ದಿನ ಬಳಸೋ ಈ ವಸ್ತುಗಳು ಬಂಜೆತನಕ್ಕೆ ಕಾರಣವಾಗಬಹುದು... ಜೋಪಾನ

First Published Oct 30, 2020, 4:10 PM IST

ಅನೇಕ ಜನರು ಇಂದು ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಆಧುನಿಕ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯ ಒತ್ತಡಗಳು ಈ ಸ್ಥಿತಿಗೆ ಕಾರಣವಾಗುವ ಕೆಲವು ಅಂಶಗಳಾಗಿವೆ. ಮತ್ತೊಂದು ಕಾರಣವೆಂದರೆ ಅನೇಕ ಮಹಿಳೆಯರು ತಡವಾಗಿ ಗರ್ಭಿಣಿಯಾಗಲು ಪ್ರಯತ್ನಿಸುತ್ತಾರೆ (ಲೇಟ್ ಪ್ರೆಗ್ನನ್ಸಿ). ಆದರೆ ಯಾವುದೇ ಕಾರಣವಿರಲಿ, ಬಂಜೆತನವು ಅಪಾರ ಮಾನಸಿಕ ಆಘಾತವನ್ನು ಉಂಟುಮಾಡುತ್ತದೆ ಮತ್ತು ಸಂಬಂಧಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ.

ಇಂದು, ನಾವು ನಿಯಮಿತವಾಗಿ ಬಳಸುವ ಬಹುತೇಕ ಎಲ್ಲ ಆಹಾರವು ಹಾನಿಕಾರಕ ರಾಸಾಯನಿಕಗಳಿಂದ ತುಂಬಿರುತ್ತವೆ ಮತ್ತು ಅವುಗಳಲ್ಲಿ ಕೆಲವು ನಿಮ್ಮನ್ನು ಬಂಜೆತನಕ್ಕೆ ದೂಡಬಹುದು. ಆದುದರಿಂದ ಸೇವಿಸುವ ಆಹಾರದ ಕಡೆಗೆ ಗಮನ ಹರಿಸುವುದು ಮುಖ್ಯವಾಗಿದೆ.
undefined
ಕೆಲವು ತಜ್ಞರ ಪ್ರಕಾರ, ನಾವು ಸಾಮಾನ್ಯವಾಗಿ ಬಳಸುವ ಅನೇಕ ವಸ್ತುಗಳಲ್ಲಿನ ರಾಸಾಯನಿಕಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು. ಇಂದು, ನಾವು ನಿಯಮಿತವಾಗಿ ಬಳಸುವ ಬಹುತೇಕ ಎಲ್ಲವೂ ಹಾನಿಕಾರಕ ರಾಸಾಯನಿಕಗಳಿಂದ ಕೂಡಿದೆ. ಸೌಂದರ್ಯವರ್ಧಕದಿಂದ ಹಿಡಿದು ಮನೆಯ ಉತ್ಪನ್ನಗಳವರೆಗೆ, ಅವುಗಳಲ್ಲಿ ಕೆಲವು ಪ್ರಮಾಣದ ರಾಸಾಯನಿಕಗಳು ಇರುತ್ತವೆ.
undefined
ಕೆಲವು ಆಹಾರಗಳು ಸಹ ನಿಮ್ಮನ್ನು ಗರ್ಭಿಣಿಯಾಗದಂತೆ ತಡೆಯುವ ಕೆಲವು ನೈಸರ್ಗಿಕ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಪರಿಣಾಮಗಳು ತಕ್ಷಣವೇ ಸ್ಪಷ್ಟವಾಗಿ ಕಾಣಿಸದಿದ್ದರೂ, ಇದು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಈ ಉತ್ಪನ್ನಗಳನ್ನು ಬಳಸುವುದರಿಂದ ಬಂಜೆತನವು ಅಡ್ಡಪರಿಣಾಮಗಳಲ್ಲಿ ಒಂದಾಗಿರಬಹುದು.
undefined
ಇಲ್ಲಿ, ನಿಮ್ಮನ್ನು ಬಂಜೆತನಕ್ಕೆ ಒಳಪಡಿಸುವ ಕೆಲವು ವಸ್ತುಗಳನ್ನು ನೋಡೋಣ. ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಇದನ್ನು ಓದಿ ಮತ್ತು ಈ ಆಹಾತಗಳನ್ನು ಅಥವಾ ಈ ವಸ್ತುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಲು ಮರೆಯದಿರಿ.
undefined
ನೀವು ಪ್ರತಿದಿನ ಬಳಸುವ ಅನೇಕ ಉತ್ಪನ್ನಗಳು ಭಾರವಾದ ಲೋಹಗಳನ್ನು ಹೊಂದಿರಬಹುದು. ಸತು, ಕ್ಯಾಡ್ಮಿಯಮ್ ಮತ್ತು ಪಾದರಸವು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಸಿಗರೆಟ್ ಹೊಗೆ ಕ್ಯಾಡ್ಮಿಯಂ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ನೀವು ಪೆಟ್ರೋಲ್ ಹೊಗೆ, ಮನೆ ಬಣ್ಣ ಮತ್ತು ಸೌಂದರ್ಯವರ್ಧಕಗಳ ಮೂಲಕ ಸೀಸವನ್ನು ಉಸಿರಾಡುತ್ತೀರಿ. ನೀವು ಡೆಂಟಲ್ ಫಿಲ್ಲಿಂಗ್ ಮಾಡಿಸುತ್ತಿದ್ದರೆ, ನೀವು ಪಾದರಸದಿಂದ ಅಪಾಯಕ್ಕೆ ಒಳಗಾಗಬಹುದು.
undefined
ಇದಲ್ಲದೆ ಕೆಲವು ರೀತಿಯ ಕುಕ್ವೇರ್, ಟೂತ್ಪೇಸ್ಟ್ಗಳು, ಡಿಯೋಡರೆಂಟ್ಗಳು ಮತ್ತು ಆಂಟಿಪೆರ್ಸ್ಪಿರಂಟ್ಗಳಿಂದ ನೀವು ಅಲ್ಯೂಮಿನಿಯಂಗೆ ಒಡ್ಡಿಕೊಳ್ಳಬಹುದು. ಕಾಲಾನಂತರದಲ್ಲಿ, ನಿಮ್ಮ ದೇಹದಲ್ಲಿ ಈ ಭಾರವಾದ ಲೋಹಗಳು ಹೆಚ್ಚುತ್ತದೆ. ಅಂಡಾಣು ಆರೋಗ್ಯ ಮತ್ತು ಗುಣಮಟ್ಟಕ್ಕೆ ಇದು ಕೆಟ್ಟದು. ಇದು ನಿಮ್ಮ ದೇಹವು ಗರ್ಭಧಾರಣೆಗೆ ಅಗತ್ಯವಾದ ಖನಿಜಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
undefined
ಕೆಫೆನ್ ನಿಂದಲೂ ಬಂಜೆತನ ಕಾಣಿಸಿಕೊಳ್ಳುತ್ತದೆ.. ಅಂಡಾಶಯದಿಂದ ಗರ್ಭಾಶಯಕ್ಕೆ ಮೊಟ್ಟೆಗಳನ್ನು ಒಯ್ಯುವ ಫಾಲೋಪಿಯನ್ ಟ್ಯೂಬ್ಗಳಲ್ಲಿನ ಸ್ನಾಯುವಿನ ಚಟುವಟಿಕೆಯನ್ನು ಕೆಫೀನ್ ನಿಗ್ರಹಿಸುತ್ತದೆ. ನೀವು ಹೆಚ್ಚು ಕೆಫೀನ್ ಪಾನೀಯಗಳನ್ನು ಸೇವಿಸುತ್ತಿದ್ದರೆ, ಇದು ನಿಮ್ಮ ಈಸ್ಟ್ರೊಜೆನ್ ಮಟ್ಟಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದು ಎಂಡೊಮೆಟ್ರಿಯೊಸಿಸ್ ಸಂಬಂಧಿತ ಬಂಜೆತನಕ್ಕೆ ಕಾರಣವಾಗಬಹುದು. ಆದ್ದರಿಂದ ಕಾಫಿ, ಚಹಾ, ಕಾರ್ಬೊನೇಟೆಡ್ ಮತ್ತು ಎನರ್ಜಿ ಡ್ರಿಂಕ್ಸ್ ಮತ್ತು ಚಾಕೊಲೇಟ್ಗಳಂತಹ ಕೆಫೀನ್ ಹೊಂದಿರುವ ಎಲ್ಲಾ ಪಾನೀಯಗಳನ್ನು ಮಿತವಾಗಿ ಬಳಸಿ.
undefined
ಟ್ರೈಕ್ಲೋಸನ್ ಹೆಚ್ಚಿನ ಆಂಟಿ ಬ್ಯಾಕ್ಟೀರಿಯಲ್ ಸಾಬೂನುಗಳು, ಡಿಟರ್ಜೆಂಟ್ಗಳು, ಟೂತ್ ಪೇಸ್ಟ್ ಗಳಲ್ಲಿ ಈ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಎಂಡೋಕ್ರಿನ್ ಹಾರ್ಮೋನುಗಳ ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಉಂಟುಮಾಡಬಹುದು. ಟ್ರೈಕ್ಲೋಸನ್ ಸಂತಾನೋತ್ಪತ್ತಿ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈಸ್ಟ್ರೊಜೆನ್ನ ನೈಸರ್ಗಿಕ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಇದು ಮಹಿಳೆಯ ಋತುಚಕ್ರ ಮತ್ತು ಅಂಡೋತ್ಪತ್ತಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು.
undefined
ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ, ಆರ್ಟಿಫಿಷಿಯಲ್ ಸ್ವೀಟ್ನೆರ್ಗಳಿಂದ ದೂರವಿರಿ. ಇವುಗಳಲ್ಲಿ ಆಸ್ಪರ್ಟೇಮ್ ಇದೆ, ಇದು ರಾಸಾಯನಿಕ ಆಹಾರ ಸಂಯೋಜಕವಾಗಿದೆ. ಲೇಬಲ್ನಲ್ಲಿ ‘ಡಯಟ್ ಫ್ರೆಂಡ್ಲಿ’ ಅಥವಾ ‘ಸಕ್ಕರೆ ಮುಕ್ತ’ ಹೊಂದಿರುವ ಬಹುತೇಕ ಯಾವುದಾದರೂ ಈ ರಾಸಾಯನಿಕವನ್ನು ಹೊಂದಿರುತ್ತದೆ.
undefined
ಆಸ್ಪರ್ಟೇಮ್ ಮಹಿಳೆಯ ಋತುಚಕ್ರವನ್ನು ಬದಲಾಯಿಸಬಹುದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು. ಇದು ಇನ್ಸುಲಿನ್ ಪ್ರತಿರೋಧಕ್ಕೂ ಕಾರಣವಾಗಬಹುದು, ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಗೆ ಸಾಮಾನ್ಯ ಕಾರಣವಾಗಿದೆ. ಪಿಸಿಓಎಸ್ ಅಂಡೋತ್ಪತ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
undefined
click me!