ಹೊಳೆಯುವ ತ್ವಚೆಗಾಗಿ ಮನೆಯಲ್ಲೇ ತಯಾರಿಸಿ ಸ್ಕ್ರಬ್!

First Published | Feb 28, 2021, 4:49 PM IST

ಮುಖದ ಮೇಲೆ ಹಲವಾರು ಕಲೆ, ಡಾರ್ಕ್ ಸರ್ಕಲ್, ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ಉಂಟಾಗುತ್ತದೆ. ಹಾಗಂತ ಪದೇ ಪದೇ ಬ್ಯೂಟಿ ಪಾರ್ಲರ್ ಗೆ ತೆರಳಲು ಸಾಧ್ಯವಾಗುವುದಿಲ್ಲ. ಅದರ ಬದಲಾಗಿ ಆರೋಗ್ಯಕರ, ಹೊಳೆಯುವ ತ್ವಚೆಗಾಗಿ ಮನೆಯಲ್ಲೇ ಸ್ಕ್ರಬ್ ತಯಾರಿಸಬಹುದು. ಮನೆಯಲ್ಲಿ ತಯಾರಿಸುವ ಸ್ಕ್ರಬ್ ಬಜೆಟ್ ಸ್ನೇಹಿ, ನೈಸರ್ಗಿಕ, ಯಾವಾಗಲೂ ತಾಜಾ, ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿರುತ್ತವೆ. ಅವುಗಳನ್ನು ಹೇಗೆ ತಯಾರಿಸುವುದು?

ಸಕ್ಕರೆ ಸ್ಕ್ರಬ್ಕಂದು ಅಥವಾ ಬಿಳಿ ಸಕ್ಕರೆಯನ್ನು ಆಲಿವ್, ತೆಂಗಿನ ಕಾಯಿ ಅಥವಾ ಇತರ ಯಾವುದೇ ತರಕಾರಿ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ.ಅವುಗಳನ್ನು 2:1 ಅನುಪಾತದಲ್ಲಿ ಮಿಶ್ರಣ ಮಾಡಿ, ಪ್ರತಿ ಚಮಚ ಎಣ್ಣೆಗೆ 2 ಚಮಚ ಸಕ್ಕರೆಯನ್ನು ಸೇರಿಸಿ.
ಸೂಕ್ಷ್ಮ ತ್ವಚೆಗಾಗಿ ಸ್ಕ್ರಬ್ಸಕ್ಕರೆ ಮತ್ತು ಎಣ್ಣೆಯನ್ನು 2:1 ಅನುಪಾತದಲ್ಲಿ ಮಿಶ್ರಣ ಮಾಡಿ, ಸಣ್ಣ ಮತ್ತು ಮಧ್ಯಮ ಗಾತ್ರದ ಸೌತೆಕಾಯಿಯನ್ನು ಮಿಶ್ರಮಾಡಿ ಮತ್ತು ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ. ಇದನ್ನು ಮೃದುವಾಗಿ ಉಜ್ಜಿ, ಒಂದೆರಡು ನಿಮಿಷ ಹಾಗೆಯೇ ಬಿಡಿ ಮತ್ತು ಮೃದುವಾದ, ಎಕ್ಸ್ ಫೋಲಿಯೇಟೆಡ್, ಹೊಳೆಯುವ ಚರ್ಮ ಪಡೆಯಿರಿ.
Tap to resize

ಕೆಲವು ಟೇಬಲ್ ಚಮಚದಷ್ಟು ಕೋಲ್ಡ್, ಸ್ಟ್ರಾಂಗ್ ಟೀಯನ್ನು ಸಾಕಷ್ಟು ಬಿಳಿ ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ದಪ್ಪಗಿನ, ಗಟ್ಟಿಯಾದ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿ. ಇದು ತ್ವಚೆಯ ಅಂದಕಾಪಾಡುತ್ತದೆ.
ಬಾಳೆಹಣ್ಣಿನ ಸ್ಕ್ರಬ್ಎರಡು ಹಣ್ಣಾದ ಬಾಳೆಹಣ್ಣು ತೆಗೆದುಕೊಂಡು, ಅದಕ್ಕೆ ಸಕ್ಕರೆ ಹಾಕಿ, ತೇವಾಂಶಕ್ಕಾಗಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಮೃದುವಾದ ಪರಿಮಳಯುಕ್ತ ತಿರುಳನ್ನು ಐದು ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
ಕಾಫಿ ಪುಡಿ : ಕಾಫಿ ಪುಡಿಯ ಜೊತೆಗೆ ಸ್ವಲ್ಪ ಜೇನು ಸೇರಿಸಿ ಸ್ಕ್ರಬ್ ಮಾಡಿದರೆ, ಮುಖದಲ್ಲಿರುವ ಕೊಳೆ ನಿವಾರಣೆಯಾಗಿ ತ್ವಚೆಯು ಮೃದುವಾಗುತ್ತದೆ. ಚರ್ಮದ ಅರೋಗ್ಯ ಹೆಚ್ಚಿಸಲು ಇದು ಸಹಕಾರಿ. ಜೊತೆಗೆ ಡೆಡ್ ಸ್ಕಿನ್ ನಿವಾರಿಸುತ್ತದೆ.
ಸರಿಯಾಗಿ ಸ್ಕ್ರಬ್ ಮಾಡುವುದು ಹೇಗೆ?ಮುಖದ ಮೇಲೆ ನೀರನ್ನು ಚಿಮುಕಿಸಿ, ಒಂದು ಟೇಬಲ್ ಸ್ಪೂನ್ ಸ್ಕ್ರಬ್ ಅನ್ನು ತೆಗೆದುಕೊಂಡು ಮುಖ ಮತ್ತು ಕುತ್ತಿಗೆಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕಣ್ಣಿನ ಕೆಳ ಭಾಗವನ್ನು ತಪ್ಪಿಸಿ. ಹೆಚ್ಚು ಒತ್ತಡ ಹೇರಬೇಡಿ ಮತ್ತು ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ಸ್ಕ್ರಬ್ ಮಾಡಬೇಡಿ. ಮುಖದ ಟಿ-ಝೋನ್ ಪ್ರದೇಶದಲ್ಲಿ ಸ್ವಲ್ಪ ಹೆಚ್ಚು ಉಜ್ಜಬಹುದು. ಹೀಗೆ ಮಾಡಿದರೆ ಕಲೆ, ಕೊಳೆ ನಿವಾರಣೆಯಾಗಿ ಮುಖ ಎಕ್ಸ್ ಫೋಲಿಯೇಟ್ ಆಗುತ್ತದೆ.

Latest Videos

click me!