ಮನೆಬಿಟ್ಟಾಗ ಕೈಯಲಿದ್ದಿದ್ದು 300 ರೂ, ಒಂದೊತ್ತಿನ ಊಟಕ್ಕೂ ಇಲ್ಲದವಳೀಗ ಕೋಟ್ಯಾಧಿಪತಿ

First Published | Dec 8, 2023, 5:54 PM IST

ನೀವು ಕನಸುಗಳನ್ನು ನನಸಾಗಿಸಲು ನಿರ್ಧರಿಸಿದರೆ, ಅವುಗಳನ್ನು ಈಡೇರಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಚಿನು ಕಲಾ ಈ ವಿಷಯವನ್ನು ನಿಜವಾಗಿಸಿದ್ದಾರೆ. ಕೈಯಲ್ಲಿ 300 ರೂ. ಹಿಡಿದು ಮನೆಯಿಂದ ಓಡಿಹೋದ ಹುಡುಗಿ, ಕಷ್ಟಗಳ ಹಾದಿಯನ್ನು ಸವೆದು ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. 
 

ನಾವು ಇತರರ ಜೀವನದ ಬಗ್ಗೆ ತಿಳಿಯುತ್ತಾ ಹೋದಂತೆ, ಹಲವು ಪ್ರೇರಣಾತ್ಮಕ ಕತೆಗಳು (inspirational stories) ನಮಗೆ ದೊರೆಯುತ್ತಲೇ ಹೋಗುತ್ತವೆ. ಕೆಲವೊಬ್ಬರ ಜೀವನ ಕಥೆಗಳು ನಮಗೆ ಜೀವನದಲ್ಲಿ ಸಾಧಿಸಲು ಪ್ರೇರಣೆ ನೀಡುತ್ತವೆ. ಅಂತಹ ಒಂದು ಕಥೆ ಚಿನು ಕಲಾ ಅವರದ್ದು. 
 

ಬಾಲ್ಯದಿಂದ ಕಷ್ಟಪಟ್ಟಿದ್ದ ಜೀವ ಅದು. ಹೆಸರು ಚಿನು ಕಲಾ. 15 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋದ ಚಿನು ಇಂದು 100 ಕೋಟಿ ರೂ.ಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಅವರು ದಿನಕ್ಕೆ ಕೇವಲ 20 ರೂಪಾಯಿ ಸಂಪಾದಿಸುತ್ತಿದ್ದರು. ಇಂದು ಅವರ ವಾರ್ಷಿಕ ಗಳಿಕೆ 8 ಕೋಟಿ ರೂ. ಅವರ ಜೀವನ ಗಾಥೆ ತಿಳಿಯೋಣ ಬನ್ನಿ. 
 

Tap to resize

ಚೀನು ತನ್ನ 15ನೇ ವಯಸ್ಸಿನಲ್ಲಿ 300 ರೂಪಾಯಿಗಳೊಂದಿಗೆ ತನ್ನ ಮನೆ ತೊರೆದಿದ್ದಳು. ಆದರೆ ಬದುಕು ಆಕೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತಮ್ಮ ಹೊಟ್ಟೆ ತುಂಬಿಸಲು ಅವರು ಸೇಲ್ಸ್ ಗರ್ಲ್ (sales girl) ಕೆಲಸವನ್ನು ಪಡೆದಳು ಮತ್ತು ಮನೆ ಮನೆಗೆ ಹೋಗಿ ಕೆಲವು ವಸ್ತುಗಳನ್ನು ಮಾರಿದರು. ಇದು ದೈನಂದಿನ ಜೀವನವನ್ನು ನಡೆಸಲು ಬೆಂಬಲ ನೀಡಿತು. ಈ ಕೆಲಸ ಸಿಗದಿದ್ದರೆ ಅವರಿಗೆ ದಿನದಲ್ಲಿ ಹೊಟ್ಟೆ ತುಂಬಿಸಲು ಸಹ ಹಣ ಇರುತ್ತಿರಲಿಲ್ಲವಂತೆ. 
 

ಸಂದರ್ಶನವೊಂದರಲ್ಲಿ, ಅವರು ಹೇಳಿದಂತೆ ಕೇವಲ ಎರಡು ಜೊತೆ ಬಟ್ಟೆ ಮತ್ತು 300 ರೂಪಾಯಿಗಳನ್ನು ಕೈಯಲ್ಲಿ ಹಿಡಿದು 15ನೇ ವಯಸ್ಸಲ್ಲಿ ಮನೆಬಿಟ್ಟಿದ್ದರು. ಮೊದಲ ಎರಡು ದಿನ ಅವರು ತುಂಬಾ ಹೆದರಿದ್ದರಂತೆ. ಅವರಿಗೆ ಉಳಿಯಲು ಸ್ಥಳವೂ ಸಿಗಲಿಲ್ಲ. ನಂತರ ಅವಳು ಒಂದು ಜಾಗದಲ್ಲಿ ಒಂದು ರಾತ್ರಿಗೆ 20  ರೂ.ಗೆ ಹಾಸಿಗೆ ಪಡೆದು ಮಲಗುತ್ತಿದ್ದರಂತೆ. ಅದು ಸುಲಭವೂ ಆಗಿರಲಿಲ್ಲ.  
 

ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾಗ ವ್ಯವಹಾರದಲ್ಲಿ, ಜನರ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ಪೂರೈಸುವುದು ಮುಖ್ಯ ಕಾರ್ಯ ಮತ್ತು ಅದು ತುಂಬಾ ಕಷ್ಟವಲ್ಲ ಎಂದು ಅವರು ಅರ್ಥಮಾಡಿಕೊಂಡರು. ನಂತರ ಜೀವನವನ್ನು ವಿಭಿನ್ನವಾಗಿ ನೋಡಲು ಆರಂಭಿಸಿದರು. 
 

ಚಿನು ತನ್ನ 16ನೇ ವಯಸ್ಸಿನಲ್ಲಿ ತನ್ನ ಮೊದಲ ಬಡ್ತಿ ಪಡೆದರು. ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದ ಒಂದು ವರ್ಷದ ನಂತರ, ಅವರು ಮೂರು ಹುಡುಗಿಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಆವಾಗ ಸ್ವಲ್ಪ ಹೆಚ್ಚು ಸಂಬಳ ಬರುತ್ತಿತ್ತಂತೆ. ಆ ಸಂದರ್ಭದಲ್ಲಿ ಆಕೆ ಮೊದಲ ಬಾರಿಗೆ ಉದ್ಯಮಿಯಂತೆ ಭಾವಿಸಿದಳು. ಆ ಸಮಯದಲ್ಲಿ, ಅವರಿಗೆ ಯಶಸ್ಸು ಎಂದರೆ ಒಂದು ದಿನಕ್ಕೆ ಆಹಾರವನ್ನು ಸಂಗ್ರಹಿಸುವುದು. ಇದರ ನಂತರ, ಚಿನು ಸಂಜೆ 6 ರಿಂದ ರಾತ್ರಿ 11 ರವರೆಗೆ ರೆಸ್ಟೋರೆಂಟ್ ನಲ್ಲಿ ವೈಟರ್ (Waitress in Restaurant) ಆಗಿ ಕಾರ್ಯ ನಿರ್ವಹಿಸಿದರು. ಅವರು ಯಾವುದೇ ಕೆಲಸವನ್ನು ಸಣ್ಣದೆಂದು ಪರಿಗಣಿಸಲಿಲ್ಲ ಮತ್ತು ನಿರಂತರವಾಗಿ ಮುಂದೆ ಸಾಗಿದಳು.
 

2004 ರಲ್ಲಿ ಅಮಿತ್ ಕಾಲಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚೀನು ನಂತರ ಮಿಸೆಸ್ ಇಂಡಿಯಾದಲ್ಲಿ (Mrs India) ಭಾಗವಹಿಸಿದರು, ಅಲ್ಲಿ ಅವರು ಎರಡನೇ ಸ್ಥಾನ ಪಡೆದರು. ಇಲ್ಲಿಂದ ಅವರು ಆಭರಣಗಳ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಂಡರು. ಮುಂದೆ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಜೊತೆಗೆ ಫ್ಯಾಷನ್ ಜಗತ್ತಿನಲ್ಲಿ ಹೆಚ್ಚಾಗಿ ಗುರುತಿಸಿಕೊಂಡ ಕಾರಣ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಸಹ ಪಡೆದರು. 
 

ಚೀನು ಆಭರಣ ಬ್ರಾಂಡ್ ಅನ್ನು ಪ್ರಾರಂಭಿಸಲು ವ್ಯವಹಾರದ ಬಗ್ಗೆ ತಮ್ಮ ತಿಳುವಳಿಕೆ ಮತ್ತು ಮಾರುಕಟ್ಟೆಯಲ್ಲಿ ಆಭರಣಗಳ ಪ್ರಾಮುಖ್ಯತೆಯ ಬಗ್ಗೆ ಸರಿಯಾದ ಅಧ್ಯಯನ ಮಾಡಿದರು. ಆಭರಣ ಬ್ರಾಂಡ್ ಪ್ರಾರಂಭಿಸುವ ಆಲೋಚನೆ ಅನೇಕ ವರ್ಷಗಳಿಂದ ಅವರ ಮನಸ್ಸಿನಲ್ಲಿತ್ತು, ಆದರೆ ಅದು ಸುಲಭವಾಗಿರಲಿಲ್ಲ, ಅದರ ಬಗ್ಗೆ ಸರಿಯಾಗಿ ಅರಿತುಕೊಂಡಮೇಲೆ 2014 ರಲ್ಲಿ ತಮ್ಮ ಆಭರಣ ಬ್ರ್ಯಾಂಡ್  Rubans – fashion accessories ಸ್ಥಾಪಿಸಿದರು. 
 

ಆರಂಭದಲ್ಲಿ, ಪ್ರತಿ ವ್ಯವಹಾರದಂತೆ, ಅವರು ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದರು. ಅವರಿಗೆ ಮಾಲ್ ನಲ್ಲಿ ಜಾಗ ಸಿಗುತ್ತಿರಲಿಲ್ಲ. ಇದಕ್ಕಾಗಿ, ಅವರಿಗೆ 3 ವರ್ಷಗಳ ವೈಟಿಂಗ್ ಪಿರಿಯಡ್ (waiting period) ನೀಡಲಾಗಿತ್ತಂತೆ.  ಮಾಲ್ ನಲ್ಲಿ ಶಾಪ್ ತೆರೆಯಲು ದೊಡ್ಡ ಮಟ್ಟದ ಮೊತ್ತವನ್ನೇ ಮಾಲೀಕರು ಕೇಳಿದ್ದರಂತೆ. ಆದರೆ ನಂತರ ಮಾಲೀಕರ ಮನ ಒಲಿಸಿ ಒಂದು ತಿಂಗಳ ಅವಕಾಶ ಪಡೆದು ಶಾಪ್ ತೆರೆದರು. 
 

ಚೀನು ಪರಿಶ್ರಮಕ್ಕೆ ಫಲ ದೊರೆತಂತೆ ಅಂಗಡಿ ತೆರೆದ ಕೂಡಲೇ, ಅವರ ಬ್ರಾಂಡ್ ಅದ್ಭುತ ಮಾರಾಟವನ್ನು ಕಂಡಿತು. ಇದರ ನಂತರ, ಚೀನು ಹಿಂತಿರುಗಿ ನೋಡಲಿಲ್ಲ. ಇಂದು ಅವರ ಕಂಪನಿಯ ಮೌಲ್ಯವು ಸುಮಾರು 1 ಬಿಲಿಯನ್ ರೂಪಾಯಿಗಳಷ್ಟಿದೆ. ಅಂಗಡಿಗಳ ಹೊರತಾಗಿ, ಅವರ ಉತ್ಪನ್ನಗಳು ಫ್ಲಿಪ್ಕಾರ್ಟ್ ಮತ್ತು ಮಿಂತ್ರಾದಂತಹ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿಯೂ(online platform) ಲಭ್ಯವಿದೆ. 
 

Latest Videos

click me!