ಬಳಸಿದ ಸ್ಯಾನಿಟರಿ ಪ್ಯಾಡ್ ಎಸೆಯಲು ಸರಿಯಾದ ಮಾರ್ಗ ತಿಳಿಯಿರಿ

First Published | Mar 26, 2023, 4:31 PM IST

ಪಿರಿಯಡ್ಸ್ ಸಮಯದಲ್ಲಿ ಹೈಜಿನ್ ಕಾಪಾಡುವ ದೃಷ್ಟಿಯಿಂದ ಸ್ಯಾನಿಟರಿ ಪ್ಯಾಡ್ ಬಳಕೆ ಮಾಡೋದೇನೋ ಸರಿ. ಆದರೆ ಬಳಸಿದ ಸ್ಯಾನಿಟರಿ ಪ್ಯಾಡ್ ಅನ್ನು ಏನು ಮಾಡಬೇಕು ಇದರಿಂದ ಪರಿಸರಕ್ಕೆ ಅಥವಾ ಪ್ರಾಣಿಗೆ ಹಾನಿಯಾಗುವುದರಿಂದ ತಡೆಯೋದು ಹೇಗೆ? ಇಲ್ಲಿದೆ ಮಾಹಿತಿ. 

ಅನೇಕ ಮಹಿಳೆಯರು ಸ್ಯಾನಿಟರಿ ಪ್ಯಾಡ್ ಗಳ (sanitary pad) ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಅಂತಹ ವಿಷಯಗಳ ಬಗ್ಗೆ ಯಾರೊಂದಿಗಾದರೂ ಮಾತನಾಡಲು ಅಥವಾ ಸಲಹೆಯನ್ನು ಪಡೆಯಲು ಅವರು ನಾಚಿಕೆಪಡುತ್ತಾರೆ. ಆದಾಗ್ಯೂ, ಇಂದಿನ ಸಮಯದಲ್ಲಿ ನಾಚಿಕೆಪಡುವಂತದ್ದು ಏನೂ ಇಲ್ಲ. ಮಾಹಿತಿಯ ಕೊರತೆಯಿಂದಾಗಿ, ಅನೇಕ ಮಹಿಳೆಯರು ಅಥವಾ ಹುಡುಗಿಯರು ಶೌಚಾಲಯದಲ್ಲಿಯೇ ಸ್ಯಾನಿಟರಿ ಪ್ಯಾಡ್ಗಳನ್ನು ಎಸೆಯುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ಸರಿಯಾದ ಮಾರ್ಗ ಯಾವುದು, ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಏನು ಮಾಡಬೇಕು ?
ನೀವು ಬಳಸಿದ ಸ್ಯಾನಿಟರಿ ಪ್ಯಾಡ್ ಅನ್ನು ಚೀಲ ಅಥವಾ ಟಾಯ್ಲೆಟ್ ಪೇಪರ್ ನಲ್ಲಿ (toilet paper) ಸುತ್ತಿ ಮತ್ತು ಅದನ್ನು ನಿಮ್ಮ ಇತರ ತ್ಯಾಜ್ಯದಿಂದ ದೂರವಿಡಿ. ಚೀಲ ತೆರೆದಿಲ್ಲ ಮತ್ತು ಆ ಪ್ಯಾಡ್ ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪ್ಯಾಡ್ ಹೊರಗೆ ಬಂದರೆ  ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ಹರಡುವ ಭಯವಿದೆ. ಅಂತಹ ಸ್ಥಳದಲ್ಲಿ ಸೊಳ್ಳೆಗಳು ಸಹ ಹೆಚ್ಚು ಬೆಳೆಯುತ್ತವೆ.

Tap to resize

ಇತ್ತೀಚಿನ ದಿನಗಳಲ್ಲಿ ಅನೇಕ ಮರುಬಳಕೆ (reusable pad) ಮಾಡಬಹುದಾದ ಪ್ಯಾಡ್ಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿವೆ. ಅವು ಹತ್ತಿ ಬಟ್ಟೆಯ ಪ್ಯಾಡ್ ಗಳಾಗಿದ್ದು, ನೀವು ತೊಳೆಯಬಹುದು ಮತ್ತು ಮತ್ತೆ ಬಳಸಬಹುದು. ಅವು ನಿಮ್ಮ ಬಜೆಟ್ ನಲ್ಲಿದ್ದರೆ, ಖಂಡಿತವಾಗಿಯೂ ಅವುಗಳನ್ನು ಪ್ರಯತ್ನಿಸಿ. ಅವು ಪ್ಲಾಸ್ಟಿಕ್ ಮುಕ್ತವಾಗಿರುವುದರಿಂದ ಅವು ಪರಿಸರಕ್ಕೂ ಒಳ್ಳೆಯದು.

ನೀವು ಶೌಚಾಲಯದಲ್ಲಿ ಕಸದ ಬುಟ್ಟಿಯನ್ನು ಇಟ್ಟರೆ, ಪ್ಯಾಡ್ ಅನ್ನು ಅದರಲ್ಲಿ ಎಸೆಯಿರಿ. ಆದರೆ ಅದರಿಂದ ರಕ್ತದ ಕಲೆಗಳು ಕಾಣಿಸಿಕೊಳ್ಳದ ರೀತಿಯಲ್ಲಿ ಅದನ್ನು ಸುತ್ತಿ. ಪ್ಯಾಡ್ ಅನ್ನು ಸುತ್ತಲು ಟಿಶ್ಯೂ ಪೇಪರ್ ಸುತ್ತಿ, ಅದು ಇಲ್ಲದಿದ್ದರೆ, ಪ್ಯಾಡ್ ಅನ್ನು ಅದರ ಅಂಟಿಕೊಳ್ಳುವ ಭಾಗವು ಮೇಲಕ್ಕೆ ಇರುವಂತೆ ರೋಲ್ ಮಾಡಿ. ಇಲ್ಲವಾದರೆ ನ್ಯೂಸ್ ಪೇಪರ್ ನಲ್ಲಿ ಸುತ್ತಿ ಬಿಸಾಕಿ.

ನೀವು ಹೊರಗೆ ಸಾರ್ವಜನಿಕ ಶೌಚಾಲಯವನ್ನು (publci toilet) ಬಳಸುತ್ತಿದ್ದರೆ ಮತ್ತು ನಿಮ್ಮ ಬಳಿ ಬೇರೆ ಯಾವುದೇ ಪಾಲಿಥಿನ್ ಇಲ್ಲದಿದ್ದರೆ, ಪ್ಯಾಡ್ ಪ್ಯಾಕ್ ಬರುವ ರ್ಯಾಪರ್ ಅನ್ನು ಎಸೆಯಬೇಡಿ. ಆ ರ್ಯಾಪರ್ ನಲ್ಲಿ ಪ್ಯಾಡ್ ಸುತ್ತಿ ಬಿಸಾಕಿ.
 

ಬಳಸಿದ ಪ್ಯಾಡ್ ಅನ್ನು ರೋಲ್ ಮಾಡಿದ ನಂತರ, ನೀವು ಬಯಸಿದರೆ, ಅದನ್ನು ಅದರ ಕವರ್ನಲ್ಲಿ ಸುತ್ತಿ ಅಥವಾ ಕಾಗದ ಅಥವಾ ಟಿಶ್ಯೂ ನಿಂದ (tissue paper or toilet paper) ಪ್ರತ್ಯೇಕವಾಗಿ ಸುತ್ತಿ. ಅದನ್ನು ಓಪನ್ ಆಗುವ ರೀತಿ ಯಾವತ್ತೂ ಬಳಕೆ ಮಾಡಬೇಡಿ. ಇದರಿಂದ ರೋಗಾಣು ಹರಡುವ ಸಾಧ್ಯತೆ ಇದೆ.

ಇದು ನಿಮ್ಮ ಋತುಚಕ್ರದ ಕೊನೆಯ ದಿನವಾಗಿದ್ದರೆ, ಆ ದಿನ ನೀವು ಎಲ್ಲಾ ಪ್ಯಾಡ್ ಗಳನ್ನು ಜೊತೆಯಾಗಿ ಸೇರಿಸಿ ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ, ಸರಿಯಾಗಿ ಬಿಗಿದು ಕಟ್ಟಿ, ಬೇಕಾದರೆ ಅದರ ಮೇಲೆ ಕೆಂಪು ಬಣ್ಣದಿಂದ ಪೈಂಟ್ ಮಾಡಿ, ಬಳಿಕ ಕಸ ತೆಗೆದುಕೊಳ್ಳಲು ಬರುವವರಿಗೆ ನೀಡಿ, ಇದರಿಂದ ಅವರಿಗೂ ಅದನ್ನು ಪ್ರತ್ಯೇಕವಾಗಿಡಲು ಸಾಧ್ಯವಾಗುತ್ತೆ. 

Latest Videos

click me!