Fridge in Winter: ಚಳಿಗಾಲದಲ್ಲಿ ಫ್ರಿಜ್ ಬಳಕೆ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚಿನ ಜನರು ಫ್ರಿಜ್ ಆಫ್ ಮಾಡುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಫ್ರಿಜ್ ಹಲವಾರು ತಿಂಗಳುಗಳ ಕಾಲ ಆಫ್ ಮಾಡುವುದು ಸರಿಯೇ/ ತಪ್ಪೇ ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ.
ಭಾರತದಾದ್ಯಂತ ಈಗ ವಿಪರೀತ ಚಳಿ ಇದೆ. ಚಳಿಗಾಲವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ವಿಶೇಷವೆಂದರೆ ಬೇಸಿಗೆಯಲ್ಲಿ ಕೆಲವು ಗಂಟೆಗಳ ಕಾಲವೂ ಬಿಟ್ಟಿರದೆ ಇರಲು ಸಾಧ್ಯವಾಗದ ಅನೇಕ ವಸ್ತುಗಳ ಬಳಕೆಯನ್ನು ಚಳಿಗಾಲದಲ್ಲಿ ನಾವು ಕಡಿಮೆ ಮಾಡುತ್ತೇವೆ. ಅವುಗಳಲ್ಲಿ ಒಂದು ಫ್ರಿಜ್. ಚಳಿಗಾಲದಲ್ಲಿಯಂತೂ ಫ್ರಿಜ್ ಬಳಕೆ ಕನಿಷ್ಠ ಮಟ್ಟಕ್ಕೆ ಅಥವಾ ಬಹುತೇಕ ಉಪಯೋಗಿಸಲ್ಲ.
27
ಚಳಿಗಾಲದಲ್ಲಿ ಫ್ರಿಜ್ ಅವಶ್ಯಕತೆ ಕಡಿಮೆ
ಅದೇ ಬೇಸಿಗೆಯಲ್ಲಿ ಫ್ರಿಜ್‌ಗಳನ್ನ ಹೆಚ್ಚಾಗಿ ಬಳಸಲಾಗುತ್ತದೆ. ಆಹಾರ ಮತ್ತು ಪಾನೀಯಗಳು ಹಾಳಾಗದಂತೆ ನೋಡಿಕೊಳ್ಳಲು ಮತ್ತು ತಣ್ಣೀರು ಕುಡಿಯಲು ಅವು ತುಂಬಾ ಉಪಯುಕ್ತವಾಗಿವೆ. ಆದರೆ ಚಳಿಗಾಲದಲ್ಲಿ ಫ್ರಿಜ್ ಅವಶ್ಯಕತೆ ಕಡಿಮೆ ಅಥವಾ ಬಹುತೇಕ ಇರುವುದೇ ಇಲ್ಲ.
37
ಸರಿಯೇ/ತಪ್ಪೇ
ಚಳಿಗಾಲದಲ್ಲಿ ಫ್ರಿಜ್ ಅವಶ್ಯಕತೆ ಕಡಿಮೆ ಇರುವುದರಿಂದ ವಿದ್ಯುತ್ ಉಳಿಸಲು ಫ್ರಿಜ್ ಆಫ್ ಮಾಡಬೇಕೇ ಎಂದು ಜನರು ಆಗಾಗ್ಗೆ ಯೋಚಿಸುತ್ತಾರೆ. ಈಗ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಜ್ ಇದೆ. ಆದರೆ ಚಳಿಗಾಲದಲ್ಲಿ ಅದನ್ನು ಕಂಪ್ಲೀಟ್ ಆಗಿ ಆಫ್ ಮಾಡುವುದು ಸರಿಯೇ/ತಪ್ಪೇ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ಚಳಿಗಾಲದಲ್ಲಿ ನಿಮಗೆ ಫ್ರಿಜ್ ಅಗತ್ಯವಿಲ್ಲದ ಕಾರಣ ನಿಮ್ಮ ಫ್ರಿಜ್ ಆಫ್ ಮಾಡಲು ಯೋಚಿಸುತ್ತಿದ್ದರೆ ಒಂದು ಕ್ಷಣ ಕಾಯಿರಿ. ಏಕೆಂದರೆ ಇದು ನೀವು ಮಾಡುತ್ತಿರುವ ಸರಳ ತಪ್ಪು. ಇದು ನಿಮ್ಮ ದುಬಾರಿ ಫ್ರಿಜ್ ಅನ್ನು ಹಾನಿಗೊಳಿಸಬಹುದು ಅಥವಾ ಮುಂದಿನ ದಿನದಲ್ಲಿ ನಿಮಗೆ ವೆಚ್ಚ ಹೆಚ್ಚಾಗಬಹುದು.
57
ಗ್ಯಾಸ್ ಸೋರಿಕೆಯಾಗುವ ಅಪಾಯ
ಫ್ರಿಜ್‌ನ ಪ್ರಮುಖ ಭಾಗವೆಂದರೆ ಅದರ ಕಂಪ್ರೆಸರ್ ಎಂಬುದು ಗಮನಿಸಬೇಕಾದ ಸಂಗತಿ. ತಜ್ಞರ ಪ್ರಕಾರ, ಫ್ರಿಜ್ ಅನ್ನು ದೀರ್ಘಕಾಲದವರೆಗೆ ಗಮನಿಸದೆ ಬಿಟ್ಟರೆ ಅದು ಕಂಪ್ರೆಸರ್‌ನ ಕಾರ್ಯಕ್ಷಮತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಗ್ಯಾಸ್ ಸೋರಿಕೆಯಾಗುವ ಅಪಾಯವೂ ಇದೆ.
67
ಕಡಿಮೆ ಸೆಟ್ಟಿಂಗ್‌ಗೆ ರನ್ ಮಾಡಿದ್ರೆ ..
ಫ್ರಿಜ್‌ನಲ್ಲಿರುವ ಎಲ್ಲಾ ಭಾಗಗಳಲ್ಲಿ ಕಂಪ್ರೆಸರ್ ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಫ್ರಿಜ್ ಅನ್ನು ಕಡಿಮೆ ಸೆಟ್ಟಿಂಗ್‌ಗೆ ರನ್ ಮಾಡಿದ್ರೆ ನಿಮ್ಮ ವಿದ್ಯುತ್ ಬಳಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
77
ಚಳಿಗಾಲದ ಮೋಡ್‌ಗೆ
ಇಂದಿನ ಫ್ರಿಜ್‌ಗಳು ಸಾಕಷ್ಟು ಮುಂದುವರಿದ ತಂತ್ರಜ್ಞಾನದೊಂದಿಗೆ ಬರುತ್ತಿವೆ. ನಿಮ್ಮ ಫ್ರಿಜ್‌ನಲ್ಲಿ ಚಳಿಗಾಲದ ಮೋಡ್ ಇದ್ದರೆ ನೀವು ಚಳಿಗಾಲದ ಮೋಡ್‌ಗೆ ಹೊಂದಿಸಬಹುದು. ಪರ್ಯಾಯವಾಗಿ ನಿಮ್ಮ ಫ್ರಿಜ್ ಡಯಲ್ ಹೊಂದಿದ್ದರೆ ಚಳಿಗಾಲದಲ್ಲಿ 1 ಅಥವಾ 2 ಸೆಟ್ಟಿಂಗ್ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.