Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

Published : Mar 08, 2023, 09:55 AM IST

ಸೃಷ್ಟಿಯೇ ಹೆಣ್ಣು. ಅದಲ್ಲದೆ ಹೆಣ್ಣಿಗೆ ಹಲವು ರೂಪಗಳು. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಆಕೆ ಎಲ್ಲವೂ ಹೌದು. ಎಲ್ಲರ ಜೀವನದಲ್ಲೂ ಹೆಣ್ಣಿಗೆ ಮಹತ್ತರ ಪಾತ್ರವಿದೆ. ಅದಕ್ಕಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಮಾರ್ಚ್ 8ರಂದು  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day)ಯನ್ನು ಆಚರಿಸಲಾಗುತ್ತದೆ.ನಿಮ್ಮ ಪ್ರೀತಿ ಪಾತ್ರರಿಗೆ ಮಾಡಬಹುದಾದ ಶುಭಾಶಯಗಳು ಇಲ್ಲಿವೆ.

PREV
17
Womens Day 2023 Wishes: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಅಮ್ಮನಿಂದ ಹಿಡಿದು ಮಡದಿವರೆಗೆ, ಸೋದರಿಯಿಂದ ಹಿಡಿದು ಪುತ್ರಿಯವರೆಗೆ ಪ್ರತಿಯೊಂದು ಹಂತದಲ್ಲೂ ಮಹಿಳೆ ಎಂಬ ಬಲ ಇಲ್ಲದೇ ಹೋದರೆ ಯಾರ ಜೀವನಕ್ಕೂ ಅಸ್ತಿತ್ವವೇ ಇರದು. ಮಹಿಳಾ ದಿನಾಚರಣೆಯ ಶುಭಾಶಯಗಳು

27

ಮಹಿಳೆ ಎಂದರೆ ಭವಿಷ್ಯ, ಮಹಿಳೆ ಬದುಕಿಗೆ ಬಲ. ನಮ್ಮ ಬದುಕನ್ನು ರೂಪಿಸಿದ, ಜೀವನಕ್ಕೆ ಶಕ್ತಿ ತುಂಬಿದ ಎಲ್ಲಾ ಮಹಿಳೆಯರನ್ನು ಗೌರವಿಸೋಣ. ಅವರ ಮಮತೆ, ತ್ಯಾಗ, ಶ್ರಮಕ್ಕೆ ಧನ್ಯವಾದ ಹೇಳೋಣ. ಮಹಿಳಾ ದಿನಾಚರಣೆಯ ಶುಭಾಶಯಗಳು

37

ಎಲ್ಲಾ ಸಮಯದಲ್ಲೂ ನಗುವನ್ನು ತುಂಬುವ ನೀನು ನನ್ನ ದಿನಗಳನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡಿದಿ. ಮಹಿಳಾ ದಿನಾಚರಣೆಯ ಶುಭಾಶಯಗಳು!

47

ತಾಯ್ತನದಿಂದ ಹಿಡಿದು ಹೆಂಡತಿಯ ತನಕ, ಸಹೋದರಿಯಿಂದ ಕೊನೆಗೆ ಮಗಳವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ 'ಮಹಿಳೆ'ಯಲ್ಲಿ ಬಲವಾದ ಮಿತ್ರನಿಲ್ಲದೆ ಈ ಜೀವಕ್ಕೆ ಅಸ್ತಿತ್ವವಿಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು!

57

ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೀರಿ. ತಮ್ಮ ಈ ನಿಸ್ವಾರ್ಥ ಪ್ರೀತಿಗೆ ನನ್ನ ಧನ್ಯವಾದಗಳು. ತಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು

67

ಈ ದಿನ ನಿಮ್ಮದು. ನಿಮ್ಮ ಎಲ್ಲಾ ಕಷ್ಟಗಳು ದೂರವಾಗಲಿ, ನೀವಂದುಕೊಂಡ ಕನಸುಗಳು ಕೈಗೂಡಲಿ. ನಿಮ್ಮ ಬದುಕಿನಲ್ಲಿ ಸದಾ ಖುಷಿಯೊಂದೇ ತುಂಬಿರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು

77

 ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವ ದೇವತೆ ಹೆಣ್ಣು. ಹೆಣ್ಣಾಗಿ ಹುಟ್ಟಿರುವುದಕ್ಕೆ ಸದಾ ಹೆಮ್ಮೆ ಪಡಿ. ಮಹಿಳಾ ದಿನಾಚರಣೆಯ ಶುಭಾಶಯಗಳು

Read more Photos on
click me!

Recommended Stories