ವೆಜಿಟೇಬಲ್ ಆಯಿಲ್: ವೆಜಿಟೇಬಲ್ ಆಯಿಲ್, ಸೋಯಾಬಿನ್ ಎಣ್ಣೆ ಹೆಚ್ಚಾಗಿ ಸೇವಿಸಿದರೆಸ್ಕಿನ್ ಸೆಲ್ ಡ್ಯಾಮೇಜ್ ಆಗುತ್ತದೆ. ಇದನ್ನು ಪ್ರತಿದಿನ ಸೇವಿಸಬಾರದು.
undefined
ಸಕ್ಕರೆ: ಕೆಚಪ್, ಸಾಫ್ಟ್ ಡ್ರಿಂಕ್, ಸ್ವೀಟ್, ಸಲಾಡ್ ಎಲ್ಲದರಲ್ಲೂ ಸಕ್ಕರೆ ಇರುತ್ತದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
undefined
ಆಲ್ಕೋಹಾಲ್: ಲಿವರ್ ಹೆಲ್ತಿಯಾಗಿದ್ದರೆ ಸ್ಕಿನ್ ಸಹ ಹೆಲ್ತಿಯಾಗಿರುತ್ತದೆ. ಆದರೆ ಆಲ್ಕೋಹಾಲ್ ಸೇವಿಸಿದರೆ ಲಿವರ್ ಡ್ಯಾಮೇಜ್ ಆಗುತ್ತದೆ. ಇದರಿಂದ ಸ್ಕಿನ್ ಮೇಲೂ ಪರಿಣಾಮ ಬೀರುತ್ತದೆ. ಅಂದ್ರೆ ಮೊಡವೆ, ನೆರಿಗೆ, ಮುಖ ಊದಿಕೊಳ್ಳುವುದು ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
undefined
ಫಾಸ್ಟ್ ಫುಡ್ : ಫಾಸ್ಟ್ ಫುಡ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಇರುವುದರಿಂದ ಅತ್ಯಂತ ಅನಾರೋಗ್ಯಕರ ಆಹಾರವಾಗಿ ಪರಿಣಮಿಸಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ಬೇಗನೆ ವಯಸ್ಸಾದವರಂತೆ ಕಾಣುವಿರಿ.
undefined
ಉಪ್ಪು : ಸ್ವಲ್ಪ ಉಪ್ಪು ಓಕೆ. ಆದರೆ ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವನೆ ಮಾಡಿದರೆ ಅದರಿಂದ ಕಿಡ್ನಿ ಸಮಸ್ಯೆ, ಬ್ಲಡ್ ಪ್ರೆಶರ್ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡರೆ ಫಿಟ್ ಆಗಿರಲು ಸಾಧ್ಯವಿಲ್ಲ. ಫಿಟ್ ಇಲ್ಲ ಅಂದ್ರೆ ಯಂಗ್ ಆಗಿ ಕಾಣೋದಿಲ್ಲ.
undefined
ಮಸಾಲೆಯುಕ್ತ ಆಹಾರ : ತುಂಬಾ ಸ್ಪೈಸಿಯಾದ ಅಥವಾ ಖಾರವಾದ ಆಹಾರ ಸೇವನೆ ಮಾಡಿದರೆ ಸ್ಕಿನ್ ಬೇಗನೆ ಹಾಗಾಗುತ್ತದೆ. ಇದರಿಂದ 20 ವರ್ಷ ಆದ್ರೂ ಮೂವತ್ತರಂತೆ ಕಾಣುವಿರಿ.
undefined