ಕೇವಲ 7 ದಿನಗಳಲ್ಲಿ 155 ಕೋಟಿ ಸಂಪಾದನೆ; ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು?

Published : Feb 09, 2024, 04:21 PM IST

ಇತ್ತೀಚೆಗೆ ಟ್ವಿಟ್ಟರ್ ಖಾತೆ @PicturesFoIder ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಆನ್ ಲೈನ್ ನಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಹುಡುಗಿ ಕೇವಲ 7 ದಿನಗಳಲ್ಲಿ 155 ಕೋಟಿ ಗಳಿಸಿರೋದು ತಿಳಿದು ಬಂದಿದೆ. ಅದು ಹೇಗೆ ಸಾಧ್ಯ ಆಯ್ತು ನೋಡೋಣ. 

PREV
17
ಕೇವಲ 7 ದಿನಗಳಲ್ಲಿ 155 ಕೋಟಿ ಸಂಪಾದನೆ; ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು?

ಇಂದಿನ ಕಾಲದಲ್ಲಿ ಹಣ ಸಂಪಾದಿಸುವುದು (Earning Money) ಕಷ್ಟವೇನಲ್ಲ. ಆದರೆ ಹಣವನ್ನು ಸಂಪಾದಿಸಲು ಬಳಸುವ ವಿಧಾನಗಳು ಸುಲಭ ಅಥವಾ ಕಷ್ಟಕರವಾಗಿರಬಹುದು. ಈಗ ನಾವು ಇಲ್ಲಿ ಮಾತನಾಡುತ್ತಿರುವ ಈ ಹುಡುಗಿಯ ಬಗ್ಗೆ ಹೇಳೋದಾದ್ರೆ ಈ ಹುಡುಗಿ ಆನ್ ಲೈನ್ ನಲ್ಲಿ ಸರಕುಗಳನ್ನು ಮಾರಾಟ ಮಾಡೋ ಕೆಲಸ ಮಾಡುತ್ತಾಳೆ. 

27

ಆಕೆಯ ಮಾರಾಟದ ವಿಧಾನವು ಹೇಗಿದೆಯೆಂದರೆ, ಈ ವಿಡಿಯೋ ನೋಡುವ ಪ್ರೇಕ್ಷಕರ ಕಣ್ಣು ಕೊಂಚ ಆಚೆ ಹೋದರೂ, ಆ ಸಾಮಾನುಗಳನ್ನು ಮಿಸ್ ಮಾಡ್ಕೋಳ್ತಾರೆ. ಅಂದ್ರೆ ಸೆಕೆಂಡುಗಳ ಅವಧಿಯಲ್ಲಿ ಈಕೆ ಸರಕು ಮಾರಾಟ (online trading)ಮಾಡ್ತಾಳೆ. ಈ ರೀತಿಯಾಗಿ ಮಾರಾಟ ಮಾಡುವ ಮೂಲಕ ಈ ಮಹಿಳೆ ಕೇವಲ 7 ದಿನಗಳಲ್ಲಿ 155 ಕೋಟಿ ರೂ.ಗಳನ್ನು ಗಳಿಸಿದ್ದಾಳೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗಿದೆ.

37

ಇತ್ತೀಚೆಗೆ ಟ್ವಿಟ್ಟರ್ ಖಾತೆಯಲ್ಲಿ @PicturesFoIder ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಅದು ಸದ್ಯ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಆನ್ ಲೈನ್ ನಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡುವ ಹುಡುಗಿ ಬಗ್ಗೆ ತಿಳಿಸಲಾಗಿದೆ. ಅವರು ಸಾಮಾಜಿಕ ಮಾಧ್ಯಮ ಇನ್ ಪ್ಲ್ಯೋಯೆನ್ಸರ್ ಹಾಗೂ (Social Media Influencer)ಮತ್ತು ಲೈವ್ ಸ್ಟ್ರೀಮರ್ ಕೂಡ ಹೌದು.

47

ಆಕೆ ತನ್ನ ಸರಕುಗಳನ್ನು ಲೈವ್ ಸ್ಟ್ರೀಮ್ (Live Stream) ಮೂಲಕ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಾಳೆ. ವೀಡಿಯೊದಲ್ಲಿ, ಆಕೆ ಒಂದು ಅಥವಾ ಎರಡು ವಸ್ತುಗಳು ಅಲ್ಲ, ಬದಲಾಗಿ ಬಹಳ ಕಡಿಮೆ ಸಮಯದಲ್ಲಿ ಡಜನ್ಗಟ್ಟಲೆ ವಸ್ತುಗಳನ್ನು ಮಾರಾಟ ಮಾಡುತ್ತಾಲೆ. ಆ ಮೂಲಕವೇ ಕೋಟಿ ಕೋಟಿ ಗಳಿಸುತ್ತಾಳೆ ಈ ನಟಿ. 
 

57

7 ದಿನಗಳಲ್ಲಿ 155 ಕೋಟಿ ಗಳಿಕೆ: ಹುಡುಗಿ ಪ್ರತಿ ಐಟಂ ಕೇವಲ 3 ಸೆಕೆಂಡುಗಳ ಕಾಲ ಪ್ರೇಕ್ಷಕರಿಗೆ ತೋರಿಸುತ್ತಿದ್ದಾಳೆ ಮತ್ತು ನಂತರ ತಕ್ಷಣವೇ ಇತರ ವಸ್ತುಗಳ ಮೇಲೆ ಜಿಗಿಯುತ್ತಾಳೆ. ಅವಳು ಈ ವಸ್ತುಗಳನ್ನು ಎಷ್ಟು ವೇಗವಾಗಿ ತೋರಿಸುತ್ತಿದ್ದಾಳೆ ಎಂದರೆ ಬಹುಶಃ ಯಾರೂ ಅವಳನ್ನು ಸರಿಯಾಗಿ ನೋಡೋದಕ್ಕೂ ಸಾಧ್ಯವಾಗೋದಿಲ್ಲ. 

67

ನೀವು ಆ ವಸ್ತುವನ್ನು ಚೆನ್ನಾಗಿ ನೋಡಲು, ನೀವು ಆ ವಿಡಿಯೋವನ್ನು ಹಲವಾರು ಬಾರಿ ನೋಡಬೇಕು. ಟೈಮ್ಸ್ ಆಫ್ ಇಂಡಿಯಾದ ನವೆಂಬರ್ 2023 ರ ವರದಿಯ ಪ್ರಕಾರ, ಹುಡುಗಿಯ ಹೆಸರು ಜೆಂಗ್ ಕ್ಸಿಯಾಂಗ್ ಕ್ಸಿಯಾಂಗ್ (Zheng Xiang Xiang )ಮತ್ತು ಆಕೆ ಚೀನಾದ ಲೈವ್ ಸ್ಟ್ರೀಮರ್. ಈಕೆ ಕೇವಲ 7 ದಿನಗಳಲ್ಲಿ 155 ಕೋಟಿ ರೂ. ಗಳಿಸಿದ್ದಾರೆ.

77

ವೈರಲ್ ಆಗುತ್ತಿದೆ ವಿಡಿಯೋ: ಈ ವೀಡಿಯೊ ಟ್ವಿಟರ್ನಲ್ಲಿ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅನೇಕ ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಹುಡುಗಿ 2017 ರಿಂದ ಲೈವ್ ಸ್ಟ್ರೀಮ್ ವ್ಯವಹಾರದಲ್ಲಿದ್ದಾಳೆ ಮತ್ತು ಸರಕುಗಳನ್ನು ಮಾರಾಟ ಮಾಡುತ್ತಿದ್ದಾಳಂತೆ. ಟಿಕ್ ಟಾಕ್ ಪ್ರಿಯ ಜನ ಹೆಚ್ಚು ಸಮಯ ಒಂದು ವಿಡೀಯೋ ನೋಡಲು ಇಷ್ಟಪಡೋದಿಲ್ಲ. ಹಾಗಾಗಿ ಈಕೆ ಅದರ ಲಾಭ ಪಡೆದು ತುಂಬಾನೆ ಕಡಿಮೆ ಅವಧಿಯಲ್ಲಿ ಸರಕು ಮಾರಾಟ ಮಾಡ್ತಾಳೆ. 
 

Read more Photos on
click me!

Recommended Stories