ಕೂದಲಿನ ನೂರು ಸಮಸ್ಯೆ ನಿವಾರಿಸುತ್ತೆ ದೇಸಿ ತುಪ್ಪ

First Published Mar 4, 2021, 3:33 PM IST

ತುಪ್ಪವು ಭಾರತೀಯ ಭಕ್ಷ್ಯಗಳಲ್ಲಿ ಒಂದು ಪ್ರಮುಖ ಪದಾರ್ಥವಾಗಿದ್ದು, ಇದು ಆಹಾರಕ್ಕೆ ಇನ್ನಷ್ಟು ರುಚಿಯನ್ನು ನೀಡುತ್ತದೆ. ಆಯುರ್ವೇದದಲ್ಲಿ ಅತಿ ಹೆಚ್ಚು ಬಳಕೆಯಾದ  ಆಹಾರಗಳಲ್ಲಿ ಇದು ಒಂದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಇದು ಆರೋಗ್ಯ, ಚರ್ಮ ಮತ್ತು ಕೂದಲಿಗೂ ಸಹ ಪ್ರಯೋಜನಕಾರಿಯಾಗಿದೆ. ತುಪ್ಪ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ತುಪ್ಪದ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ವಿಜ್ಞಾನಿಗಳು ಚರ್ಚೆಯನ್ನು ಮುಂದುವರೆಸುತ್ತಲೇ ಇರುವುದರಿಂದ,  ಕೂದಲಿಗೆ ಅದರ ಪ್ರಯೋಜನಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ... 

ಕೂದಲಿನ ಬೆಳವಣಿಗೆಗೆ ತುಪ್ಪದ ಮಸಾಜ್:ಕೂದಲು ನೈಸರ್ಗಿಕವಾಗಿ ಬೆಳೆಯಲು ಸಹಾಯ ಮಾಡುವ ಮಾರ್ಗಗಳನ್ನು ಹುಡುಕುತ್ತಿದ್ದೀರಾ? ತುಪ್ಪ ಬೆಸ್ಟ್. ಬಿಸಿ ತುಪ್ಪವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
undefined
ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬು ಮತ್ತು ಆಮ್ಲಗಳು ಇದ್ದು, ಇದು ತಲೆಬುರುಡೆಗೆ ಪೋಷಣೆಯನ್ನು ನೀಡಿ ಕೂದಲಿನ ಬೆಳವಣಿಗೆಗೆ ಪ್ರೇರೇಪಿಸುತ್ತದೆ.
undefined
ತುಪ್ಪ ನೈಸರ್ಗಿಕ ಹೇರ್ ಕಂಡೀಶನರ್:ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಕೊಬ್ಬಿನ ಆಮ್ಲಗಳು ಇದ್ದು, ಇವೆರಡೂ ತಲೆಬುರುಡೆಯಲ್ಲಿ ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದು ಒಣ ಮತ್ತು ಹಾನಿಗೊಳಗಾದ ಕೂದಲನ್ನು ಡೀಪ್ ಕಂಡೀಷನಿಂಗ್ ಮತ್ತು ರಿಪೇರಿ ಮಾಡುವ ಸಾಮರ್ಥ್ಯ ಹೊಂದಿದೆ.
undefined
ತುಪ್ಪವನ್ನು ಕೂದಲಿಗೆ ಹಚ್ಚಿ, ಶವರ್ ಕ್ಯಾಪ್ ನಿಂದ ಮುಚ್ಚಿ. ರಾತ್ರಿ ಬಿಟ್ಟು ಬೆಳಿಗ್ಗೆ ಸಾಮಾನ್ಯ ನೀರಿನಿಂದ ಇದನ್ನು ತೊಳೆಯಿರಿ.
undefined
ತುಪ್ಪದಿಂದ ಕೂದಲಿನ ವಿನ್ಯಾಸ:ಹೇರ್ ಕಲರ್ ಗಳಿಂದ ಹಿಡಿದು ಸ್ಟೈಲಿಂಗ್ ವರೆಗೆ, ಜನರು ಇಂದು ಕೂದಲಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯುಂಟು ಮಾಡುವಂತಹ ಹಲವಾರು ಪ್ರಯೋಗಗಳಲ್ಲಿ ತೊಡಗುತ್ತಾರೆ. ಈ ಪ್ರಕ್ರಿಯೆಯಲ್ಲಿ, ಕೂದಲು ತನ್ನ ಸಹಜ ಕಾಂತಿ ಮತ್ತು ಹೊಳಪನ್ನು ಕಳೆದುಕೊಳ್ಳುತ್ತದೆ, ಇದು ಕೂದಲಿಗೆ ಮರು ಜೀವ ಕೊಡಲು ತುಪ್ಪವು ಸಹಾಯ ಮಾಡುತ್ತದೆ.
undefined
ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ನೆತ್ತಿ ಮತ್ತು ಕೂದಲಿಗೆ ಉಜ್ಜಿಕೊಳ್ಳಿ. ಕೆಲವು ಗಂಟೆಗಳ ಕಾಲ ಹಾಗೆ ಬಿಡಿ ಮತ್ತು ಶಾಂಪೂವಿನಿಂದ ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಗಳನ್ನು ಕಾಣಲು ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ.
undefined
ಸ್ಪ್ಲಿಟ್ ಎಂಡ್ಸ್ ಗಳಿಗೆ :ಸ್ಪ್ಲಿಟ್ ಎಂಡ್ಸ್ ಗಳಿಗೆ ಪ್ರಾಥಮಿಕ ಕಾರಣವೆಂದರೆ ಅತಿಯಾದ ಸ್ಟೈಲಿಂಗ್. ಆದರೆ ತುಪ್ಪವು ಮೂಲತಃ ಅಪೌಷ್ಟಿಕವಾಗಿರುವ ಸೀಳು ತುದಿಗಳನ್ನು ಪೋಷಿಸುತ್ತದೆ. ವಿಟಮಿನ್ ಎ, ಡಿ, ಕೆ2 ಮತ್ತು ಇ ಮೊದಲಾದ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತುಪ್ಪವು ಕೂದಲಿಗೆ ಪ್ರಯೋಜನಕಾರಿಯಾಗಿದೆ.
undefined
ನೀವು ಮಾಡಬೇಕಾದದ್ದು ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ, ಅದನ್ನು ಒಡೆದ ತುದಿಗಳಿಗೆ ನೇರವಾಗಿ ಹಚ್ಚಿ. ಒಂದು ಗಂಟೆಯ ನಂತರ ಸೌಮ್ಯ ಶಾಂಪೂ ಮತ್ತು ತಣ್ಣೀರಿನಿಂದ ತೊಳೆಯಿರಿ.
undefined
ಹೊಳೆಯುವ ಕೂದಲಿಗೆ ತುಪ್ಪ:ಕೂದಲು ಉದುರುವುದು ನಾವೆಲ್ಲರೂ ತಪ್ಪಿಸಬೇಕೆಂದಿರುವ ಕೆಲಸ. ಕೂದಲು ಬಿರುಕು ಬಿಟ್ಟು ತೆಳುವಾಗಿ ಕಾಣುವ ಸಾಧ್ಯತೆ ಇರುತ್ತದೆ, ಆದ್ದರಿಂದ ಈ ಕಾರಣದಿಂದ ಕೂದಲು ಒರಟುತನವನ್ನು ಹೋಗಲಾಡಿಸಲು ನೈಸರ್ಗಿಕ ಪರಿಹಾರದಿಂದ ಚಿಕಿತ್ಸೆ ನೀಡುವುದು ಉತ್ತಮ.
undefined
ಮಾಯಿಶ್ಚರೈಸಿಂಗ್ ಗುಣಹೊಂದಿರುವ ತುಪ್ಪವು ಕೂದಲಿನ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ನಯ, ಹೊಳೆಯುವ ಮತ್ತು ಬೌನ್ಸಿಯಾಗಿ ಮಾಡುತ್ತದೆ.
undefined
click me!