ಬೀಟ್ ರೂಟ್ ಅಡುಗೆ ಮಾಡಲು ಮಾತ್ರ ಬಳಸ್ತೀರಾ? ಹೀಗೆ ಬಳಸಿದ್ರೆ ಅಂದವೂ ಹೆಚ್ಚುತ್ತೆ

First Published Mar 5, 2021, 4:07 PM IST

ಬೀಟ್ ರೂಟ್ ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಬಳಸುವ ಒಂದು ತರಕಾರಿ. ಇದು ದೇಹದಲ್ಲಿ ರಕ್ತದ ಮಟ್ಟ ಹೆಚ್ಚಲು ಸಹಾಯಕವಾಗಿದೆ. ಬೀಟ್‌ರೂಟ್‌ನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ, ಆದರೆ ಇದರಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್‌ಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಉತ್ತಮ. ಅಷ್ಟೇ ಅಲ್ಲ, ಬೀಟ್‌ರೂಟ್ ಬಳಸುವ ಮೂಲಕ ಸೌಂದರ್ಯವನ್ನೂ ಸಹ ಹೆಚ್ಚಿಸಬಹುದು. ಹೇಗೆ ಅನ್ನೋದನ್ನು ನೋಡಿ...

ಮುಖದ ಕಾಂತಿ ಹೆಚ್ಚಿಸುತ್ತದೆಒಂದು ಬೀಟ್ರೂಟ್ ಅನ್ನು ಗ್ರೇಟ್ ಮಾಡಿ, ಅದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿ ಮತ್ತು ಮುಖ ಗುಲಾಬಿ ಬಣ್ಣದಲ್ಲಿ ಹೊಳೆಯುವಂತೆ ಮಾಡಿ.
undefined
ಡಾರ್ಕ್ ಸರ್ಕಲ್ಗುಣಪಡಿಸುತ್ತವೆಹತ್ತಿ ಉಂಡೆಯನ್ನು ಬೀಟ್ರೂಟ್ ರಸದಲ್ಲಿ ಜೇನು ಮತ್ತು ಹಾಲಿನೊಂದಿಗೆ ಬೆರೆಸಿ ನೆನೆಸಿಡಿ. ನಂತರ ಅದನ್ನು ಕಣ್ಣಿನ ಮೇಲೆ ಹಾಕಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
undefined
ಗಾಢ ತುಟಿಗಳನ್ನು ತಿಳಿಮಾಡುತ್ತದೆಬೀಟ್ರೂಟ್ ರಸವನ್ನು ತುಟಿಗೆ ಹಚ್ಚಿ. ಬೀಟ್ರೂಟ್ ಅನ್ನು ಸಕ್ಕರೆಯೊಂದಿಗೆ ಬೆರೆಸಿ ತುಟಿಗಳನ್ನು ಎಕ್ಸ್ ಫೋಲಿಯೇಟ್ ಮಾಡಬಹುದು. ಇದು ನಿಮ್ಮ ತುಟಿಗಳ ಕಪ್ಪು ಕಲೆ ಮತ್ತು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ.
undefined
ಕೂದಲು ಉದುರುವುದನ್ನು ತಡೆಯುತ್ತದೆಕೂದಲು ತೊಳೆಯಬೇಕು ಅಂದರೆ ಈ ರಸವನ್ನು ಬಿಸಿ ಮಾಡಿ ಕೂದಲಿನ ಬುಡದವರೆಗೆ ಹಚ್ಚಿ.ಹೇರ್ ಮಾಸ್ಕ್‌ಗಾಗಿ, ಗ್ರೌಂಡ್ ಕಾಫಿ ಬೀಜಗಳನ್ನು ಬೀಟ್‌ರೂಟ್ ರಸದೊಂದಿಗೆ ಬೆರೆಸಿ. ಇದು ಹೇರ್ ಕಂಡೀಷನರ್ ಆಗಿಯೂ ಕೆಲಸ ಮಾಡುತ್ತದೆ.
undefined
ನಯವಾದ ಚರ್ಮವನ್ನು ನೀಡುತ್ತದೆಒಂದು ಬೀಟ್ ರೂಟ್ ಅನ್ನು ಎರಡು ಚಮಚ ಮೊಸರಿನೊಂದಿಗೆ ಅರೆದು ಅದಕ್ಕೆ ಸ್ವಲ್ಪ ಬಾದಾಮಿ ಎಣ್ಣೆ ಸೇರಿಸಿ. ಇದನ್ನು ಮುಖ ಮತ್ತು ದೇಹಕ್ಕೆ ಹಚ್ಚಿಕೊಳ್ಳಿ. ಮಸಾಜ್ ಮಾಡಿ 10-20 ನಿಮಿಷ ಬಿಡಿ. ನಂತರ ಅದನ್ನು ತೊಳೆಯಿರಿ.
undefined
ಸುಕ್ಕುಗಳನ್ನು ತಡೆಯುತ್ತದೆಬೀಟ್ ರೂಟ್ ರಸಕ್ಕೆ ಸ್ವಲ್ಪ ಜೇನು ಮತ್ತು ಹಾಲಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮುಖಕ್ಕೆ ಹಚ್ಚಿ. ಈ ಮಾಸ್ಕ್ ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
undefined
ಡ್ಯಾಂಡ್ರಫ್ ಚಿಕಿತ್ಸೆ ಮಾಡುತ್ತದೆಬೀಟ್ ರೂಟ್ ರಸಕ್ಕೆ ಸ್ವಲ್ಪ ವಿನಿಗರ್ ಅಥವಾ ಬೇವಿನ ನೀರನ್ನು ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಶಾಂಪೂವಿನಿಂದ ತೊಳೆಯಿರಿ. ಇದು ತುರಿಕೆಯ ಶಮನಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು ಮತ್ತು ಕೂದಲನ್ನು ಮೃದು ಮತ್ತು ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
undefined
ಮೊಡವೆಗಳನ್ನು ಗುಣಪಡಿಸುತ್ತವೆಬೀಟ್‌ರೂಟ್ ರಸವನ್ನು ಟೊಮೆಟೊ ರಸದೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಅದನ್ನು ಒಣಗಲು ಬಿಡಿ ಮತ್ತು ನಂತರ ತೊಳೆಯಿರಿ. ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ನಿವಾರಣೆಗೂ ಇದು ಸಹಕಾರಿ.
undefined
ಕೂದಲನ್ನು ಕೆಂಪು ಬಣ್ಣ ಮಾಡಲುಅರ್ಧ ಕಪ್ ಕ್ಯಾರೆಟ್ ರಸಕ್ಕೆ ಅರ್ಧ ಕಪ್ ಬೀಟ್‌ರೂಟ್ ರಸ ಸೇರಿಸಿ. ಇಡೀ ದ್ರಾವಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಈ ರಸವನ್ನು ಒಂದೆರಡು ಗಂಟೆಗಳ ಕಾಲ ಕೂದಲಿನ ಮೇಲೆ ಹಾಗೆಯೇ ಬಿಡಿ. ಅಗತ್ಯಬಿದ್ದರೆ ಇದನ್ನು ಆಗಾಗ ಪುನರಾವರ್ತಿಸಿ.
undefined
click me!