Published : Mar 06, 2024, 04:03 PM ISTUpdated : Mar 10, 2024, 02:36 PM IST
ಮಗು ಮಾಡಿಕೊಳ್ಳುವುದು ಪತಿ ಪತ್ನಿ ಇಬ್ಬರ ಪರಸ್ಪರ ಇಚ್ಚೆಗೆ ಸಂಬಂಧಿಸಿದ್ದು, ಅವರಲ್ಲಿ ಒಬ್ಬರಿಗೆ ಇಷ್ಟವಿಲ್ಲದಿದ್ದರೂ ಅವರಿವರ ಒತ್ತಾಯಕ್ಕೆ ಮಕ್ಕಳನ್ನು ಮಾಡಿಕೊಂಡರೆ ಅವರ ಪಾಲನೆ ಮಾಡುವುದು ಕಷ್ಟದ ಕೆಲಸ.ಹೀಹಿರುವಾಗ ದುಬೈನಲ್ಲಿ ಮಿಲಿಯನೇರ್ ವ್ಯಕ್ತಿಯೋರ್ವನ ಪತ್ನಿಯೋರ್ವಳು ತಾನು ಗರ್ಭಿಣಿಯಾಗಿ ಮಗು ಹೆರಬೇಕಾದರೆ ತನಗೆ 2.5 ಕೋಟಿ ಮಾಸಿಕ ಹಣ ನೀಡಬೇಕು ಎಂದು ಹೇಳಿದ್ದಾಳೆ. ಈ ವಿಚಾರ ಈಗ ಇಂಟರ್‌ನೆಟ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಮಕ್ಕಳನ್ನು ಹೆರುವುದು ಕೂಡ ವ್ಯವಹಾರವಾಗಿದೆ. ಮಕ್ಕಳಾಗದವರು, ಶ್ರೀಮಂತರು, ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವುದು ಸಾಮಾನ್ಯ ಎನಿಸಿದೆ. ಆದರೆ ಐಷಾರಾಮಿ ಜೀವನಕ್ಕೆ ಹೆಸರಾದ ದುಬೈನಲ್ಲಿ ಶ್ರೀಮಂತ ವ್ಯಕ್ತಿಯೊರ್ವನ ಪತ್ನಿಯೇ ತಾನು ಗರ್ಭಿಣಿಯಾಗಿ ಮಗುವನ್ನು ಹೆರಬೇಕಾದರೆ 2.5 ಕೋಟಿ ಹಣ ನೀಡಬೇಕು ಎಂದು ಗಂಡನಿಗೆ ಬೇಡಿಕೆ ಇರಿಸಿದ್ದಾಳೆ.
210
ಇದನ್ನು ಸ್ವತಃ ಈಕೆಯೇ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾಳೆ. ತನ್ನ ಐಷಾರಾಮಿ ಲೈಫ್‌ಸ್ಟೈಲ್‌ನಿಂದ ಇನ್ಸ್ಟಾಗ್ರಾಮ್‌ನಲ್ಲಿ ಫೇಮಸ್ ಆಗಿರುವ ಸೌಂದಿ ತನ್ನ ಗಂಡ ಜಮಾಲ್‌ಗೆ ಹೀಗೆ ಬೇಡಿಕೆ ಇರಿಸಿದ ಮಹಿಳೆ. ಹೌಸ್ ವೈಫ್ ಆಗಿರುವ ಈಕೆ ಗಂಡನ ಹಣವನ್ನು ಖರ್ಚು ಮಾಡುವುದೇ ನನ್ನ ಕೆಲಸ ಎಂದು ಹೇಳಿಕೊಳ್ಳುತ್ತಾಳೆ.
310
ನಾನು ಗರ್ಭಿಣಿಯಾಗುವುದಕ್ಕೆ ಮೊದಲು ನನ್ನ ಪತಿ ಜೊತೆ ಚರ್ಚೆ ನಡೆಸಿದ ವಿಚಾರವಿದು ಎಂದು ಆಕೆ ಹೇಳಿಕೊಂಡಿದ್ದಾಳೆ. ನಾನು ನೇರವಾಗಿ ನಿಮ್ಮ ಬಳಿ ವಿಚಾರ ಹಂಚಿಕೊಳ್ಳುತ್ತೇನೆ. ನಾನು ಉಚಿತವಾಗಿ ನನ್ನ ದೇಹವನ್ನು ಅಷ್ಟೊಂದು ನೋವಿಗೆ ಒಡ್ಡಿಕೊಳ್ಳುವ ಮಾತೇ ಇಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
410
ಇದರ ಜೊತೆಗೆ ಆಕೆ ಪತಿಗೆ ಹಲವು ಬೇಡಿಕೆಗಳನ್ನು ಇರಿಸಿದ್ದು, ಇದರ ಜೊತೆಗೆ ಆಕೆ ಪತಿಯಿಂದ ಅದ್ದೂರಿ ಗಿಫ್ಟ್ ಕೂಡ ಬಯಸಿದ್ದು, ಒಂದು ವೇಳೆ ಮಗು ಗಂಡಾದರೆ ನೀಲಿ ಬಣ್ಣದ ಐಷಾರಾಮಿ ಬಿರ್ಕಿನ್ ಬ್ಯಾಗ್ ಹಾಗೂ ಹೆಣ್ಣು ಮಗುವಾದರೆ ಪಿಂಕ್ ಬಣ್ಣದ ಬಿರ್ಕಿನ್ ಬ್ಯಾಗ್ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾಳೆ.
510
ಇದರ ಜೊತೆಗೆ ಮಗುವಿನ ಡೆಲಿವರಿ ಟೈಮ್‌ನಲ್ಲಿ ಆಕೆಯ ಜೊತೆಗೆ ಮೇಕಪ್ ಟೀಮ್ ಹಾಗೂ ಕೇಶ ವಿನ್ಯಾಶಕರ ಟೀಮ್ ಕೂಡ ಬೇಕು ಎಂದು ಆಕೆ ಕೇಳಿದ್ದಾಳೆ. ಅಲ್ಲದೇ ತನ್ನ ಒಳ್ಳೆಯ ದಿನಕ್ಕಾಗಿ ತುಂಬಾ ಚೆನ್ನಾಗಿ ತಾನು ಕಾಣಿಸಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ.
610
ಮಗುವಿನ ಜನ್ಮದ ಮೊದಲ ಕೆಲ ದಿನಗಳಲ್ಲಿ ಒಂದು ಸಾವಿರದಿಂದ 2 ಸಾವಿರ ಜನ ಈ ಪೋಷಕರನ್ನು ಭೆಟಿಯಾಗುವ ನೀರಿಕ್ಷೆ ಇರುವ ಹಿನ್ನೆಲೆಯಲ್ಲಿ ತನಗೆ ವಿಐಪಿ ರೂಮ್ ಅನ್ನು ಬುಕ್ ಮಾಡಬೇಕು ಎಂದು ಆಕೆ ಹೇಳಿದ್ದಾರೆ. ಇದರ ಜೊತೆಗೆ ಮಗುವಿನ ಲಿಂಗಪತ್ತೆ (gender reveal) ಕಾರ್ಯಕ್ರಮವನ್ನು ಬುರ್ಜ್ ಅಲ್ ಅರಬ್‌ನಲ್ಲಿ ಮಾಡಬೇಕು.
710
ಇದರ ಜೊತೆಗೆ ಪತಿ ಇನ್ನಷ್ಟು ಆಸ್ತಿಯಲ್ಲಿ ಹಣ ಇನ್‌ವೆಸ್ಟ್ ಮಾಡಬೇಕು ಜೊತೆಗೆ ತನಗೆ ಹೊಸ ಕಾರನ್ನು ಗಿಫ್ಟ್ ನೀಡಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಇದರ ಜೊತೆಗೆ ತನಗೆ £238,000 ಅಂದರೆ 2.5 ಕೋಟಿ ತಿಂಗಳ ವೇತನ ನೀಡಬೇಕು. ಇದು ಮಗುವಿನ ಮೂಲ ಅಗತ್ಯಗಳಿಗಾಗಿ ಒಂದು ವೇಳೆ ಇಬ್ಬರು ಮಕ್ಕಳಾದರೆ ಈ ಮೊತ್ತ ಡಬ್ಬಲ್ ಆಗುವುದು.
810
Dubai millionaire's wife
ಇದರಲ್ಲಿ ಆಕೆಯ ಥೆರಪಿ ಸೆಷನ್, ಪಿಸಿಯೋಥೆರಪಿ, ವೈಯಕ್ತಿಕ ತರಬೇತಿ, ಅಕ್ಯುಪಂಚರ್ ಮಗುವಿಗೆ ಮಸಾಜ್ ಎಲ್ಲವೂ ಸೇರಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಇದರ ಜೊತೆಗೆ ತುರ್ತು ಸಂದರ್ಭದಲ್ಲಿ ಪತಿಯ ಎಲ್ಲಾ ಎಟಿಎಂ ಕಾರ್ಡ್‌ಗಳ ಎಕ್ಸೆಸ್ ಇರಬೇಕು ಎಂದು ಆಕೆ ಹೇಳಿದ್ದಾಳೆ.
910
Dubai millionaire's wife
ಅಲ್ಲದೇ ಮಗುವಾದ ಸಮಯದಲ್ಲಿ ತನ್ನ ನಿದ್ದೆ ಹಾಳಾಗಬಾರದು ಎಂದು ಮನೆಯ ಕೆಲಸದಾಳುಗಳನ್ನು ಹೆಚ್ಚಳ ಮಾಡಬೇಕು ರಾತ್ರಿ ಮಗುವನ್ನು ನೋಡಿಕೊಳ್ಳಲು ನರ್ಸ್ ಬೇಕು ಎಂದು ಆಕೆ ಹೇಳಿಕೊಂಡಿದ್ದಾಳೆ. ಬಾಣಾಂತನದ ಸಮಯದಲ್ಲಿ ಪತಿ ಜಮಾಲ್ ಸಂಪೂರ್ಣ ತಾಯಿಯ ಹೊಣೆ ಹೊರಬೇಕು ಹೀಗೆ ಹೇಳುತ್ತಾ ಹೋಗಿದ್ದು, ಆಕೆಯ ಬೇಡಿಕೆಯ ಸರಣಿ ಮುಂದುವರೆದಿದೆ.
1010
Dubai millionaire's wife
ಅಲ್ಲದೇ ಈ ಎಲ್ಲಾ ವಿಚಾರಗಳನ್ನು ತಾನು ವಿವಾಹಕ್ಕೂ ಮೊದಲು ಪತಿ ಜಮಾಲ್ ಜೊತೆ ಚರ್ಚಿಸಿದ್ದಾಗಿ ಆಕೆ ಹೇಳಿದ್ದಾಳೆ. ಆದರೆ ಈಕೆಯ ಈ ಬೇಡಿಕೆ ಕೇಳಿ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ. ಕೆಲವರು ಇದೊಂದು ಜೋಕ್ ಎಂದರೆ ಮತ್ತೆ ಕೆಲವರು ಅಮ್ಮನಾಗುವುದು ಸುಲಭವಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ನನಗೆ ನನ್ನ ಪತಿಯಬೆಂಬಲ ಮತ್ತು ರಾತ್ರಿಯ ಸಮಯದ ಒಳ್ಳೆಯ ನಿದ್ದೆ ಮಾತ್ರ ಬಯಸಿದ್ದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಅಂದ ಹಾಗೆ ಈಕೆ ದುಬೈನ ಫೇಮಸ್ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ತನ್ನ ಐಷಾರಾಮಿ ಲೈಫ್‌ಸ್ಟೈಲ್‌ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾಳೆ.