ಎಷ್ಟೇ ತೊಳೆದ್ರೂ ಬಟ್ಟೆಗೆ ಹತ್ತಿರೊ ಬಣ್ಣ ಹೋಗ್ತಿಲ್ಲ ಅಂದ್ರೆ ಹೀಗೆ ಮಾಡಿ ಒಂದೇ ಸರಿ ಹೋಗುತ್ತೆ!

Published : Aug 02, 2025, 05:18 PM IST

Cleaning Stained Clothes: ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿ ದೀಪ್ತಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಟ್ಟೆಗಳ ಮೇಲಿನ ಈ ಮೊಂಡುತನದ ಬಣ್ಣ ತೊಡೆದುಹಾಕುವುದು ತುಂಬಾ ಸುಲಭ ಹೇಳಿದ್ದಾರೆ.  

PREV
17
ಯಾವುದೇ ಬಣ್ಣದಿಂದ ಕಲೆಯಾಗಿದ್ದರೆ

ಹಲವು ಬಾರಿ ಆತುರದಿಂದ ನಾವು ಎಲ್ಲಾ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ಹಾಕುತ್ತೇವೆ. ಆಗ ಕಲರ್ ಬಿಡುವ ಬಟ್ಟೆಗಳ ಬಣ್ಣ ಬಿಳಿ ಬಟ್ಟೆಗೆ ಟ್ರಾನ್ಸಫರ್ ಆಗುತ್ತದೆ. ಈ ಬಣ್ಣವು ಎಷ್ಟರಮಟ್ಟಿಗೆ ಇರುತ್ತದೆಯೆಂದರೆ ಹಲವಾರು ಬಾರಿ ತೊಳೆದ ನಂತರವೂ ಬಣ್ಣವೇ ಹೋಗಲ್ಲ. ನಿಮಗೂ ಈ ರೀತಿ ಏನಾದರೂ ಆಗಿದ್ದರೆ, ನಿಮ್ಮ ಬಿಳಿ ಬಟ್ಟೆಯು ನೀಲಿ, ಗುಲಾಬಿ ಅಥವಾ ಯಾವುದೇ ಇತರ ಬಣ್ಣದಿಂದ ಕಲೆಯಾಗಿದ್ದರೆ ಈ ಲೇಖನವು ನಿಮಗೆ ತುಂಬಾ ಉಪಯುಕ್ತವಾಗಿದೆ. 

27
ಇಲ್ಲಿದೆ ನೋಡಿ ವಿಡಿಯೋ

ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿ ದೀಪ್ತಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಟ್ಟೆಗಳ ಮೇಲಿನ ಈ ಮೊಂಡುತನದ ಬಣ್ಣ ತೊಡೆದುಹಾಕುವುದು ತುಂಬಾ ಸುಲಭ ಹೇಳಿದ್ದು, ಪರಿಣಾಮಕಾರಿ ಪರಿಹಾರ ತಿಳಿಸಿದ್ದಾರೆ. 

37
ನಿಮಗೆ ಏನೆಲ್ಲಾ ಬೇಕು?

ಈ ಮನೆಮದ್ದನ್ನು ಟ್ರೈ ಮಾಡಲು ನಿಮಗೆ 2 ಚಮಚ ಲಾಂಡ್ರಿ ಡಿಟರ್ಜೆಂಟ್, 3 ಚಮಚ ಫ್ಯಾಬ್ರಿಕ್ ವೈಟ್ನರ್ ಅಥವಾ ಬ್ಲೀಚ್ ಮತ್ತು 2 ಚಮಚ ಅಡುಗೆ ಸೋಡಾ ಬೇಕಾಗುತ್ತದೆ.

47
ಬಳಸುವುದು ಹೇಗೆ?

ಮೊದಲಿಗೆ ಒಂದು ಸ್ವಚ್ಛವಾದ ಕಪ್‌ನಲ್ಲಿ ಡಿಟರ್ಜೆಂಟ್ ಹಾಕಿ. ಅದಕ್ಕೆ ಫ್ಯಾಬ್ರಿಕ್ ವೈಟ್ನರ್ (Fabric whitener) ಅಥವಾ ಬ್ಲೀಚ್ (Bleach) ಸೇರಿಸಿ. ಆ ನಂತರ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

57
2 ರಿಂದ 3 ಗಂಟೆಗಳ ಕಾಲ ಬಿಡಿ

ತಯಾರಿಸಿಟ್ಟುಕೊಂಡ ದ್ರಾವಣವನ್ನು ಬಟ್ಟೆಯ ಮೇಲೆ ಬಣ್ಣ ಆದ ಜಾಗದಲ್ಲಿ ಹಚ್ಚಿ. ಈಗ ಆ ಭಾಗವನ್ನ ನಿಧಾನವಾಗಿ ಉಜ್ಜಿ. ಕೊನೆಗೆ ಬಟ್ಟೆಗಳನ್ನು 2 ರಿಂದ 3 ಗಂಟೆಗಳ ಕಾಲ ಹಾಗೆಯೇ ಬಿಡಿ.

67
ಬಟ್ಟೆಗಳಿಗೆ ಹಾನಿ ಮಾಡಲ್ಲ

ನಿಗದಿತ ಸಮಯದ ನಂತರ ಬಟ್ಟೆಗಳನ್ನು ಸಾಮಾನ್ಯ ಡಿಟರ್ಜೆಂಟ್‌ನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಹೀಗೆ ಮಾಡುವುದರಿಂದ ನಿಮ್ಮ ಬಟ್ಟೆಯಿಂದ ಬಣ್ಣದ ಕಲೆ ಒಂದೇ ಬಾರಿಗೆ ನಿವಾರಣೆಯಾಗುತ್ತದೆ. ಈ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ನಿಮ್ಮ ಬಟ್ಟೆಗಳಿಗೆ ಹಾನಿ ಮಾಡುವುದಿಲ್ಲ.

77
ಹೆಚ್ಚು ಬ್ಲೀಚ್ ಸೇರಿಸಬೇಡಿ

ಆದರೆ ಹೆಚ್ಚು ಬ್ಲೀಚ್ ಸೇರಿಸುವುದರಿಂದ ಬಟ್ಟೆಗಳ ಗುಣಮಟ್ಟ ಹಾಳಾಗಬಹುದು. ಆದ್ದರಿಂದ ಸಮತೋಲಿತ ಪ್ರಮಾಣವನ್ನು ನೆನಪಿನಲ್ಲಿಡಿ. ಅಲ್ಲದೆ, ಈ ಪರಿಹಾರ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories