ಹೆಚ್ಚಿನ ಯುವಕರು ವೃತ್ತಿಜೀವನದ (Career) ಬಗ್ಗೆ ತುಂಬಾನೆ ಚಿಂತಿತರಾಗಿದ್ದಾರೆ. ಅವರು ಇಡೀದಿನ ಟೆನ್ಶನ್ ಕೊಡೋ ಕೆಲಸ ಬಿಟ್ಟು, ಆರಾಮವಾಗಿರುವಂತಹ ಕೆಲಸ ಮಾಡೋದಕ್ಕೆ ಇಷ್ಟಪಡ್ತಾರೆ. ಕೆಲವರು ಪ್ರತಿ ತಿಂಗಳು ಲಕ್ಷ ರೂಪಾಯಿಗಳ ಸಂಬಳ ಬರುವಂತಹ ಕೆಲಸ ಮಾಡೋದಕ್ಕಾಗಿ ಹೈಯರ್ ಸ್ಟಡೀಸ್ (Higher studies) ಕೂಡ ಮಾಡ್ತಾರೆ. ನಂತರ ಪರೀಕ್ಷೆ ತೆಗೆದುಕೊಂಡು ಎಂಜಿನಿಯರಿಂಗ್, ಡಾಕ್ಟರ್, ಸಿಎ, ಸಿಎಸ್ ನಂತಹ ಕೋರ್ಸ್ ಗಳನ್ನು ಮಾಡ್ತಾರೆ. ಆಗ ಮಾತ್ರ ಅವರು ಉತ್ತಮ ಕೆಲಸವನ್ನು ಪಡೆಯಬಹುದು. ಆದರೆ ಇನ್ನೂ ಕೆಲವು ಜನ ಈ ಕಾರ್ಪೊರೇಟ್ ಕೆಲಸ (Corporate Job) ಬಿಟ್ಟು ತಮ್ಮದೇ ಏನಾದರೂ ಕೆಲಸ ಮಾಡೋದಕ್ಕೆ ಯೋಚ್ನೆ ಮಾಡ್ತಾರೆ. ಅಂತದ್ದೆ ಕೆಲಸ ಮಾಡಿದ್ದು, ಕೊಲಂಬಿಯಾದ ಎಪ್ರಿಲ್.