ಅದ್ಭುತ ತ್ವಚೆ, ಕೂದಲಿಗೆ ಸೀಬೆ ಹಣ್ಣಿನ ಮದ್ದು

First Published Mar 1, 2021, 4:52 PM IST

ಬಾಲ್ಯದಲ್ಲಿ ಎಷ್ಟೊಂದು ಸೀಬೆ ಹಣ್ಣು ಅಥವಾ ಪೇರಳೆ ತಿಂದಿದ್ದೇವೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಎಲ್ಲರೂ ಅಂದು ಕೊಂಡಂತೆ ಸೀಬೆ ಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಾದ ಹಣ್ಣುಲ್ಲ. ಇದರಿಂದ ಸ್ಕಿನ್, ಕೂದಲಿಗೂ ಉತ್ತಮ ಪೋಷಣೆ ದೊರೆಯುತ್ತದೆ. ಹೌದು ತಿನ್ನುವುದರ ಜೊತೆಗೆ ಸೀಬೆ ಹಣ್ಣನ್ನು ಈ ರೀತಿಯಾಗಿ ಬಳಸಿದರೆ ಅದರಿಂದ ಮತ್ತೆ ಹೊಸ ಸ್ಕಿನ್ ಕೇರ್ ಉತ್ಪನ್ನಗಳತ್ತ ಮುಖ ಮಾಡೋದೆ ಮರೆತು ಬಿಡೋದು ಗ್ಯಾರಂಟಿ. 
 

ಸೀಬೆ ಕಾಯಿಯಿಂದ ಆರೋಗ್ಯಕರ ಲಾಭಗಳಿವೆ. ಜೊತೆಗೆ ಸೌಂದರ್ಯ ಹೆಚ್ಚಿಸುವಲ್ಲಿ ಸಹ ಇದು ಸಹಾಯ ಮಾಡುತ್ತದೆತ್ವಚೆಯ ಕಾಂತಿ : ಗುಲಾಬಿ ಬಣ್ಣದ ಸೀಬೆ ಕಾಯಿಕಾಂತಿಯನ್ನು ಹೆಚ್ಚಿಸಲು ಮತ್ತು ತಾಜಾತನಕ್ಕೆ ಸಹಾಯ ಮಾಡುತ್ತದೆ. ತ್ವಚೆಯ ಕಾಂತಿಯನ್ನು ಪಡೆಯಲು ಮತ್ತು ಸತ್ತ ಚರ್ಮದ ಕೋಶಗಳನ್ನು ನಿವಾರಿಸಲು ಫೇಸ್ ಸ್ಕ್ರಬ್ ತಯಾರಿಸಿ. ಸ್ವಲ್ಪ ಸೀಬೆಕಾಯಿ ತಿರುಳನ್ನು ಜಜ್ಜಿ ಮೊಟ್ಟೆಯ ಹಳದಿ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ಮಸಾಜ್ ಮಾಡಿ. ಹಣ್ಣಿನ ಬೀಜಗಳು ಕಲ್ಮಶಗಳನ್ನು ನಿವಾರಿಸಲು ಅತ್ಯುತ್ತಮ ಎಕ್ಸ್ ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ, ಇದು ಚರ್ಮದ ಟೋನ್ ಅನ್ನು ನೀಡುತ್ತದೆ.
undefined
ಚರ್ಮ ಹೊಳೆಯುತ್ತದೆ : ಕೆಂಪು ಸೀಬೆಹಣ್ಣಿನ ತಿರುಳು ತೆಗೆದು ಮ್ಯಾಶ್ ಮಾಡಿ ಅದಕ್ಕೆ ಮೊಟ್ಟೆಯ ಹಳದಿ ಭಾಗ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಇದನ್ನು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
undefined
ಯುವಿ ಕಿರಣಗಳಿಂದ ರಕ್ಷಣೆ : ಸೀಬೆ ಹಣ್ಣಿನಲ್ಲಿ ಲೈಕೊಪೀನ್ ಅಂಶವಿದೆ. ಇದು ಯುವಿ ಕಿರಣಗಳಿಂದ ನಮ್ಮ ಸ್ಕಿನ್ ಅನ್ನು ರಕ್ಷಿಸುತ್ತದೆ. ಗುಲಾಬಿ ಸೀಬೆಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಸೂರ್ಯನ ಹಾನಿಯಿಂದ ರಕ್ಷಿಸುವ ಶಕ್ತಿಯನ್ನು ನೀಡುತ್ತದೆ. ಯುವಿ ಕಿರಣಗಳು ಮತ್ತು ಪರಿಸರ ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಹೆಸರುವಾಸಿಯಾದ ಲೈಕೋಪೆನ್ ಎಂಬ ಸಂಯುಕ್ತವು ಸೀಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನಿಖರವಾಗಿ ಹೇಳುವುದಾದರೆ, ಒಂದು ಹಣ್ಣಿನ ತುಂಡು ಸುಮಾರು 2.9 ಗ್ರಾಂ ಲೈಕೋಪೆನ್ ಅನ್ನು ಒದಗಿಸಬಹುದು; ಮತ್ತು ಟೊಮ್ಯಾಟೊದಲ್ಲಿರುವ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು.
undefined
ಆಂಟಿ ಏಜಿಂಗ್: ಆಹಾರಕ್ರಮದಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವ ಆಹಾರಗಳನ್ನು ಬಳಸಿ ವಯಸ್ಸಾಗುವ ಲಕ್ಷಣಗಳನ್ನು ವಿರುದ್ಧ ಹೋರಾಡುವ ಅತ್ಯಂತ ಸುಲಭ ವಿಧಾನ ಎಂದರೆ ಸೀಬೆ ಹಣ್ಣು ಸೇವಿಸುವುದು. ಈ ಪೋಷಕಾಂಶಗಳು ಚರ್ಮದಲ್ಲಿ ಫ್ರೀ radicalಹಾನಿಯ ವಿರುದ್ಧ ಹೋರಾಡುತ್ತದೆ, ಇದು ಕಾಂತಿಯುತವಾಗಿ ಮತ್ತು ಅಕಾಲಿಕ ಗೆರೆಗಳು ಮತ್ತು ಸುಕ್ಕುಗಳಿಂದ ಚರ್ಮವನ್ನು ಮುಕ್ತವಾಗಿಸುತ್ತದೆ.
undefined
ಸ್ಕಿನ್ ಟೋನರ್ : ಸೀಬೆ ಹಣ್ಣಿನಿಂದ ಸ್ಕ್ರಬ್ ಮಾಡಿದರೆ ಚರ್ಮವನ್ನು ಟೋನ್ಡ್, ತಾಜಾ ಮತ್ತು ಸುಕ್ಕು ರಹಿತವಾಗಿರಿಸುತ್ತದೆ. ಇದರಲ್ಲಿ ವಿಟಮಿನ್ ಗಳು, ಖನಿಜಗಳು ಮತ್ತು ಪೋಷಕಾಂಶಗಳು ತುಂಬಿಕೊಂಡಿದ್ದು, ಸಡಿಲಚರ್ಮವನ್ನು ಬಿಗಿಗೊಳಿಸಿ ಅದರ ಮೇಲ್ಮೈನಲ್ಲಿ ಎಲಾಸ್ಟಿನ್ ಅನ್ನು ವರ್ಧಿಸುವ ಕೆಲಸ ಮಾಡುತ್ತದೆ. ಇವು ಚರ್ಮದಲ್ಲಿ ಕೆಂಪು ಮತ್ತು ಕೆಂಪು ಗುಳ್ಳೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
undefined
ಡಾರ್ಕ್ ಸ್ಪಾಟ್: ಕೇವಲ ಸೀಬೆ ಹಣ್ಣು ಮಾತ್ರವಲ್ಲ, ಸೀಬೆ ಎಲೆಗಳು ಸಹ ಚರ್ಮ ಮತ್ತು ಕೂದಲಿಗೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಮತ್ತು ಸೌಂದರ್ಯ ದೈನಂದಿನ ಚಟುವಟಿಕೆಗಳಲ್ಲಿಯೂ ಎಲೆಗಳನ್ನು ಬಳಸಬಹುದು. ಚರ್ಮದಲ್ಲಿ ಮೊಡವೆ ಮತ್ತು ಕಪ್ಪು ಕಲೆಗಳಿದ್ದರೆ, ಸೀಬೆ ಎಲೆಯ ಪೇಸ್ಟ್ ಅನ್ನು ಪ್ರತಿದಿನವೂ ಒಂದು ಸ್ಪಾಟ್ ಟ್ರೀಟ್ ಮೆಂಟ್ ಆಗಿ ಬಳಸಿ ಮತ್ತು ಇದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
undefined
ಸ್ಕಿನ್ ಹೈಡ್ರೇಶನ್ : ಸ್ಕಿನ್ ಆರೋಗ್ಯಯುತವಾಗಿರಲು ನೀರು ಅತ್ಯಗತ್ಯ. ನೀರಿನ ಬದಲು ಸೀಬೆ ಹಣ್ಣು ತಿಂದರೂ ಉತ್ತಮ. ಯಾಕೆಂದರೆ ಇದರಲ್ಲಿ ನೀರಿನ ಅಂಶವಿದ್ದು ಸ್ಕಿನ್ ಹೈಡ್ರೇಟ್ ಆಗಿರಲು ಇದು ಸಹಾಯ ಮಾಡುತ್ತದೆ. ಸೀಬೆಯಲ್ಲಿ 81% ನಷ್ಟು ನೀರು ಇರುವುದರಿಂದ, ಸೀಬೆಗಳು ಜಲಸಂಶ್ಲೇಶಕ್ಕೆ ಅತ್ಯುತ್ತಮ ಮೂಲವೆಂದು ತಿಳಿದುಬಂದಿದೆ. ಈ ಹಣ್ಣನ್ನು ಪ್ರತಿದಿನ ಸೇವಿಸಿ ದೇಹದಲ್ಲಿ ನೀರಿನಾಂಶವನ್ನು ನಿಧಾನವಾಗಿ ಹೊರಹಾಕುವ ಮೂಲಕ ಚರ್ಮದ ಜೀವಕೋಶಗಳನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
undefined
ಬ್ಲ್ಯಾಕ್ ಹೆಡ್: ಸೀಬೆ ಎಲೆಗಳ ಮತ್ತೊಂದು ಪ್ರಯೋಜನ ಎಂದರೆ ಬ್ಲ್ಯಾಕ್ ಹೆಡ್ಸ್ ನಿವಾರಿಸುವ ಒಂದು DIY ಸ್ಕ್ರಬ್ ಆಗಿ ಕಾರ್ಯ ನಿರ್ವಹಿಸುತ್ತದೆ. ಎಲೆಗಳನ್ನು ಚೆನ್ನಾಗಿ ತೊಳೆದು ಬ್ಲೆಂಡ್ ಮಾಡಿ, ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಬ್ಲ್ಯಾಕ್ ಹೆಡ್ಸ್ ನಿವಾರಿಸಲು ಈ ಸ್ಕ್ರಬ್ ಅನ್ನು ಮೂಗಿನ ಮೇಲೆ ಹಚ್ಚಿಕೊಳ್ಳಿ. ಸೀಬೆ ಎಲೆಗಳೂ ಅಲರ್ಜಿಗಳಿಂದ ರಕ್ಷಿಸುತ್ತವೆ, ಆದ್ದರಿಂದ ಇದು ಫ್ಲೂ ಸೀಸನ್‌ಗೆ ಹೇಳಿ ಮಾಡಿಸಿದ೦ತಿದೆ!
undefined
ಕೂದಲ ಬೆಳವಣಿಗೆ: ಸೀಬೆ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಸೀಬೆಕಾಯಿ ಕೂದಲಿನ ಆರೋಗ್ಯವನ್ನು ಕಾಪಾಡಲೂ ಉಪಯುಕ್ತವಾಗಿದೆ. ಏಕೆಂದರೆ ಇದರಲ್ಲಿ ಇರುವಪೋಷಕಾಂಶಗಳು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಎ ಮತ್ತು ಸಿ, ಫೋಲಿಕ್ ಆಮ್ಲ, ತಾಮ್ರ, ಪೊಟ್ಯಾಶಿಯಂ, ಫೈಬರ್, ಮ್ಯಾಂಗನೀಸ್, ಫ್ಲಾವನಾಯ್ಡ್ ಗಳು ಮತ್ತು ಇತರ ಫೈಟೋಕೆಮಿಕಲ್ಸ್ ಇದರಲ್ಲಿ ಹೇರಳವಾಗಿವೆ. ಈ ಎಲ್ಲಾ ಗುಣಗಳು ಕೂದಲಿನ ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆ ನಿಯಂತ್ರಿಸಲು ಪ್ರಯೋಜನಕಾರಿ.
undefined
ಸೀಬೆ ಹಣ್ಣಿನ ಫೇಸ್ ಮಾಸ್ಕ್ :ಬೇಕಾಗುವ ಸಾಮಾಗ್ರಿಗಳು : ಸೀಬೆ ಕಾಯಿ ತಿರುಳಿ. ಸಿಹಿರಹಿತ ಮೊಸರು, ಬಾಳೆಹಣ್ಣು, ಜೇನುಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ಸೇರಿಸಿ ದಪ್ಪನೆಪೇಸ್ಟ್ ತಯಾರಿಸಿಕೊಳ್ಳಿ. ಸುಮಾರು 30 ನಿಮಿಷ ನಿಮ್ಮ ಮುಖಕ್ಕೆ ಹಚ್ಚಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಗುರವಾದ ಮಾಯಿಶ್ಚರೈಸರ್ ಬಳಸಿ. ಇದರಿಂದ ಸ್ಕಿನ್ ತುಂಬಾ ಆರೋಗ್ಯಯುತವಾಗಿರುತ್ತದೆ.
undefined
click me!