ಗರ್ಭನಿರೋಧಕ ಬಳಕೆಯಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆಯೇ?

First Published Aug 10, 2022, 11:59 AM IST

ಗರ್ಭ ನಿರೋಧಕಗಳನ್ನು ಸೇವಿಸೋದ್ರಿಂದ ಬೇಡವಾದ ಗರ್ಭವನ್ನು ತಡೆಯಬಹುದು ಹೌದು, ಆದರೆ ಎಚ್ಚರಿಕೆಯಿಂದಿರಿ, ಯಾಕಂದ್ರೆ ಕೆಲವು ಗರ್ಭನಿರೋಧಕಗಳು ನಿಮ್ಮ ಋತುಚಕ್ರವನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. ಮತ್ತೊಂದೆಡೆ, ಹೆಚ್ಚು ಅಥವಾ ಕಡಿಮೆ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇವೆರಡು ಮಹಿಳೆಯರ ಆರೋಗ್ಯಕ್ಕೆ ಅಪಾಯವಾಗಿದೆ. ಗರ್ಭನಿರೋಧಕವು ಋತುಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳೋಣ.

ಗರ್ಭನಿರೋಧಕ ವಿಧಾನವನ್ನು ಆಯ್ಕೆ ಮಾಡುವಾಗ, ನೀವು ಯಾವ ವಿಧಾನವು ನಿಮಗೆ ಅತ್ಯುತ್ತಮವಾಗಿರುತ್ತದೆ ಎಂದು ಯೋಚಿಸುತ್ತೀರಿ ಅಲ್ವಾ? ಇಲ್ಲಿ ಗರ್ಭನಿರೋಧಕಗಳು ಪಿರಿಯಡ್ಸ್ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನು ತಿಳಿಯೋಣ. ಜೊತೆಗೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡದ ಗರ್ಭನಿರೋಧಕವನ್ನು ಆಯ್ಕೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಗರ್ಭನಿರೋಧಕ ಬಳಸಿ ಪಿರಿಯಡ್ಸ್ ಆಗದೇ ಇರುವುದು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಇದು ನಿಮ್ಮ ಅತ್ಯುತ್ತಮ ಆಯ್ಕೆಯೇ ಅಥವಾ ಅಲ್ಲವೇ ಎಂಬುದರ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ತುಂಬಾನೆ ಮುಖ್ಯ. ಪ್ರತಿಯೊಂದು ರೀತಿಯ ಗರ್ಭನಿರೋಧಕವು ನಿಮ್ಮ ಪಿರಿಯಡ್ಸ್ (periods) ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಜನನ ನಿಯಂತ್ರಣ ಮಾತ್ರೆಗಳು
ಈ ಮೊದಲು ಗರ್ಭನಿರೋಧಕ ಮಾತ್ರೆಗಳನ್ನು (contraceptive pills) 28 ಮಾತ್ರೆಗಳ ಸ್ಟ್ರಿಪ್ ನಲ್ಲಿ ಮಾತ್ರ ನೀಡಲಾಗುತ್ತಿತ್ತು, ಇದರಲ್ಲಿ ಓವ್ಯುಲೇಶನ್ ನ್ನು ತಡೆಯುವ 21 ಹಾರ್ಮೋನ್ ಮಾತ್ರೆಗಳು ಮತ್ತು 7 ಪ್ಲಸೀಬೊ ಮಾತ್ರೆಗಳು ಒಳಗೊಂಡಿರುತ್ತವೆ. ಅಂಡೋತ್ಪತ್ತಿಯನ್ನು ತಡೆಗಟ್ಟಲು ಅಗತ್ಯವಿರುವ ಹಾರ್ಮೋನ್ ಮಾತ್ರೆಗಳನ್ನು  ಒಳಗೊಂಡಿದೆ. ಏಳು ದಿನಗಳ ಪ್ಲಸೀಬೊ ಮಾತ್ರೆ ಪಿರಿಯಡ್ಸ್ ಆಗಲು ನೆರವಾಗುತ್ತೆ. ಈಗ 24 ದಿನಗಳ ಓವ್ಯುಲೇಶನ್ ಮಾತ್ರೆಗಳು ಪ್ರತಿ ತಿಂಗಳು ಸರಿಯಾಗಿ ಪಿರಿಯಡ್ಸ್ ಅನಿಯಮಿತವಾಗಿ ಆಗುವಂತೆ ಮಾಡುತ್ತೆ. 

ವಜೈನಲ್ ರಿಂಗ್

ಈ ಸಣ್ಣ, ವಜೈನಲ್ ರಿಂಗ್ ಯೋನಿ ಕಾಲುವೆಯ ಮೇಲೆ ಜೋಡಿಸಲಾಗಿದೆ ಮತ್ತು ಇದು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟ್ರಾನ್ ಗಳನ್ನು ಸ್ರವಿಸುತ್ತದೆ, ಅಂಡೋತ್ಪತ್ತಿಯನ್ನು ತಡೆಗಟ್ಟಲು ಗರ್ಭಕಂಠದ ಲೋಳೆಯನ್ನು ದಪ್ಪಗೊಳಿಸುತ್ತದೆ. ಸಾಮಾನ್ಯವಾಗಿ ಯೋನಿ ಉಂಗುರವನ್ನು ಮೂರು ವಾರಗಳವರೆಗೆ ಧರಿಸಲಾಗುತ್ತದೆ ಮತ್ತು ನಂತರ ಒಂದು ವಾರದೊಳಗೆ ಇದನ್ನು ತೆಗೆಯಬೇಕಾಗುತ್ತೆ. ಇದರಿಂದ ಋತುಸ್ರಾವ ಸಂಭವಿಸಬಹುದು. 
 

ಈ ವಜೈನಲ್ ರಿಂಗ್ ನಿರಂತರವಾಗಿ ಬಳಸಬಹುದು ಅಥವಾ ಪ್ರತಿ ತಿಂಗಳು ಹೊಸ ಉಂಗುರಗಳೊಂದಿಗೆ ದೀರ್ಘಕಾಲದವರೆಗೆ ಬಳಸಬಹುದು. ಇದು ಸ್ವಲ್ಪ ಮಟ್ಟಿಗೆ ಋತುಸ್ರಾವವನ್ನು ನಿರ್ವಹಿಸಲು ಅವಕಾಶವನ್ನು ನೀಡುತ್ತದೆ. ಆದರೆ ಇದನ್ನು ಧರಿಸಿದ ಮೊದಲ ಮೂರು ತಿಂಗಳಲ್ಲಿ ಪಿರಿಯಡ್ಸ್ ಮಧ್ಯೆ ಸ್ಪಾಟಿಂಗ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ. 

ಇಂಪ್ಲಾಂಟ್ಸ್
ನೆಕ್ಪ್ಲಾನನ್ ಗರ್ಭನಿರೋಧಕ ಇಂಪ್ಲಾಂಟ್ ಒಂದು ಸಣ್ಣ ಪ್ಲಾಸ್ಟಿಕ್ ರಾಡ್ ಆಗಿದ್ದು, ಅದನ್ನು ಮೇಲಿನ ತೋಳಿಗೆ ಸೇರಿಸಲಾಗುತ್ತದೆ. ಇದು ಅಂಡೋತ್ಪತ್ತಿಯನ್ನು ತಡೆಗಟ್ಟಲು ಪ್ರೊಜೆಸ್ಟಿನ್ ಹಾರ್ಮೋನನ್ನು ಸ್ರವಿಸುತ್ತದೆ ಮತ್ತು ವೀರ್ಯಾಣು ಗರ್ಭಾಶಯವನ್ನು ಪ್ರವೇಶಿಸುವುದನ್ನು ತಡೆಯಲು ಗರ್ಭಕಂಠದ ಲೋಳೆಯನ್ನು ದಪ್ಪಗೊಳಿಸುತ್ತದೆ. ಈ ಇಂಪ್ಲಾಂಟ್ ಮೂರು ವರ್ಷಗಳವರೆಗೆ ಗರ್ಭಿಣಿಯಾಗುವುದನ್ನು ತಡೆಯುತ್ತದೆ. 

ಇಂಪ್ಲಾಂಟ್ಸ್ ಹಾಕುವ ಮುನ್ನ ಮತ್ತು ನಂತರ ನಿಮ್ಮ ಪಿರಿಯಡ್ಸ್ ಮೇಲೆ ಇಂಪ್ಲಾಂಟ್ ನ ಪರಿಣಾಮವು ಅನಿರೀಕ್ಷಿತವಾಗಿರಬಹುದು. ಸಾಮಾನ್ಯ ಅಡ್ಡಪರಿಣಾಮವೆಂದರೆ ಸ್ಪಾಟ್ಸ್ ಕಾಣಿಸಿಕೊಳ್ಳುತ್ತವೆ, ಅಲ್ಲದೇ ಸೌಮ್ಯ ರಕ್ತಸ್ರಾವವಾಗಬಹುದು. ಪ್ರತಿ ಹಂತದ ನಡುವಿನ ಸಮಯವು ಸಹ ಬದಲಾಗಬಹುದು.  ಇಂಪ್ಲಾಂಟ್ ಬಳಸಿದ ಕೆಲವರಿಗೆ ಪಿರಿಯಡ್ಸ್ ಆಗದೇ ಇರಬಹುದು, ಅಲ್ಲದೇ ಇನ್ನೂ ಕೆಲವರಿಗೆ ದೀರ್ಘ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇದೆ. 
 

 ಮಾರ್ನಿಂಗ್ ಆಫ್ಟರ್ ಪಿಲ್
ನೀವು ಬಯಸದೆ ಗರ್ಭಧರಿಸಬಹುದು ಸಂಶಯ ನಿಮಗೆ ಇದ್ದರೆ, ನೀವು ಈ ಗರ್ಭ ನಿರೋಧಕ ಮಾತ್ರೆಗಳನ್ನು ಸೇರಿಸಬಹುದು. ಈ ಮಾತ್ರೆಗಳು ಗರ್ಭಧಾರಣೆಯ ನಂತರ ಐದು ದಿನಗಳವರೆಗೆ ಪರಿಣಾಮಕಾರಿಯಾಗಿರುತ್ತವೆ. ಬೆಳಗಿನ ನಂತರದ ಮಾತ್ರೆಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಲಾಗುತ್ತದೆ ಮತ್ತು ಅದನ್ನು ನಿಯಮಿತವಾಗಿ ತೆಗೆದುಕೊಳ್ಳಬಾರದು. ಈ ಮಾತ್ರೆ ಅಂಡಾಶಯಗಳಿಂದ ಅಂಡಾಣುಗಳ ಬಿಡುಗಡೆಯನ್ನು ವಿಳಂಬಗೊಳಿಸುತ್ತದೆ ಮತ್ತು ಫಲವತ್ತಾದ ಅಂಡಾಣುವು ಗರ್ಭಾಶಯದೊಂದಿಗೆ ಬಂಧವನ್ನು ರೂಪಿಸುವುದನ್ನು ತಡೆಯುತ್ತದೆ. 

ಮಾರ್ನಿಂಗ್ ಆಫ್ಟರ್ ಪಿಲ್ ಸೇವಿಸೋದ್ರಿಂದ ಸಾಮಾನ್ಯ ದಿನಗಳಿಗಿಂತ ಮುಂಚಿತವಾಗಿ ಅಥವಾ ತುಂಬಾ ದಿನಗಳ ಬಳಿಕ ಪಿರಿಯಡ್ಸ್ ಆಗುತ್ತದ್ದೆ. ಋತುಸ್ರಾವವು ಬೆಳಿಗ್ಗೆಯ ನಂತರದ ಮಾತ್ರೆಯ ಅತ್ಯಂತ ಸಾಮಾನ್ಯ ಅಡ್ಡಪರಿಣಾಮವಾಗಿದೆ. ಇದರ ಇತರ ಅಡ್ಡಪರಿಣಾಮಗಳೆಂದರೆ ಸೌಮ್ಯ ಮತ್ತು ಅಲ್ಪಾವಧಿ ಮತ್ತು ದೀರ್ಘಕಾಲೀನ ಋತುಸ್ರಾವ. ಈ ಎಲ್ಲಾ ದೋಷಗಳು ನಿಮ್ಮ ಮುಂದಿನ ಋತುಚಕ್ರದಲ್ಲಿ ಕೊನೆಗೊಳ್ಳುತ್ತವೆ. ನಿಮ್ಮ ಋತುಚಕ್ರವು ಎರಡು ವಾರಗಳಿಗಿಂತ ಹೆಚ್ಚು ವಿಳಂಬವಾಗಿದ್ದರೆ, ನೀವು ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

click me!