14 ವರ್ಷದ ಬಾಲಕಿಗೆ ಮೀಸೆ, 40ನೇ ವಯಸ್ಸಿನಲ್ಲಿ ಗಡ್ಡ; ಈ ವಿಚಿತ್ರ ಬದಲಾವಣೆ ಹೇಗಾಯ್ತು?

Published : Feb 09, 2024, 05:38 PM IST

ಕೆನಡಾದ ಒಂಟಾರಿಯೊದಲ್ಲಿ ವಾಸಿಸುವ 40 ವರ್ಷದ ಗೆನ್ನೆವೀವ್ ವೈಲಾನ್ಕೋರ್ಟ್ ಒಬ್ಬ ಸಾಮಾನ್ಯ ಮಹಿಳೆ, ಆದರೆ ಜನರು ಮಾತ್ರ ಆಕೆಯನ್ನು ನೋಡಿದ್ರೆ, ಶಾಕ್ ಆಗ್ತಾರೆ, ಏಕೆಂದರೆ ಆಕೆಯ ಮುಖದ ಮೇಲೆ ಪುರುಷರಂತೆ ದಟ್ಟವಾದ ಗಡ್ಡ ಮತ್ತು ಮೀಸೆ ಎರಡೂ ಇದೆ.

PREV
17
14 ವರ್ಷದ ಬಾಲಕಿಗೆ ಮೀಸೆ, 40ನೇ ವಯಸ್ಸಿನಲ್ಲಿ ಗಡ್ಡ; ಈ ವಿಚಿತ್ರ ಬದಲಾವಣೆ ಹೇಗಾಯ್ತು?

ಮಹಿಳೆಯರು ತಮ್ಮ ಸೌಂದರ್ಯದ (beauty) ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ, ಈ ಕಾರಣದಿಂದಾಗಿ ಅವರು ಎಲ್ಲಿಗಾದರು ಹೊರಡೋದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅವರ ಮುಖದಲ್ಲಿ ಒಂದು ಕೂದಲು ಬೆಳೆಯುತ್ತಿರುವುದು ಕಂಡುಬಂದರೂ, ಅದನ್ನು ಅವರು ಸಹಿಸೋದಿಲ್ಲ. ಮೇಲಿನ ತುಟಿಯ ಕೂದಲನ್ನು ಸ್ವಚ್ಛಗೊಳಿಸುವುದು, ಎಳೆಯುವುದು ಅಥವಾ ಕೆನ್ನೆಗಳ ಮೇಲೆ ಬೆಳೆಯುವ ಕೂದಲನ್ನು ಕ್ಲೀನ್ ಮಾಡೋದು ಸಾಮಾನ್ಯವಾಗಿದೆ. ಆದರೆ ಮುಖ ಪೂರ್ತಿ ಕೂದಲು ಇದ್ರೆ ಹೇಗಿರಬಹುದು ಅಲ್ವಾ?

27

ಆದರೆ ಇಲ್ಲೊಬ್ಬ ಮಹಿಳೆ ತುಂಬಾನೆ ವಿಚಿತ್ರವಾಗಿದ್ದಾರೆ. ಮುಖದ ಮೇಲೆ ಪುರುಷನಂತೆ ಗಡ್ಡವನ್ನು ಮತ್ತು ಕೂದಲು (women with facial hair) ಹೊಂದಿರುವ ಈ ಮಹಿಳೆ ಅದನ್ನು ಕತ್ತರಿಸುವ ಬದಲು ಕೂದಲನ್ನು ಬೆಳೆಸಲು ಇಷ್ಟಪಡ್ತಾರೆ. ಇಂತಹ ಹುಡುಗಿಯನ್ನು ನೀವು ಎಂದಾದರೂ ನೋಡಿದ್ದೀರಾ? ಬಹುಶಃ ನೀವು ಅದನ್ನು ನೋಡಿರಲಿಕ್ಕಿಲ್ಲ, ಇದೇ ವಿಚಾರವಾಗಿ ಈ ಕೆನಡಾದ ಮಹಿಳೆ ಇತರ ಮಹಿಳೆಯರಿಗಿಂತ ವಿಭಿನ್ನವಾಗಿದ್ದಾರೆ. ಆಕೆಗೆ ಗಂಡಸಿನಂತೆಯೇ ಗಡ್ಡ, ಮೀಸೆ ಇದೆ. ಆದರೆ ಜನರು ನನ್ನ ಬಗ್ಗೆ ಏನು ಯೋಚಿಸ್ತಾರೆ ಅಂತ ಮಾತ್ರ ಈ ಮಹಿಳೆ ಯೋಚಿಸೋದಿಲ್ಲ, 

37

ಡೈಲಿ ಸ್ಟಾರ್ ಸುದ್ದಿ ವೆಬ್ಸೈಟ್ನ ವರದಿಯ ಪ್ರಕಾರ, ಕೆನಡಾದ ಒಂಟಾರಿಯೊದಲ್ಲಿ ವಾಸಿಸುವ 40 ವರ್ಷದ ಗೆನ್ನೆವೀವ್ ವೈಲಾನ್ಕೋರ್ಟ್ (Gennevieve Vaillancourt ) ಸಾಮಾನ್ಯ ಮಹಿಳೆ, ಆದರೆ ಜನರು ಆಕೆಯನ್ನು ನೋಡಿದಾಗ, ಅಚ್ಚರಿಯಿಂದ ಮತ್ತೆ ಮತ್ತೆ ನೋಡುತ್ತಾರೆ. ಏಕೆಂದರೆ ಆಕೆಯ ಮುಖದ ಮೇಲೆ ಪುರುಷರಂತೆ ದಟ್ಟವಾದ ಗಡ್ಡ ಮತ್ತು ಮೀಸೆ ಇದೆ. 

47

ಈ ಗಡ್ಡ, ಮೀಸೆ ಇವತ್ತು ನಿನ್ನೆ ಉಂಟಾದುದು ಅಲ್ಲ, ಆಕೆ 14 ವರ್ಷದವಳಿದ್ದಾಗ, ಆಕೆಯ ಮುಖದ ಮೇಲೆ ಮೀಸೆಯ ರೂಪದಲ್ಲಿ ಕೂದಲು ಬೆಳೆದಿರೋದಕ್ಕೆ ಆರಂಭಿಸಿತು. ಆಕೆಗೆ ವಯಸ್ಸಾದಂತೆ, ಮುಖದ ಮೇಲೆ ಹೆಚ್ಚಿನ ಕೂದಲು ಹೊರಬರಲು ಪ್ರಾರಂಭಿಸಿತು. ಮುಖದ ಈ ವಿಚಿತ್ರ ಬದಲಾವಣೆಯ ಹಿಂದೆ ಒಂದು ದೊಡ್ಡ ಕಾರಣವಿದೆ.

57

ಮುಖದ ಮೇಲೆ ಬೆಳೆದ ಕೂದಲು: ವೆಲ್ಲಾನ್ಕೋರ್ಟ್ 20 ವರ್ಷದವಳಿದ್ದಾಗ, ಅವಳು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (polysystic ovarian syndrome) ಸಮಸ್ಯೆಗೆ ಗುರಿಯಾಗಿದ್ದಳು. ಇದು ಹಾರ್ಮೋನುಗಳ ಸಮಸ್ಯೆಯಾಗಿದ್ದು, ಇದರಿಂದಾಗಿ ಆಕೆಯ ಮುಖದ ಮೇಲೆ ಹೆಚ್ಚು ಕೂದಲು ಬೆಳೆಯಲು ಆರಂಭವಾಯಿತು. 40 ನೇ ವಯಸ್ಸಿನಲ್ಲಿ, ಕೂದಲು ತುಂಬಾ ದಪ್ಪವಾಗಿತ್ತು, ಜನರು ಆಕೆಯನ್ನು ಗೇಲಿ ಮಾಡಲು ಪ್ರಾರಂಭಿಸಿದರು. 

67

ಆರಂಭಿಕ ದಿನಗಳಲ್ಲಿ, ಆಕೆ ತನ್ನ ಫೇಸಿಯಲ್ ಹೇರ್ ಬಗ್ಗೆ ತುಂಬಾ ಕಿರಿಕಿರಿ ಅನುಭವಿಸುತ್ತಿದ್ದಳು, ಈ ಕಾರಣದಿಂದಾಗಿ ಆಕೆ ಯಾವಾಗಲೂ ಫೇಸ್ ಶೇವ್ ಮಾಡುತ್ತಿದ್ದಳು. ಜನರು ಅವರನ್ನು ಗಂಡಸು ಎಂದು ಕರೆಯುತ್ತಿದ್ದರು, ಕ್ಷೌರ ಮಾಡಲು ಸಲಹೆ ನೀಡುತ್ತಿದ್ದರು ಮತ್ತು ಶಾಲೆ ಮತ್ತು ಕಾಲೇಜಿನಲ್ಲಿಯೂ ಆಕೆಯನ್ನು ವಿಚಿತ್ರ ಹೆಸರುಗಳಿಂದ ಕರೆಯಲಾಗುತ್ತಿತ್ತು.
 

77

ಮೊದ ಮೊದಲು ಫೇಸಿಯಲ್ ಹೇರ್ ನಿಂದ ಮುಜುಗರಕ್ಕೆ ಒಳಗಾಗುತ್ತಿದ್ದ ಮಹಿಳೆ, ಬಳಿಕ ಆತ್ಮವಿಶ್ವಾಸ ಬೆಳೆಸಿಕೊಂಡರು. ಇತರರು ಏನು ಹೇಳುತ್ತಾರೆ ಮತ್ತು ನಿಂದಿಸುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುವುದನ್ನು ಆಕೆ ನಿಲ್ಲಿಸಿದಳು. ತಾನು ಹೇಗಿದ್ದೇನೋ, ಹಾಗೇ ತನ್ನನ್ನು ಒಪ್ಪಿಕೊಂಡಳು. ಈಗ ಆತ್ಮವಿಶ್ವಾಸದ ಮಾರ್ಗದರ್ಶಕಳಾಗಿದ್ದಾಳೆ. ಅವಳು ಇತರ ಮಹಿಳೆಯರಿಗೆ ತಮ್ಮ ಬಗ್ಗೆ ಉತ್ತಮ ಭಾವನೆ ಹೊಂದಲು ಕಲಿಸುತ್ತಾಳೆ. ಇಲ್ಲಿಯವರೆಗೆ ತನ್ನ ಪ್ರಯಾಣ ಹೇಗಿತ್ತು ಎಂದು ಆಕೆ ಹೇಳುತ್ತಾಳೆ. ಇದಕ್ಕಾಗಿ, ಆಕೆ ಬೇರೆ ಬೇರೆ ಸೆಶನ್ ಗಳಲ್ಲೂ ಭಾಗವಹಿಸುತ್ತಾರೆ. 
 

click me!

Recommended Stories