Women health :7 ದಿನಗಳವರೆಗೆ ಪಿರಿಯಡ್ಸ್ ಬ್ಲೀಡಿಂಗ್ ಆಗುತ್ತಾ? ತಜ್ಞರು ಏನ್ ಹೇಳ್ತಾರೆ…

First Published | Sep 17, 2022, 5:46 PM IST

ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಪ್ರತಿಯೊಬ್ಬ ಮಹಿಳೆಯರಲ್ಲೂ ವಿಭಿನ್ನವಾಗಿರುತ್ತೆ. ಕೆಲವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ್ರೆ, ಇನ್ನು ಕೆಲವರಿಗೆ ಹೊಟ್ಟೆ ನೋವು ಆಗೋದೆ ಇಲ್ಲ, ಮತ್ತೆ ಕೆಲವರಿಗೆ, ಸೊಂಟ ನೋವು, ವಾಂತಿ ಸಮಸ್ಯೆ ಕಾಡುತ್ತೆ. ಕೆಲವರಿ ಮೂರು ದಿನದಲ್ಲೇ ರಕ್ತಸ್ರಾವ ನಿಂತೆ, ಇನ್ನೂ ಕೆಲವರಿಗೆ ವಾರಗಳವರೆಗೆ ರಕ್ತಸ್ರಾವ ಮುಂದುವರೆಯುತ್ತೆ. ಹಾಗಾದಾಗ ತುಂಬಾನೆ ಯೋಚನೆ ಕಾಡುತ್ತೆ. ಋತುಚಕ್ರದಲ್ಲಿ ಹೆಚ್ಚು ದಿನಗಳು ಅಥವಾ ಹೆಚ್ಚು ರಕ್ತಸ್ರಾವವು ಖಂಡಿತವಾಗಿಯೂ ನಿಮ್ಮನ್ನು ಚಿಂತೆಗೀಡು ಮಾಡುವಂತಹ ವಿಷಯವಾಗಿದೆ. ಋತುಚಕ್ರವೂ ವಾರವಿಡೀ ಮುಂದುವರಿದರೆ, ಟೆನ್ಷನ್ ಬಿಡಿ, ಹಾಗೆ ಯಾಕಾಗುತ್ತೆ ಮುಂದೆ ಓದಿ… 
 

ಋತುಚಕ್ರದ ಬಗ್ಗೆ ನೀವು ಮೊದಲ ಬಾರಿಗೆ ಕೇಳಿದಾಗ, ಋತುಚಕ್ರಗಳು (periods) ತಿಂಗಳಿಗೊಮ್ಮೆ ಬರುತ್ತವೆ ಮತ್ತು 3 ರಿಂದ 5 ದಿನಗಳವರೆಗೆ ಇರುತ್ತವೆ ಎಂದು ನಿಮಗೆ ಹೇಳಿರಬೇಕು. ಆದರೆ ಯಾವಾಗಲೂ ಈ ರೀತಿ ಇರಬೇಕಾದ ಅಗತ್ಯವಿಲ್ಲ ಎಂದು ಕ್ರಮೇಣ ನೀವು ಅರಿತುಕೊಳ್ಳುತ್ತೀರಿ. ಕೆಲವೊಮ್ಮೆ ಋತುಚಕ್ರವು ಕೇವಲ 3 ದಿನಗಳವರೆಗೆ ಮಾತ್ರ ಇದ್ದರೆ, ಇನ್ನೂ ಕೆಲವೊಮ್ಮೆ 5 ದಿನಗಳವರೆಗೆ ಮಾತ್ರ ಬರುತ್ತದೆ. ಕೆಲವೊಮ್ಮೆ ಅವು ತಿಂಗಳಿಗೆ ಎರಡು ಬಾರಿ ಉಂಟಾಗುತ್ತೆ.

ಪ್ರತಿಯೊಬ್ಬ ಮಹಿಳೆಯೂ ತನ್ನ ಸಂತಾನೋತ್ಪತ್ತಿ (fertility) ವಯಸ್ಸಿನಲ್ಲಿ ಇಂತಹ ಪರಿಸ್ಥಿತಿಯನ್ನು ಅನೇಕ ಬಾರಿ ಎದುರಿಸಬೇಕಾಗುತ್ತದೆ. ಮತ್ತು ಇವು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಕೆಲವು ಮಹಿಳೆಯರು ತಮ್ಮ ಪ್ರೌಢಾವಸ್ಥೆಯ ಆರಂಭದಿಂದ ವೃದ್ಧಾಪ್ಯದವರೆಗಿನ ಒಂದು ವಾರದ ಪಿರಿಯಡ್ಸ್ ಹೊಂದಿರುತ್ತಾರೆ.  ಈ 7 ದಿನಗಳ ಪಿರಿಯಡ್ಸ್ (7 ದಿನಗಳ ಅವಧಿ) ಬಗ್ಗೆ ತಿಳಿದುಕೊಳ್ಳೋಣ.

Tap to resize

ಸಾಮಾನ್ಯ ಋತುಚಕ್ರ ಹೇಗಾಗುತ್ತೆ?
ಕ್ಲೀವ್ ಲ್ಯಾಂಡ್ ಕ್ಲಿನಿಕ್ ಪ್ರಕಾರ, ಋತುಚಕ್ರವನ್ನು ಮುಟ್ಟಿನ ಅವಧಿಯ ಮೊದಲ ದಿನದಿಂದ ಮುಂದಿನ ಋತುಚಕ್ರದ ಮೊದಲ ದಿನದವರೆಗೆ ಪರಿಗಣಿಸಲಾಗುತ್ತದೆ. ಸರಾಸರಿ ಪಿರಿಯಡ್ಸ್ ಚಕ್ರವು ಸುಮಾರು 25-30 ದಿನಗಳು. ಆದರೆ ಇದು 21 ರಿಂದ 35 ದಿನಗಳಿಗಿಂತ ಹೆಚ್ಚು ಕಾಲ ಇರಬಹುದು. ಇದು ಮಹಿಳೆಯಿಂದ ಮಹಿಳೆಗೆ ಬದಲಾಗುತ್ತದೆ. ನಿಮ್ಮ ಚಕ್ರದಲ್ಲಿ ದಿನಗಳ ಸಂಖ್ಯೆಯೂ ಪ್ರತಿ ತಿಂಗಳು ಬದಲಾಗಬಹುದು. ಅಲ್ಲದೆ, 2 ರಿಂದ 7 ದಿನಗಳವರೆಗೆ ಋತುಚಕ್ರವನ್ನು(7 days periods) ಹೊಂದುವುದು ಸಾಮಾನ್ಯವಾಗಿದೆ.

ವಾರಗಳ ಕಾಲ ಬ್ಲೀಡಿಂಗ್ (bleeding) ಆಗ್ತಿದ್ರೆ ಭಯ ಬೇಡ, ಯಾಕಂದ್ರೆ 7 ದಿನಗಳ ಕಾಲ ರಕ್ತಸ್ರಾವ ಉಂಟಾಗುವುದು ಸಹ ಸಾಮಾನ್ಯವಾಗಿದೆ. ನಿಮ್ಮ ಡೌಟ್ ಕ್ಲಿಯರ್ ಮಾಡೋಣ ಬನ್ನಿ, ವಾರಗಳ ಕಾಲ ಬ್ಲೀಡಿಂಗ್ ಆಗೋದು ನಿಮ್ಮೊಬ್ಬರಿಗೆ ಮಾತ್ರವಲ್ಲ. ಹಲವು ಮಹಿಳೆಯರಿಗೆ ಈ ರೀತಿ ಆಗುತ್ತೆ. ಆದರೆ ಈ 7 ದಿನಗಳ ಋತುಚಕ್ರಗಳು ಯಾವಾಗ ಸಾಮಾನ್ಯವಲ್ಲ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸ್ತ್ರೀರೋಗ ತಜ್ಞರ ಪ್ರಕಾರ ಪ್ರತಿಯೊಬ್ಬ ಮಹಿಳೆಯ ಋತುಚಕ್ರವು ವಿಭಿನ್ನವಾಗಿರುತ್ತದೆ. 4 ರಿಂದ 8 ದಿನಗಳವರೆಗಿನ ಪಿರಿಯಡ್ಸ್ ನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಪಿರಿಯಡ್ಸ್ ಕಡಿಮೆಯಾಗುವುದು, ನಿಮ್ಮ ಋತುಚಕ್ರವು ಕೆಲವೊಮ್ಮೆ ದೀರ್ಘಕಾಲ ಬಾಳಿಕೆ ಬಂದರೆ ಗಾಬರಿಯಾಗಬೇಡಿ.
 

7 ದಿನ ಬ್ಲೀಡಿಂಗ್ ಆಗೋ ಬಗ್ಗೆ ಭಯಪಡಬೇಕಾದ್ದು ಯಾವಾಗ?
ನೀವು ಹೆಚ್ಚು ಹೆವಿ ಪಿರಿಯಡ್ಸ್ (heavy periods) ಹೊಂದಿದ್ದರೆ ಭಯ ಪಡಬೇಕಾಗುತ್ತೆ. ಅಂದರೆ 7 ದಿನಗಳ ಕಾಲ ಪಿರಿಯಡ್ಸ್ ಸಾಮಾನ್ಯ, ಆದರೆ ನಿಮ್ಮ ಋತುಚಕ್ರದ ಹರಿವು ಸಾಮಾನ್ಯವಾದಾಗ ಮಾತ್ರ. ಅಂದರೆ, ಋತುಚಕ್ರವು ಪ್ರಾರಂಭವಾದಾಗ, ಮೊದಲ - ಎರಡನೇ ದಿನವು ಹೆವಿಯಾಗಿರುತ್ತೆ, ಉಳಿದ ದಿನಗಳಲ್ಲಿ, ಅದು ಕ್ರಮೇಣ ಕಡಿಮೆಯಾಗುತ್ತೆ. ಇದು 7 ದಿನಗಳ ಸಾಮಾನ್ಯ ಪಿರಿಯಡ್ಸ್ ಆಗಿದೆ.

ಆದರೆ ನೀವು 24 ಗಂಟೆಗಳ ಕಾಲ ಸತತವಾಗಿ 7 ದಿನಗಳವರೆಗೆ ಹೆವಿ ಬ್ಲೀಡಿಂಗ್ ಹೊಂದಿದ್ದರೆ, ಮತ್ತು ನೀವು ಪ್ರತಿ 2-3 ಗಂಟೆಗಳಿಗೊಮ್ಮೆ ಪ್ಯಾಡ್ ಅನ್ನು ಬದಲಾಯಿಸಬೇಕಾದರೆ, ಅದು ಸಾಮಾನ್ಯವಲ್ಲ. ಅದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕಾಗಬಹುದು. ಈ ಸಂದರ್ಭದಲ್ಲಿ ನೀವು ಇಗ್ನೋರ್ ಮಾಡಬಾರದು.

ನಿಮ್ಮ ಋತುಚಕ್ರದಲ್ಲಿ ಬದಲಾವಣೆ ಇದ್ದರೆ
ಯಾವಾಗಲೂ ಪಿರಿಯಡ್ಸ್ 3 ದಿನಗಳವರೆಗೆ ಇರುತ್ತದೆಯೇ? ಆದರೆ ಇತ್ತೀಚೆಗೆ ನಿಮ್ಮ ಋತುಚಕ್ರವು 7 ದಿನಗಳವರೆಗೆ ಮುಂದುವರೆಯಲು ಪ್ರಾರಂಭಿಸಿದ್ದು, ಅದು ತಿಂಗಳು ಮುಗಿಯೋದ್ರೊಳಗೆ ಆಗುತ್ತಿದ್ದರೆ, ಆವಾಗ ನೀವು ಸ್ವಲ್ಪ ಜಾಗೃತರಾಗಬೇಕು. ಋತುಚಕ್ರದಲ್ಲಿನ ಬದಲಾವಣೆಗಳು ಮತ್ತು 7 ದಿನಗಳವರೆಗೆ ಹೆವಿ ಬ್ಲೀಡಿಂಗ್ ಆಂತರಿಕ ಸಮಸ್ಯೆಯನ್ನು ಸೂಚಿಸಬಹುದು. ಆದ್ದರಿಂದ ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಮುಖ್ಯ.

ನೋವು ಮತ್ತು ಇತರ ರೋಗಲಕ್ಷಣಗಳು
ಋತುಚಕ್ರವು ಯಾವಾಗಲೂ 7 ದಿನಗಳವರೆಗೆ ಇದ್ದು, ನಿಮಗೆ ತುಂಬಾ ನೋವು ಇದ್ದರೆ. ನೀವು ದಿನವಿಡೀ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗದಷ್ಟು ನೋವು ಕಾಣಿಸಿಕೊಂಡರೆ, ಆಗಲೂ ನೀವು ವೈದ್ಯರನ್ನು ಭೇಟಿಯಾಗಬೇಕು (consult doctor). ಏಕೆಂದರೆ ಯಾವಾಗಲೂ ಮುಟ್ಟಿನ ನೋವನ್ನು ಹೊಂದಿರುವುದು ಸಾಮಾನ್ಯವಲ್ಲ.

Latest Videos

click me!