ವೈಟ್ ಡಿಸ್ಚಾರ್ಜಿನಿಂದ ತೊಂದರೆಗೀಡಾಗಿದ್ದೀರಾ? ಇಲ್ಲಿದೆ ನೋಡಿ ಈಸಿ ರೆಮಿಡೀಸ್!

First Published Dec 16, 2022, 5:31 PM IST

ಮಹಿಳೆಯರಲ್ಲಿ ಬಿಳಿ ಸೆರಗು ಅಥವಾ ವೈಟ್ ಡಿಸ್ಚಾರ್ಜ್ ಸಮಸ್ಯೆ ಸಾಮಾನ್ಯ. ಇದು ಸಹ ಋತುಚಕ್ರದಂತೆ ಸಾಮಾನ್ಯವಾಗಿದ್ದರೂ, ಮಹಿಳೆಯರು ಇನ್ನೂ ಅದರಿಂದ ತೊಂದರೆಗೀಡಾಗಿದ್ದಾರೆ. ತ್ವರಿತವಾಗಿ ವೈಟ್ ಡಿಸ್ಚಾರ್ಜ್ ಗೆ ಪರಿಹಾರ ಪಡೆಯಲು ಈ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.

ಮಹಿಳೆಯರಲ್ಲಿ ಬಿಳಿ ಸ್ರಾವವು (White Discharge) ಸಾಕಷ್ಟು ಸಾಮಾನ್ಯ ಮತ್ತು ಆರೋಗ್ಯಕರ. ಇದು ಶುದ್ಧೀಕರಣದ ನೈಸರ್ಗಿಕ ಪ್ರಕ್ರಿಯೆ. ಆದರೆ ಅದರಲ್ಲಿನ ಕೆಲವು ಬದಲಾವಣೆಗಳು ದೇಹದ ಆಂತರಿಕ ಭಾಗದಲ್ಲಿ ಸೋಂಕಿನ ಸಂಕೇತವಾಗಿರಬಹುದು. ಅನೇಕ ಬಾರಿ ಮಹಿಳೆಯರು ಬಿಳಿ ಸೆರಗಿನಿಂದಾಗಿ ತುರಿಕೆ ಮತ್ತು ಉರಿ ಅನುಭವಿಸ್ತಾರೆ. ಹಾಗಾಗಿ ಅದನ್ನು ಎದುರಿಸಲು ನೀವು ಕೆಲವು ಆಯುರ್ವೇದ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
 

ವೈಟ್ ಡಿಸ್ಚಾರ್ಜ್ ಗೆ ಆಯುರ್ವೇದ ವಿಧಾನಗಳು

1) ಬೆಂಡೆಕಾಯಿ (Ladies Finger)
ಬಿಳಿ ಸೆರಗು ಸಮಸ್ಯೆಯನ್ನು ತೊಡೆದುಹಾಕಲು ಮಹಿಳೆಯರು ಬೆಂಡೆಕಾಯಿ ಟ್ರೈ ಮಾಡಬಹುದು.. ಬೆಂಡೆಕಾಯಿ ಅತ್ಯುತ್ತಮ ಆಂಟಿ-ಹೈಪರ್ಲಿಪಿಡೆಮಿಯಾ, ಆಂಟಿ-ಡಯಾಬಿಟಿಕ್ ಮತ್ತು ಆಯಾಸ ನಿವಾರಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಿಸ್ಟಂನಿಂದ ಹೆಚ್ಚುವರಿ ಲೋಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತೆ. 

ಸುಮಾರು 100 ಗ್ರಾಂ ಬೆಂಡೆಕಾಯಿ ತೆಗೆದುಕೊಳ್ಳಿ ಮತ್ತು ನಂತರ ಅದನ್ನು ಒಂದು ಲೀಟರ್ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಕುದಿಸಿ. ಇದನ್ನು ಮಾಡುವ ಮೊದಲು, ನೀವು ಬೆಂಡೆಕಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಈ ನೀರನ್ನು ಕುದಿಸಿದ ನಂತರ, ಅದನ್ನು ತಣ್ಣಗಾಗಿಸಿ ಮತ್ತು ನಂತರ ಈ ನೀರನ್ನು ಕುಡಿಯಿರಿ. ನೀವು ಅದನ್ನು ಮೊಸರಿನಲ್ಲಿ ನೆನೆಸಿ ಸಹ ತಿನ್ನಬಹುದು. 

2) ನೆಲ್ಲಿಕಾಯಿ(Amla)

ನೆಲ್ಲಿಕಾಯಿ ಒಂದು ಉತ್ತಮ ಸೂಪರ್ ಫುಡ್ ಆಗಿದೆ. ಇದು ವಿಟಮಿನ್ ಸಿ ಮತ್ತು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ದೇಹದ ಆಂತರಿಕ ಭಾಗವನ್ನು ಬಲಪಡಿಸುತ್ತೆ.

ನೆಲ್ಲಿಕಾಯಿಯನ್ನು ಆಹಾರದಲ್ಲಿ ಯಾವ ರೀತಿ ಸೇರಿಸಬಹುದು? ಬೇಕಾದರೆ ನೀವು, ಇದನ್ನು ಸಂಪೂರ್ಣವಾಗಿ ಹಾಗೆಯೇ ತಿನ್ನಬಹುದು, ಅಥವಾ  ಒಂದು ಲೋಟ ಬಿಸಿ ನೀರಿಗೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ ಕುಡಿಯಬಹುದು. ನೆಲ್ಲಿಕಾಯಿ ಜಾಮ್ ಅಥವಾ ಟಾಫಿಯನ್ನು ಸಹ ತಿನ್ನಬಹುದು. 

3) ದಾಳಿಂಬೆ (Pomegranate)

ಬಿಳಿ ಸೆರಗು ತೊಡೆದು ಹಾಕಲು ಮಹಿಳೆಯರು ದಾಳಿಂಬೆಯನ್ನು ತಿನ್ನಬಹುದು. ಇದರ ಜ್ಯೂಸ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಆಯಾಸ ನಿವಾರಿಸಲು ಸಹಾಯ ಮಾಡುತ್ತೆ. ಇದು ದೇಹದ ಒಳ ಭಾಗದಲ್ಲಿರುವ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತೆ. 

ದಾಳಿಂಬೆಯನ್ನು ಹಾಗೆ ಹಣ್ಣಾಗಿ ತಿನ್ನಬಹುದು, ಅಥವಾ ಒಂದು ಲೋಟ ದಾಳಿಂಬೆ ಜ್ಯೂಸ್ (Juice) ಕುಡಿಯಬಹುದು. ಇದಲ್ಲದೆ, ದಾಳಿಂಬೆ ಎಲೆಗಳನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ, ನಂತರ ಅದನ್ನು ನೀರಿನೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಈ ಕಷಾಯ ಕುಡಿಯಬಹುದು. 

4) ಅಕ್ಕಿ ಸ್ಟಾರ್ಚ್ (Starch)

ಬಿಳಿ ಸೆರಗು ತೊಡೆದುಹಾಕಲು ಇದು ಉತ್ತಮ ಮನೆಮದ್ದು. ಪ್ರತಿದಿನ ಅಕ್ಕಿ ಸ್ಟಾರ್ಚನ್ನು ಸೇವಿಸುವ ಮೂಲಕ ಈ ಸಮಸ್ಯೆ ನಿವಾರಿಸಬಹುದು. ಇದಕ್ಕಾಗಿ, ಅಕ್ಕಿಯನ್ನು ನೀರಿನಲ್ಲಿ ಕುದಿಸಿ ಮತ್ತು ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಅದರ ನೀರನ್ನು ತಣ್ಣಗಾಗಿಸಿ. ನಂತರ ಕುಡಿಯಿರಿ. 

5) ಪೇರಳೆ ಎಲೆ(Guava Leaves)

ಇದು ವೈಟ್ ಡಿಸ್ಚಾರ್ಜ್ ಮತ್ತು ತುರಿಕೆ ತೊಡೆದುಹಾಕಲು ಸಹಾಯ ಮಾಡುವ ಅತ್ಯುತ್ತಮ ನೈಸರ್ಗಿಕ ಪರಿಹಾರ. ಪೇರಳೆ ಎಲೆ ಸೋಂಕು ಮತ್ತು ತುರಿಕೆ ನಿವಾರಣೆಗೆ ಸಹಾಯ ಮಾಡುತ್ತೆ. ಇದಕ್ಕಾಗಿ, ಕೆಲವು ಪೇರಳೆ ಎಲೆಗಳನ್ನು ತೆಗೆದುಕೊಳ್ಳಿ, ನಂತರ ಅದನ್ನು ನೀರಿನಲ್ಲಿ ಕುದಿಸಿ. ನೀರು ಅರ್ಧಕ್ಕೆ ಬರುವವರೆಗೆ ಕುದಿಸಿ. ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ. 
      

click me!