ಈ ಗೆಡ್ಡೆಯ ರಸದಲ್ಲಿ ಅಡಗಿದೆ ಸೌಂದರ್ಯ ಹೆಚ್ಚಿಸುವ ದಿವ್ಯ ಔಷಧ...

First Published Oct 29, 2020, 2:59 PM IST

ಆಲೂಗಡ್ಡೆ ಎಲ್ಲರಿಗೂ ಪ್ರಿಯವಾದ ಆಹಾರ. ಪೌಷ್ಟಿಕಾಂಶ, ಕಾರ್ಬೋಹೈಡ್ರೇಟ್ ಗಳು ಮತ್ತು ವಿಟಾಮಿನ್ ಸಿ ಆಲೂಗಡ್ಡೆಯಲ್ಲಿ ಹೇರಳವಾಗಿರುತ್ತದೆ. ಆದ್ದರಿಂದಲೇ ಇದು ಸೌಂದರ್ಯವನ್ನು ಕಾಪಾಡುವಲ್ಲಿ ಅತ್ಯಂತ ಉಪಯುಕ್ತವಾಗಿದೆ. ಒಂದು ಚಮಚ ಆಲೂಗಡ್ಡೆ ರಸ ಇದ್ದರೆ ಸಾಕು, ಎಲ್ಲಾ ಸಮಸ್ಯೆಗಳು ದೂರವಾಗಿ ಚರ್ಮ ಹೊಳಪನ್ನು ಹೆಚ್ಚುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ... 

ಕಣ್ಣಿನ ಕೆಳಭಾಗದ ಕಪ್ಪು ಕಲೆಗಳಿದ್ದರೆ, ಆಲೂಗಡ್ಡೆಯ ರಸವನ್ನು ಅದರ ಮೇಲೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ಉಗುರು ಬಿಸಿ ನೀರಿನಿಂದ ತೊಳೆದರೆ, ಕಲೆಗಳು ಹೋಗುತ್ತವೆ.
undefined
ಮುಖದಲ್ಲಿ ನೆರಿಗೆಗಳು ಆಗಿದ್ದರೆ ಆಲೂಗಡ್ಡೆ ರಸವನ್ನು ತೆಗೆದುಕೊಂಡು ಮಖಕ್ಕೆ ಹಚ್ಚಬೇಕು. ಹದಿನೈದು ನಿಮಿಷ ಬಿಟ್ಟು ಮುಖವನ್ನು ತೊಳೆದರೆ ಮುಖ ಹೊಳಪು ಪಡೆದುಕೊಳ್ಳುತ್ತದೆ.
undefined
ಆಲೂಗಡ್ಡೆಯಲ್ಲಿ ಪೊಟಾಷಿಯಂ ಅಂಶವಿರುತ್ತೆ. ಇದು ನಿಮ್ಮ ಚರ್ಮವನ್ನು ಮಾಯ್ಚಿರೈಸ್ ಮಾಡುತ್ತೆ ಮತ್ತು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ. ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಇದೆ. ಇದು ಹೊಸ ಜೀವಕೋಶಗಳು ಹುಟ್ಟುವುದಕ್ಕೆ ನೆರವಾಗುತ್ತೆ.
undefined
ಆಲೂಗಡ್ಡೆಯ ಒಂದು ಚಿಕ್ಕ ತುಂಡನ್ನು ಕಿವುಚಿ ಒಂದು ಚಮಚ ಮೊಸರು ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತೊಳೆದರೆ ಚರ್ಮಕ್ಕೆ ಬೇಕಾದ ತೇವಾಂಶವನ್ನು ಇದು ಒದಗಿಸುತ್ತದೆ.
undefined
ಆಲೂಗಡ್ಡೆಯ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹತ್ತು ನಿಮಿಷಗಳ ಕಾಲ ಉಜ್ಜಿದರೆ, ಸತ್ತ ತ್ವಚೆಯ ಕೋಶಗಳನ್ನು ತೆಗೆದುಹಾಕಬಹುದು. ಇದರಿಂದ ತ್ವಚೆ ಸುಂದರವಾಗಿರುತ್ತದೆ.
undefined
ಅರ್ಧ ಆಲುಗಡ್ಡೆಯನ್ನು ಚಿಕ್ಕದಾಗಿ ತುರಿದು ಹಿಂಡಿ ರಸ ಸಂಗ್ರಹಿಸಿ. ಇದಕ್ಕೆ ಚಿಟಿಕೆಯಷ್ಟು ಅರಿಶಿನದ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖ ಮತ್ತು ಕುತ್ತಿಗೆಗೆ ತೆಳುವಾಗಿ ಹಚ್ಚಿಕೊಳ್ಳಿ. ಅರ್ಧ ಘಂಟೆಯ ನಂತರ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಒಣ ತ್ವಚೆ ಸಮಸ್ಯೆ ನಿವಾರಿಸಿ ಉತ್ತಮ ತ್ವಚೆ ನಿಮ್ಮದಾಗುತ್ತದೆ.
undefined
ಒಂದು ಆಲೂಗಡ್ಡೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಅದನ್ನು ಮಿಕ್ಸರ್ ಗೆ ಹಾಕಿ ಚೆನ್ನಾಗಿ ಅರೆದು ಜ್ಯೂಸ್ ಮಾಡಿ. ಆ ಜ್ಯೂಸ್ ಗೆ ಮೂರು ಹನಿ ಲಿಂಬೆ ರಸ ಮತ್ತು ಕಾಲು ಕಪ್ ಮೊಸರು ಹಾಕಿ ಮಿಶ್ರಣ ಮಾಡಿ. ಇದನ್ನು ತಲೆಗೂದಲು ಮತ್ತು ನೆತ್ತಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಶ್ಯಾಂಪೂ ಹಾಕಿ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಪ್ರತಿ 20 ದಿನಗಳಿಗೊಮ್ಮೆ ಇದನ್ನು ಮಾಡಿದರೆ ತಲೆಗೂದಲ ಬುಡ ಗಟ್ಟಿಯಾಗಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.
undefined
ಅರ್ಧ ಆಲೂಗಡ್ಡೆ ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಎರಡು ಚಿಕ್ಕ ಚಮಚ ಹಸಿ ಹಾಲಿನಲ್ಲಿ ಬೆರೆಸಿ ಮಿಶ್ರಣ ಮಾಡಿ. ಈ ರಸವನ್ನು ಹತ್ತಿಯುಂಡೆಯಲ್ಲಿ ಅದ್ದಿ ಮುಖಕ್ಕೆ ನಿಧಾನವಾಗಿ ಹಚ್ಚಿನ್ಮ್ಹ್ಯು. ಕಣ್ಣುರೆಪ್ಪೆಗಳ ಹಿಂಭಾಗಕ್ಕೂ ಹಚ್ಚಿಕೊಳ್ಳಬಹುದು. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.
undefined
ಆಲೂಗಡ್ಡೆಯು ಚರ್ಮದ ಗಟ್ಟಿತನದ ರಕ್ಷಣೆ ಮತ್ತು ತಾಜಾವಾಗಿರಲು ನೆರವಾಗುತ್ತೆ ,ಇದರಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ಕೋಲಾಜಿನ್ ತಯಾರಿಕೆಯನ್ನು ಹೆಚ್ಚಿಸುತ್ತೆ. ಮತ್ತು ಇದರಲ್ಲಿರುವ ಝಿಂಕ್ ಅಂಶವು ತೊಂದರೆಗೆ ಒಳಗಾದ ಚರ್ಮದ ಟಿಶ್ಯೂವನ್ನು ಸರಿಪಡಿಸಲು ನೆರವಾಗುತ್ತದೆ.
undefined
click me!