ಮಗುವಿನ ತಾಯಿ, ವಯಸ್ಸಿನ್ನೂ ಚಿಕ್ಕದು, ಆದರೆ ಸ್ತನವೇ ಬೇಡವೆಂದು ನಿರ್ಧಿರಿಸದ್ದೇಕೆ?

First Published Dec 13, 2022, 4:44 PM IST

ಸ್ತನಗಳು ಮಹಿಳೆಯರ ಸೌಂದರ್ಯ ಹೆಚ್ಚಿಸುತ್ತವೆ. ಪ್ರತಿಯೊಬ್ಬ ಮಹಿಳೆಯೂ ಕರ್ವ್ ಬಾಡಿ ಹೊಂದಲು ಬಯಸುತ್ತಾಳೆ. ಅದಕ್ಕಾಗಿ ಸ್ತನಗಳು ಆಕರ್ಷಕವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಎರಡೂ ಸ್ತನಗಳನ್ನು ಕತ್ತರಿಸಿಕೊಂಡಿದ್ದಾಳೆ ಮತ್ತು ಈಗ ಹೊಸ ಜೀವನವನ್ನು ನಡೆಸುತ್ತಿದ್ದಾಳೆ ಎಂದು ತಿಳಿದರೆ ನೀವು ಅಚ್ಚರಿಪಡೋದು ಖಚಿತಾ..

ಪ್ರತಿಯೊಬ್ಬ ಮಹಿಳೆಯೂ ಪರ್ಫೆಕ್ಟ್ ಬಾಡಿ ಹೊಂದಲು ಬಯಸುತ್ತಾಳೆ. 36-24-36 ಈ ಗಾತ್ರವು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಇತ್ತೀಚೆಗೆ, ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುವ 28 ವರ್ಷದ ಯುವತಿಯೊಬ್ಬಳು ತನ್ನ ಎರಡೂ ಸ್ತನಗಳನ್ನು ಕತ್ತರಿಸಿ ಈಗ ತನ್ನ ಜೀವನವನ್ನು ಸ್ತನಗಳಿಲ್ಲದೇ ಬದುಕುತ್ತಿದ್ದಾಳೆ. ಕ್ಯಾನ್ಸರ್ ನಂತರ, ಹೆಚ್ಚಿನ ಮಹಿಳೆಯರು ಸ್ತನವನ್ನು ಕತ್ತರಿಸಬೇಕಾಗುತ್ತದೆ, ಇದು ತುಂಬಾ ನೋವಿನಿಂದ ಕೂಡಿರುತ್ತೆ. ಆದರೆ, ಈ ಮಹಿಳೆ ತನ್ನ ಸ್ತನವನ್ನು ಕತ್ತರಿಸುವ ಮೂಲಕ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾಳೆ ಮತ್ತು ಇತರರಿಗೆ ಸ್ಫೂರ್ತಿಯಾಗಿದ್ದಾಳೆ. ಈ ಹುಡುಗಿಯ ಬಗ್ಗೆ ಫುಲ್ ಡಿಟೇಲ್ ತಿಳಿಯೋಣ.

ಯಾರು ಈ ಹುಡುಗಿ?

ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುತ್ತಿರುವ 28 ವರ್ಷದ ಸ್ಟೆಫನಿ ತನ್ನ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಳು. ಆ ಮಹಿಳೆಗೆ ಸ್ತನ ಕ್ಯಾನ್ಸರ್ (breast cancer) ಇರಲಿಲ್ಲ, ಆದ್ರೆ ಆಕೆಗೆ 15 ನೇ ವಯಸ್ಸಿನಿಂದ ಸ್ತನ ಕ್ಯಾನ್ಸರ್ ನ ಅಪಾಯದಲ್ಲಿದ್ದಳು, ಏಕೆಂದರೆ ಆಕೆಗೆ BRCA1 ಜೀನ್ ಮ್ಯೂಟೇಶನ್ ಹೊಂದಿದ್ದಳು. 

BRCA1 ಜೀನ್ ಮ್ಯೂಟೇಶನ್ ಸಮಸ್ಯೆ ಅವರ 77 ವರ್ಷದ ಅಜ್ಜಿ ತೆರೇಸಾ ಮತ್ತು 53 ವರ್ಷದ ತಾಯಿ ಗೇಬ್ರಿಯೆಲಾ ಅವರಿಗೂ ಕಾಡುತ್ತಿತ್ತು. ಈ ಕಾರಣದಿಂದಾಗಿ ಈ ರೂಪಾಂತರವು (mutation) ತನ್ನ ಜೀವನವನ್ನು ಹಾಳುಮಾಡಬಹುದು ಎಂದು ಸ್ಟೆಫನಿ ಹೆದರಿದಳು. ಹಾಗಾಗಿ, 27 ನೇ ವಯಸ್ಸಿನಲ್ಲಿ, ಸ್ಟೆಫನಿ ಡಬಲ್ ಮ್ಯಾಸ್ಟೆಕ್ಟಮಿ ಮಾಡಲು ನಿರ್ಧರಿಸಿದರು, ಅಂದರೆ ಎರಡೂ ಸ್ತನಗಳನ್ನು ಕತ್ತರಿಸಲು ನಿರ್ಧರಿಸಿದರು.
 

ಏನಿದು BRCA1 ಜೀನ್ ಮ್ಯುಟೇಶನ್?

ಪ್ರತಿಯೊಬ್ಬ ಮಹಿಳೆಯೂ BRCA1 ಮತ್ತು BRCA2 ಮ್ಯೂಟೇಶನ್ ಹೊಂದಿರುತ್ತಾರೆ, ಆದರೆ ಜೀನ್ ಗಳಲ್ಲಿ ರೂಪಾಂತರಗಳನ್ನು ಹೊಂದಿರುವ ಮಹಿಳೆಯರು ಸ್ತನ ಕ್ಯಾನ್ಸರ್ನ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಈ ರೂಪಾಂತರಗಳು ಕೆಲವೊಮ್ಮೆ ಸ್ತನವು ಸರಿಯಾಗಿ ಕೆಲಸ ಮಾಡೊದನ್ನು ತಡೆಯುತ್ತವೆ. ಸ್ಟೆಫಾನಿಯ ತಾಯಿ, ಅಜ್ಜಿ ಮತ್ತು ಅವಳು ಸ್ವತಃ ಈ ಬಿಆರ್ಸಿಎ1 ಜೀನ್ ರೂಪಾಂತರದಿಂದ ಪ್ರಭಾವಿತರಾದರು. ಅದಕ್ಕಾಗಿಯೇ ಅವರು ಈ ನಿರ್ಧಾರವನ್ನು ತೆಗೆದುಕೊಂಡರು.

ಸ್ಟೆಫನಿ ಏನು ಹೇಳುತ್ತಾರೆ

ಒಂದು ಮಗುವಿನ ತಾಯಿಯಾಗಿರೋ ಸ್ಟೆಫಾನಿ ತನ್ನ ಕಾಯಿಲೆ ಬಗ್ಗೆ ಮತ್ತು ಸ್ತನಗಳನ್ನು ತೆಗೆದಿರುವ ಬಗ್ಗೆ ಭಾವುಕರಾಗಿದ್ದಾರೆ, ಆದರೆ ಅದು ಸಾವಿಗಿಂತ ಉತ್ತಮವಾಗಿದೆ ಎಂದು ಹೇಳುತ್ತಾರೆ. ನನ್ನ ಕುಟುಂಬದ ಇತಿಹಾಸವು ಈ ರೀತಿ ಇದೆ ಎಂದು ನನಗೆ ಮೊದಲೇ ತಿಳಿದಿತ್ತು. ನನ್ನ ಅಜ್ಜಿ ಎರಡು ಬಾರಿ ಬಿಆರ್ಸಿಎ1 ಜೀನ್ ರೂಪಾಂತರವನ್ನು ಹೊಂದಿದ್ದರು. ನಾನು 15 ವರ್ಷದವಳಾಗಿದ್ದಾಗ, ನಾನು ಬಿಆರ್ಸಿಎ 1 ಜೀನ್ ಪಾಸಿಟಿವ್ ಎಂದು ನನಗೆ ತಿಳಿಸಲಾಯಿತು, ಆದ್ದರಿಂದ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆಗಳು ಶೇಕಡಾ 87 ರಷ್ಟು ಹೆಚ್ಚಾಗಿತ್ತು. ಇದರಿಂದಾಗಿ ಎರಡೂ ಸ್ತನಗಳನ್ನು ತೆಗೆದುಹಾಕಬೇಕಾಯಿತು ಎನ್ನುತ್ತಾರೆ ಸೈಫನಿ.
 

ಹೆಚ್ಚಿನ ಸ್ತನ ಕ್ಯಾನ್ಸರ್ ಗಳ ಸಮಯದಲ್ಲಿ, ಮಹಿಳೆಯರು ಸ್ತನವನ್ನು ಕತ್ತರಿಸಿದ ನಂತರ ಕೃತಕ ಸ್ತನ ಕಸಿಗಳನ್ನು ಮಾಡುತ್ತಾರೆ. ಆದರೆ ಸ್ಟೆಫನಿ ಸ್ತನ ಕಸಿ ಮಾಡುವುದಕ್ಕಿಂತ ಚಪ್ಪಟೆಯಾದ ಸ್ತನ ಹೊಂದಲು ಬಯಸಿದರು. ನನ್ನ ಸ್ತನವು ನನ್ನ ಮಗನಿಗೆ ಹಾಲು ನೀಡುವ ಮೂಲಕ ಅದರ ಉದ್ದೇಶವನ್ನು ಪೂರೈಸಿದೆ, ಹಾಗಾಗಿ ಇನ್ನು ಮುಂದೆ ನನಗೆ ಅದರ ಅವಶ್ಯಕತೆ ಇಲ್ಲ.

ಸ್ಟೆಫನಿ ನಿರ್ಧಾರವನ್ನು ಅವರ ಕುಟುಂಬ, ಅವರ ನಿಶ್ಚಿತ ವರ ಡಯಾನಾ ಸಹ ಶ್ಲಾಘಿಸಿದ್ದಾರೆ ಮತ್ತು ಇಂದು ಅವರು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಸ್ಟೆಫಾನಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಇನ್ಸ್ಟಾಗ್ರಾಮ್ ಮತ್ತು ಟಿಕ್ ಟಾಕ್ನಲ್ಲಿ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಬಿಆರ್ಸಿಎ1 ವಂಶವಾಹಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ @theebooblessbabe ಎಂದು ಅವರು ಪ್ರಸಿದ್ಧರಾಗಿದ್ದಾರೆ.

click me!