ನಿರಂತರ ದೇಹ ಸಂಪರ್ಕ ಹೊರತು ಪಡಿಸಿ, ಈ ಕಡೆ ಗಮನ ಹರಿಸಿದರೆ ಪ್ರೆಗ್ನೆನ್ಸಿ ಸುಲಭ!

Published : Feb 28, 2023, 03:51 PM IST

ಕೆಲವು ಮಹಿಳೆಯರು ಬೇಗ ಗರ್ಭ ಧರಿಸುತ್ತಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಹಲವು ಪ್ರಯತ್ನದ ಬಳಿಕವೂ ಫಲ ಸಿಗೋದಿಲ್ಲ. ನೀವು ಸಹ ಗರ್ಭಧರಿಸಲು ತೊಂದರೆ ಅನುಭವಿಸುತ್ತಿದ್ದರೆ, ನೀವು ಪ್ರಕೃತಿ ಚಿಕಿತ್ಸಕ ವೈದ್ಯರಿಂದ ಪರಿಹಾರ ಪಡೆಯಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿ.  

PREV
18
ನಿರಂತರ ದೇಹ ಸಂಪರ್ಕ ಹೊರತು ಪಡಿಸಿ, ಈ ಕಡೆ ಗಮನ ಹರಿಸಿದರೆ ಪ್ರೆಗ್ನೆನ್ಸಿ ಸುಲಭ!

ಅನೇಕ ಮಹಿಳೆಯರು ಗರ್ಭಧರಿಸಲು ಕಷ್ಟಪಡುತ್ತಾರೆ, ಆದರೆ ಕೆಲವು ಮಹಿಳೆಯರು ಬಹಳ ಸುಲಭವಾಗಿ ಗರ್ಭಿಣಿಯಾಗುತ್ತಾರೆ. ಗರ್ಭ ಧರಿಸಲು (get pregnant) ಸಾಧ್ಯವಾಗದ ಮಹಿಳೆಯರು, ಗರ್ಭಿಣಿಯಾಗಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಾರೆ, ಆದರೂ ಗರ್ಭ ಧರಿಸಲು ತೊಂದರೆ ಅನುಭವಿಸುತ್ತಿದ್ದರೆ,, ಗರ್ಭಧಾರಣೆಗಾಗಿ ನಿಮ್ಮ ದೇಹವನ್ನು ಹೇಗೆ ನಿರ್ವಿಷಗೊಳಿಸಬಹುದು ಎಂಬುದನ್ನು ಪ್ರಕೃತಿ ಚಿಕಿತ್ಸಕ ವೈದ್ಯರಿಂದ ತಿಳಿದುಕೊಳ್ಳೋಣ. 

28

ಗರ್ಭಧರಿಸಲು ಇದು ಹೇಗೆ ಸಹಾಯ ಮಾಡುತ್ತದೆ?
ಪ್ರಕೃತಿಚಿಕಿತ್ಸೆ ತಜ್ಞೆ ಡಾ.ನಿತಿಶಾ ಗುಪ್ತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯರಿಗೆ ಗರ್ಭಧರಿಸಲು ಸುಲಭ ವಿಧಾನವೊಂದನ್ನ ತಿಳಿಸಿದ್ದಾರೆ. ದೇಹವನ್ನು ನಿರ್ವಿಷಗೊಳಿಸಲು, ಒಂದು ತಿಂಗಳ ಕಾಲ ಫಲಹಾರ ಮತ್ತು ಪಾನೀಯಗಳನ್ನು ತೆಗೆದುಕೊಳ್ಳಿ ಎಂದು ವೈದ್ಯರು ಹೇಳಿದ್ದಾರೆ. ಈ ಸಮಯದಲ್ಲಿ ನೀವು ಹಣ್ಣುಗಳು, ತರಕಾರಿಗಳು, ಹಾಲು, ಹಾಲಿನ ಉತ್ಪನ್ನಗಳು (milk product), ಬೇಳೆಕಾಳುಗಳು ಮತ್ತು ನೀರನ್ನು ತೆಗೆದುಕೊಳ್ಳಬಹುದು.

38

ಇದಲ್ಲದೇ ಈ ಸಮಯದಲ್ಲಿ ನೀವು ವಾರಕ್ಕೊಮ್ಮೆ ಎನಿಮಾ ತೆಗೆದುಕೊಳ್ಳಬೇಕು ಮತ್ತು ಒಮ್ಮೆ ಸಿಟ್ಜ್ ಸ್ನಾನ ಮಾಡಬೇಕು. ಇದನ್ನು ಮಾಡುವುದರಿಂದ ನೀವು ಶೀಘ್ರದಲ್ಲೇ ಗರ್ಭಿಣಿಯಾಗಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಮಗುವೂ ಆರೋಗ್ಯಕರವಾಗಿರುತ್ತದೆ ಮತ್ತು ಗರ್ಭಾವಸ್ಥೆಯಲ್ಲಿಯೂ (pregnancy) ನಿಮಗೆ ಯಾವುದೇ ತೊಡಕುಗಳು ಬರುವುದಿಲ್ಲ ಎಂದು ಅವರು ಹೇಳುತ್ತಾರೆ. ಈ ಆಹಾರಕ್ರಮವನ್ನು ಅನುಸರಿಸುವ ಮೂಲಕ, ನೀವು 4 ರಿಂದ 5 ಕೆಜಿ ತೂಕವನ್ನು ಸಹ ಕಳೆದುಕೊಳ್ಳುತ್ತೀರಿ ಅನ್ನೋದನ್ನು ಅವರು ತಿಳಿಸಿದ್ದಾರೆ.

48

ದೇಹವನ್ನು ನಿರ್ವಿಷಗೊಳಿಸುವುದು ಹೇಗೆ?
ಅಮೆರಿಕನ್ ಪ್ರೆಗ್ನೆನ್ಸಿ ಅಸೋಸಿಯೇಷನ್ ಪ್ರಕಾರ, ಸಾವಯವ ಉತ್ಪನ್ನಗಳು, ಡೈರಿ ಉತ್ಪನ್ನಗಳನ್ನು ಸೇವಿಸಿ ಮತ್ತು ಫಾಸ್ಟ್ ಫುಡ್ ತಿನ್ನುವುದನ್ನು ನಿಲ್ಲಿಸಿ. ಧೂಮಪಾನವನ್ನು ತ್ಯಜಿಸಿ ಮತ್ತು ಸೆಕೆಂಡ್ ಹ್ಯಾಂಡ್ ಧೂಮಪಾನಕ್ಕೆ (second hand smoking) ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಫಿಲ್ಟರ್ ಮಾಡಿದ ನೀರನ್ನು ಕುಡಿಯಿರಿ ಎನ್ನುತ್ತಾರೆ.

58

ಇನ್ನು ನಿಮ್ಮ ಮನೆಯಲ್ಲಿ ವಿಷಕಾರಿಯಲ್ಲದ ಶುದ್ಧೀಕರಣ ಉತ್ಪನ್ನಗಳನ್ನು ಮಾತ್ರ ಇರಿಸಿ. ಥಾಲೇಟ್ ಮತ್ತು ಪ್ಯಾರಾಬೆನ್ ಮುಕ್ತವಾದ ಉತ್ಪನ್ನಗಳನ್ನು ಆರಿಸಿ. ಬಿಸ್ಫೆನಾಲ್ ಎ (BPA) ಹೊಂದಿರುವ ಪ್ಲಾಸ್ಟಿಕ್ನಲ್ಲಿ ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ಖರೀದಿಸುವುದನ್ನು ತಪ್ಪಿಸಿ. ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಎಂದಿಗೂ ಮೈಕ್ರೋವೇವ್ ಮಾಡಬೇಡಿ. ಇವುಗಳನ್ನು ಅನುಸರಿಸುವ ಮೂಲಕ ದೇಹವನ್ನು ನಿರ್ವಿಷಗೊಳಿಸಬಹುದು.

68

ಸಿಟ್ಜ್ ಬಾತ್ ನ ಪ್ರಯೋಜನಗಳು
ಕೆಲವೊಮ್ಮೆ ಪೆರಿನಿಯಲ್ ನೋವು ಮತ್ತು ಹೆರಿಗೆಯ ನಂತರ ಚೇತರಿಸಿಕೊಳ್ಳಲು ಸಹಾಯ ಮಾಡಲು ವೈದ್ಯರು ಸಿಟ್ಜ್ ಸ್ನಾನ (sitz bath) ಮಾಡಲು ಶಿಫಾರಸು ಮಾಡುತ್ತಾರೆ. ಅಲ್ಲದೆ ಸಿಟ್ಜ್ ಸ್ನಾನವು ಉರಿಯೂತ ಕಡಿಮೆ ಮಾಡುತ್ತದೆ, ನೈರ್ಮಲ್ಯವನ್ನು ಸುಧಾರಿಸುತ್ತದೆ ಮತ್ತು ಆಂಡ್ರೊಜೆನಿಕ್ ಪ್ರದೇಶಕ್ಕೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ.

78

ಸಿಟ್ಜ್ ಸ್ನಾನದಿಂದ ಗುದದ್ವಾರವನ್ನು ಸ್ವಚ್ಛವಾಗಿಡುವುದರ ಜೊತೆಗೆ, ಮೂಲವ್ಯಾಧಿಯಿಂದ ಉಂಟಾಗುವ ಊತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಬಹುದು. ಸಿಟ್ಜ್ ಸ್ನಾನವು ಈ ಭಾಗದಲ್ಲಿ ಬೆಳೆಯುವ ಸಿಸ್ಟ್ ಗಳನ್ನು ಸಹ ತೊಡೆದುಹಾಕಬಹುದು. ಇದರಿಂದ ಉತ್ತಮ ಹೈಜಿನ್ ಕಾಪಾಡಿಕೊಳ್ಳಾಲು ಸಾಧ್ಯವಾಗುತ್ತೆ.
 

88

ಶೀಘ್ರದಲ್ಲೇ ಗರ್ಭಿಣಿಯಾಗಲು ಇತರ ಮಾರ್ಗಗಳು
ಶೀಘ್ರದಲ್ಲೇ ಗರ್ಭಿಣಿಯಾಗಲು ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸಿ. ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದರಿಂದ ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಅಂಡೋತ್ಪತ್ತಿ ಸಮಯಕ್ಕೆ ಹತ್ತಿರದಲ್ಲಿ ಲೈಂಗಿಕ ಕ್ರಿಯೆ (regular sex)ನಡೆಸಿ. ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದಿದ್ದರೆ, ನಿಮ್ಮ ಋತುಚಕ್ರ ಮುಗಿದ ತಕ್ಷಣ ವಾರದಲ್ಲಿ 2 ರಿಂದ 3 ದಿನಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸಿ. ಅಲ್ಲದೆ ಸಾಮಾನ್ಯ ತೂಕವನ್ನು ಕಾಪಾಡಿಕೊಳ್ಳಿ. ಅಧಿಕ ತೂಕ ಮತ್ತು ಕಡಿಮೆ ತೂಕದ ಮಹಿಳೆಯರಿಗೆ ಅಂಡೋತ್ಪತ್ತಿ ಅಸ್ವಸ್ಥತೆಗಳ ಹೆಚ್ಚಿನ ಅಪಾಯವಿದೆ, ಆದ್ದರಿಂದ ನಿಮ್ಮ ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ.

Read more Photos on
click me!

Recommended Stories