ತವೆ ಮತ್ತು ಬೇರುಗಳು ಕೊಳೆಯುವ ಸಾಧ್ಯತೆ ಇರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories