UPSC ಪೂರ್ವ ಪರೀಕ್ಷೆಯಲ್ಲೇ ಫೇಲ್ ಆಗಿದ್ದ ದೇವಯಾನಿ ಸಿಂಗ್ ಮತ್ತೆ ಯಶಸ್ಸು ಗಳಿಸಿದ್ದು ಹೇಗೆ?

First Published | Mar 28, 2023, 4:41 PM IST

ಸ್ವತಃ ನಾಗರಿಕ ಸೇವೆಯಲ್ಲಿದ್ದ ತಮ್ಮ ತಂದೆಯಿಂದ ಸ್ಫೂರ್ತಿ ಪಡೆದ ದೇವಯಾನಿ ಸಿಂಗ್ ಬಾಲ್ಯದಿಂದಲೂ ಯುಪಿಎಸ್‌ಸಿ ಕನಸು ಕಂಡಿದ್ದರು. ಮೊದಲೆರಡು ಪ್ರಯತ್ನಗಳಲ್ಲಿ ದೇವಯಾನಿ ಸಫಲವಾಗಿರಲಿಲ್ಲ. ಆದರೂ ಅವರು ತಮ್ಮ ಪ್ರಯತ್ನ  ಬಿಡಲಿಲ್ಲ. ಇಲ್ಲಿದೆ ಅವರ  ಯಶೋಗಾಥೆಯನ್ನು ತಿಳಿಯಿರಿ.

ಹರಿಯಾಣ ಮೂಲದ ಐಆರ್‌ಎಸ್ ದೇವಯಾನಿ ಸಿಂಗ್ ಅವರ ತಂದೆ ವಿನಯ್ ಸಿಂಗ್ ಅವರು ಹಿಸಾರ್‌ನ ವಿಭಾಗೀಯ ಆಯುಕ್ತರು. ತಮ್ಮ ತಂದೆಯನ್ನು ನೋಡಿ ದೇವಯಾನಿ ಸಿವಿಲ್ ಸರ್ವಿಸಸ್‌ಗೆ ಸೇರಲು ಪ್ರೇರಣೆ ಪಡೆದರು. ಹಲವು ಪ್ರಯತ್ನಗಳಲ್ಲಿ ಯಶಸ್ಸು ಸಿಗದಿದ್ದರೂ, ಹಠ ಬಿಡದೆ ಉತ್ಸಾಹ ಮುಂದುವರಿಸಿದರು. ಕೊನೆಗೆ ಯುಪಿಎಸ್‌ಸಿಗೆ ಆಯ್ಕೆಯಾಗುವ ದಿನ ಬಂದಿತು
 

ದೇವಯಾನಿ ಸಿಂಗ್ ಚಂಡೀಗಢದ SH ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢಶಾಲೆ ಮತ್ತು ಮಧ್ಯಂತರ ಶಿಕ್ಷಣ ಪೂರೈಸಿದರು. 2014 ರಲ್ಲಿ BITS ಪಿಲಾನಿಯಿಂದ ಎಂಜಿನಿಯರಿಂಗ್ ಮಾಡಿ, 2015 ರಿಂದ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.

Tap to resize

2015, 2016, 2017, 2019 ಮತ್ತು 2021 ರಲ್ಲಿ UPSC ಪರೀಕ್ಷೆ ಬರೆದಿದ್ದರು. ಮೊದಲ ಮತ್ತು ಎರಡನೇ ಪ್ರಯತ್ನದಲ್ಲಿ, ಅವರ ಪೂರ್ವ ಪರೀಕ್ಷೆಯನ್ನೇ ಪಾಸ್ ಮಾಡಲು ಆಗಿರಲಿಲ್ಲ. 2017ರಲ್ಲಿ ಸಂದರ್ಶನದ ಸುತ್ತನ್ನು ತಲುಪಿದ್ದರು ಆದರೆ ಇಲ್ಲಿಂದಲೂ ಹಿಂದಿರುಗಬೇಕಾಯಿತು. ಅಂತೂ ಕೊನೆಗೆ 2019 ರ ಪರೀಕ್ಷೆಯಲ್ಲಿ ಯಶಸ್ಸು ಪಡೆದರು ಮತ್ತು 222ನೇ Rank ಪಡೆದರು. ನಂತರ ಅವರನ್ನು ಆಯ್ಕೆ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಗೆ ಆಯ್ಕೆಯಾದರು.

2019 ರಲ್ಲಿಯೇ, ದೇವಯಾನಿ ಯುಪಿಎಸ್‌ಸಿ ಜೊತೆಗೆ ರಾಜಸ್ಥಾನ ಸಿವಿಲ್ ಸರ್ವೀಸ್‌ಗೂ ಆಯ್ಕೆಯಾಗಿದ್ದರು. ಆ ವರ್ಷ UPSC ಯಲ್ಲಿ ಅವರ ಐಚ್ಛಿಕ ವಿಷಯವೆಂದರೆ ಸಸ್ಯಶಾಸ್ತ್ರ. ಈ ಯಶಸ್ಸಿನ ನಂತರವೂ ಛಲ ಬಿಡದ ದೇವಯಾನಿ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ತರಬೇತಿ ಪಡೆದು ಯುಪಿಎಸ್‌ಸಿಗೆ ತಯಾರಿ ಮುಂದುವರಿಸಿದರು.

ತರಬೇತಿಯಿಂದಾಗಿ ದೇವಯಾನಿಗೆ ಹೆಚ್ಚು ಸಮಯ ಓದಲು ಸಾಧ್ಯವಾಗಲಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಯುಪಿಎಸ್‌ಸಿಗೆ ತಯಾರಿ ನಡೆಸಲು ಸಾಧ್ಯವಾಯಿತು. ಮುಂದಿನ ಪ್ರಯತ್ನದಲ್ಲಿ ಅಂದರೆ 2021ರಲ್ಲಿ ಯುಪಿಎಸಿಯಲ್ಲಿ 11ನೇ ರ್ಯಾಂಕ್ ಗಳಿಸಿ  ಅವರ ಕಠಿಣ ಪರಿಶ್ರಮಕ್ಕೆ ಪ್ರತಫಲ ದೊರೆಯಿತು..

Latest Videos

click me!