ಸಣ್ಣ ರೂಮನ್ನು ದೊಡ್ಡದಾಗಿ ಕಾಣುವಂತೆ ಹೀಗೆ ರೀ- ಡಿಸೈನ್ ಮಾಡಿ..

First Published Apr 24, 2021, 4:29 PM IST

ಪ್ರತಿಯೊಬ್ಬರ ಮನೆಯಲ್ಲಿ ಕನಿಷ್ಠ ಒಂದು ಕೋಣೆ ತುಂಬಾ ಚಿಕ್ಕದಾಗಿ ಕಾಣುತ್ತದೆ ಮತ್ತು ಅಲಂಕರಿಸಲು ಕಷ್ಟ ಅನಿಸುತ್ತದೆ. ರಿಸೆಸ್ಡ್ ಲೈಟಿಂಗ್, ಗಾಜಿನ ಟೇಬಲ್ ಮತ್ತು ತಿಳಿ ಬಣ್ಣಗಳಂತಹ ವೈಶಿಷ್ಟ್ಯಗಳೊಂದಿಗೆ,  ಕೋಣೆ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಈ ಸಲಹೆಗಳನ್ನು ಪ್ರಯತ್ನಿಸಿ. ಈ ಕೆಳಗಿನ ಹೆಚ್ಚಿನ ಡಿಸೈನರ್ ತಂತ್ರಗಳನ್ನು ಯಾವುದೇ ಕೋಣೆಗೆ ಅನ್ವಯಿಸಬಹುದು:

ದೊಡ್ಡ ಕೋಣೆಯಂತೆ ಕಾಣಲು, ಪ್ರಕಾಶಮಾನವಾದ ಅಥವಾ ಡಾರ್ಕ್ಗಿಂತ ಹಗುರವಾದ ಬಣ್ಣದ ಪೈಂಟಿಂಗ್ ಮಾಡಿಸಿ. ಪೇಸ್ಟಲ್ಗಳು ಮತ್ತು ಬಿಳಿ ಬಣ್ಣ ಸಹ ಪೈಂಟಿಂಗ್ ಮಾಡಿಸಬಹುದು.
undefined
ಪೀಠೋಪಕರಣಗಳು, ರಗ್ಗುಗಳು ಮತ್ತು ಗೋಡೆಗಳ ಮೇಲೆ ಏಕವರ್ಣದ ಯೋಜನೆ ಬಳಸಿ. ಒಂದೇ ಬಣ್ಣದ ವಿವಿಧ ಶೇಡ್ಸ್ ಮತ್ತು ವಿನ್ಯಾಸಗಳನ್ನು ಆಯ್ಕೆ ಮಾಡಿ.
undefined
ಸ್ಥಳವನ್ನು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಲೈಟಿಂಗ್ ಒಂದು ಪ್ರಮುಖ ಅಂಶ. ರಿಸೆಸ್ಡ್ ಸ್ಪಾಟ್ ಲೈಟಿಂಗ್ ದೃಷ್ಟಿಗೆ ಆಕರ್ಷಕವಾಗಿದೆ ಮತ್ತು ಸಣ್ಣ ಸ್ಥಳಕ್ಕೆ ಸೂಕ್ತವಾಗಿದೆ. ಸ್ಕೈಲೈಟ್‌ಗಳು ಮತ್ತು ಸೌರ ಟ್ಯೂಬ್‌ಗಳು ಕೋಣೆಗೆ ಬೆಳಕನ್ನು ಸೇರಿಸಲು ನೈಸರ್ಗಿಕ ಪರ್ಯಾಯಗಳಾಗಿವೆ.
undefined
ನೆಲ ಮತ್ತು ಛಾವಣಿಯು ಪ್ರತಿ ಕೋಣೆಯ ಐದು ಮತ್ತು ಆರನೇ ಗೋಡೆಗಳಾಗಿವೆ. ತಿಳಿ ಓಕ್ ಅಥವಾ ತಿಳಿ ಬಣ್ಣದ ನೆಲಹಾಸು ಕೋಣೆಯನ್ನು ಪ್ರಕಾಶಮಾನವಾಗಿ ಮತ್ತು ಹೆಚ್ಚು ತೆರೆದಂತೆ ಕಾಣುವಂತೆ ಮಾಡುತ್ತದೆ.
undefined
ಕೋಣೆ ಹೆಚ್ಚು ಓಪನ್ ಅಪ್ ಆಗಿ ಕಾಣಲು ತಿಳಿ ಬಣ್ಣದ ಚಾವಣಿ ಅಥವಾ ತಿಳಿ ಮಣ್ಣದ ಕಾರ್ಪೆಟ್ ಬಳಸಿದರೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
undefined
ವಾಲ್ ಮಿರರ್ಸ್ ಸೇರಿಸುವ ಮೂಲಕ ಕೋಣೆಯ ಗಾತ್ರ ಹೆಚ್ಚಿಸಿದಂತೆ ಮಾಡಬಹುದು. ಅವು ಚಿತ್ರಗಳನ್ನು ಪ್ರತಿಬಿಂಬಿಸುತ್ತವೆ ಮಾತ್ರವಲ್ಲ, ಅವು ಬೆಳಕು ಮತ್ತು ಬಣ್ಣವನ್ನು ಪ್ರತಿಬಿಂಬಿಸುತ್ತವೆ.
undefined
ಸಂಪೂರ್ಣ ಗೋಡೆಯನ್ನು ಪ್ರತಿಬಿಂಬಿಸಲು ಕನ್ನಡಿ ಟೈಲ್ಸ್ಬಳಸಿ. ನಿಮ್ಮ ಕೋಣೆಯು ಗಾತ್ರದಲ್ಲಿ ದ್ವಿಗುಣಗೊಳ್ಳುತ್ತದೆ.
undefined
click me!