ನವಜಾತ ಶಿಶುವಿಗೆ ಯಾವಾಗ ಮಸಾಜ್ ಮಾಡಲು ಪ್ರಾರಂಭಿಸಬೇಕು?: ನವಜಾತ ಶಿಶುವಿನ ದೇಹವು ಅತ್ಯಂತ ಸೂಕ್ಷ್ಮವಾಗಿದೆ, ಆದ್ದರಿಂದ ಅದರ ಆರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಇನ್ ಫೆಂಟ್ ಮಸಾಜ್ (IAIM) ಪ್ರಕಾರ, ಮಗುವಿನ ಮಸಾಜ್ ಅನ್ನು ಹುಟ್ಟಿದ ಕೆಲವು ವಾರಗಳ ನಂತರ ಪ್ರಾರಂಭಿಸಬಹುದು. ಆದಾಗ್ಯೂ, ಜನನದ ನಂತರ ಪೋಷಕರ ದೈಹಿಕ ಸಂಪರ್ಕವು (physical connection)ಸಾಧ್ಯವಾದಷ್ಟು ಬೇಗ ಪ್ರಾರಂಭವಾಗಬೇಕು.
ಪೋಷಕರು ಎದೆಯ ಮೇಲೆ ಮಗುವನ್ನು ಮಲಗಿಸಿ, ಮಗುವಿನ ಜೊತೆಗೆ ಚರ್ಮದ ಸ್ಪರ್ಶ ಮಾಡುವುದು ತುಂಬಾನೇ ಮುಖ್ಯವಾಗಿದೆ. (ಅಂದರೆ ನಿಮ್ಮ ಮತ್ತು ಮಗುವಿನ ನಡುವೆ ಚರ್ಮದ ಸಂಪರ್ಕ ಇರಬೇಕು). ಈ ಮಧ್ಯೆ, ನೀವು ನಿಧಾನವಾಗಿ ಮಗುವಿನ ಸೊಂಟ ಮತ್ತು ಕಾಲಿನ ಮೇಲೆ ನಿಮ್ಮ ಕೈಗಳನ್ನು ಬಹಳ ಹಗುರವಾಗಿ ಚಲಿಸುತ್ತೀರಿ. ನಂತರ ಅವರ ಕೈಗಳ ಮೇಲೆ ನಿಮ್ಮ ಚರ್ಮ ಸ್ಪರ್ಶಿಸುವಂತಿರಲಿ.
ಮಗುವಿಗೆ ಎಷ್ಟು ಬಾರಿ ಮಸಾಜ್ ಮಾಡಬೇಕು?: ಮಗುವಿಗೆ ಎಷ್ಟು ಬಾರಿ ಮಸಾಜ್ ಮಾಡಬೇಕು ಎಂಬ ಪ್ರಶ್ನೆ ಇದ್ದರೆ, ಅದು ಸಂಪೂರ್ಣವಾಗಿ ನಿಮ್ಮ ಮತ್ತು ನಿಮ್ಮ ಮಗುವಿನ ಮೇಲೆ ಅವಲಂಬಿತವಾಗಿದೆ ಎಂದು ಐಎಐಎಂ ಹೇಳುತ್ತದೆ. ಕೆಲವು ಕುಟುಂಬಗಳು ಪ್ರತಿದಿನ ಮಗುವಿಗೆ ಮಸಾಜ್ ನೀಡುತ್ತವೆ ಮತ್ತು ಕೆಲವು ಕುಟುಂಬಗಳು ವಾರದಲ್ಲಿ ಮೂರು ದಿನ ಮಸಾಜ್ ನೀಡುತ್ತವೆ.
ಕೆಲವು ಶಿಶುಗಳು ಬೆಳಿಗ್ಗೆ ಸ್ನಾನ ಮಾಡಿದ ನಂತರ ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಲು ಬಯಸುತ್ತವೆ, ಇತರರು ರಾತ್ರಿ ಮಲಗುವ ಮೊದಲು ಮಸಾಜ್ ಮಾಡಬಹುದು. ಮಗುವೇ ಮಸಾಜ್ ಗಾಗಿ ತನ್ನ ಮನಸ್ಥಿತಿಯನ್ನು ಹೇಳುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಮಸಾಜ್ ಮಾಡುವಾಗ ಹೆಚ್ಚಿನ ಗಮನ ಹರಿಸಬೇಕು. ಯಾಕೆಂದರೆ ಮಕ್ಕಳ ತ್ವಚೆ (skin) ತುಂಬಾ ನಾಜೂಕಾಗಿರುತ್ತದೆ.
ಮಸಾಜ್ ನ ಮನಸ್ಥಿತಿಯನ್ನು ಮಗು ಹೇಗೆ ಹೇಳುತ್ತದೆ?: ಮಸಾಜ್ ಮಾಡುವಾಗ ಮಗುವಿನ ಮನಸ್ಥಿತಿಯನ್ನು ನೀವು ನೋಡಿಕೊಳ್ಳಬೇಕು ಎಂದು ಐಎಐಎಂ ಹೇಳುತ್ತದೆ. ಮಗುವಿಗೆ ಮಸಾಜ್ ಮಾಡಲು ಶಾಂತ ಮತ್ತು ಆರಾಮದಾಯಕ ಸ್ಥಳವನ್ನು ಆಯ್ಕೆ ಮಾಡಿ. ಮತ್ತೊಂದೆಡೆ, ಮಸಾಜ್ ನ ಆರಂಭದಲ್ಲಿ ನಿಮ್ಮ ಮಗು ಶಾಂತವಾಗಿದ್ದರೆ ಮತ್ತು ನಿಮ್ಮನ್ನು ನೋಡಿದರೆ ಅಥವಾ ಅವರ ದೇಹವನ್ನು ನಿರಾಳವಾಗಿರಿಸಿದರೆ, ಮಗುವಿಗೆ ಮಸಾಜ್ ಇಷ್ಟವಾಗುತ್ತದೆ ಎಂದರ್ಥ.
ಮತ್ತೊಂದೆಡೆ, ಮಗುವು ನಿಮ್ಮಿಂದ ದೂರ ಸರಿಯಲು ಪ್ರಯತ್ನಿಸಿದರೆ ಅಥವಾ ಮಸಾಜ್ ಸಮಯದಲ್ಲಿ ತನ್ನ ಕೈ ಮತ್ತು ಕಾಲುಗಳನ್ನು ಬಿಗಿಗೊಳಿಸಿಕೊಂಡರೆ ಮಗುವಿಗೆ ಮಸಾಜ್ ಮಾಡೋದು ಇಷ್ಟವಿ ಲ್ಲ ಎಂದು ಅರ್ಥ. ಈ ಸನದರ್ಭದಲ್ಲಿ ನೀವು ಮಗುವಿಗೆ ಮಸಾಜ್ ಮಾಡದೇ ಇರುವುದು ಬೆಸ್ಟ್.
ಮಗುವಿನ ಮಸಾಜ್ ಗೆ ಅತ್ಯುತ್ತಮ ಎಣ್ಣೆ: ಇತ್ತೀಚಿನ ದಿನಗಳಲ್ಲಿ ಬೇಬಿ ಆಯಿಲ್ ಮಾರುಕಟ್ಟೆಗೆ ಬಂದಿದೆ ಇದರಿಂದ ಮಗುವಿಗೆ ಮಸಾಜ್ ಮಾಡಬಹುದು. ಆದಾಗ್ಯೂ, ಮಗುವಿಗೆ ಮಸಾಜ್ ಮಾಡಲು ಸಸ್ಯಜನ್ಯ ಎಣ್ಣೆಯನ್ನು ಬಳಸಬೇಕು ಎಂದು ಐಎಐಎಂ ಹೇಳುತ್ತದೆ. ಇದು ಬಹಳ ಕಡಿಮೆ ವಾಸನೆ ಅಥವಾ ಉತ್ತಮ ವಾಸನೆಯನ್ನು ಹೊಂದಿದೆ.
ಮಗುವಿನ ಮೂಸಿ ನೋಡುವ ಶಕ್ತಿ (smelling power) ತುಂಬಾ ಹೆಚ್ಚಾಗಿದೆ, ಇದು ಸುವಾಸನೆಯ ಎಣ್ಣೆಗಳನ್ನು ಬಳಸಲು ಅವನಿಗೆ ತೊಂದರೆ ಉಂಟುಮಾಡಬಹುದು. ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಇತ್ಯಾದಿಗಳನ್ನು ನೀವು ಬಳಸಬಹುದು. ಆದಾಗ್ಯೂ, ಇದಕ್ಕಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಒಟ್ಟಲ್ಲಿ ಮಗುವಿಗೆ ಮಸಾಜ್ ಮಾಡಿದರೆ ಅರೋಗ್ಯ ಉತ್ತಮವಾಗಿರುತ್ತದೆ.