ಕಪ್ಪನೆಯ ದಟ್ಟ ಕೂದಲಿಗಾಗಿ ಹೀಗೆ ತಯಾರಿಸಿ ದಾಸವಾಳದ ಮಾಸ್ಕ್
ದಾಸವಾಳ ಹೇರ್ ಮಾಸ್ಕ್ : ಕೇವಲ ಒಂದು ತಿಂಗಳಲ್ಲಿ ಕೂದಲು ಉದ್ದವಾಗಲು ಮತ್ತು ದಟ್ಟವಾಗಲು ದಾಸವಾಳ ಹೂಗಳ ಈ ಹೇರ್ ಮಾಸ್ಕ್ ಟ್ರೈ ಮಾಡಿ ನೋಡಿ.
ದಾಸವಾಳ ಹೇರ್ ಮಾಸ್ಕ್ : ಕೇವಲ ಒಂದು ತಿಂಗಳಲ್ಲಿ ಕೂದಲು ಉದ್ದವಾಗಲು ಮತ್ತು ದಟ್ಟವಾಗಲು ದಾಸವಾಳ ಹೂಗಳ ಈ ಹೇರ್ ಮಾಸ್ಕ್ ಟ್ರೈ ಮಾಡಿ ನೋಡಿ.
ಎಲ್ಲಾ ಹೆಣ್ಣುಮಕ್ಕಳಿಗೂ ತಮ್ಮ ಕೂದಲು ದಟ್ಟವಾಗಿ, ಉದ್ದವಾಗಿ ಮತ್ತು ಬಲವಾಗಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಮನೆಮದ್ದಿನಿಂದ ಹಿಡಿದು ದುಬಾರಿ ಕೂದಲಿನ ಉತ್ಪನ್ನಗಳವರೆಗೆ ಎಲ್ಲವನ್ನೂ ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೂದಲಿನ ಆರೋಗ್ಯಕ್ಕೆ ದಾಸವಾಳ ಹೇರ್ ಮಾಸ್ಕ್ ತುಂಬಾ ಒಳ್ಳೆಯದು. ದಾಸವಾಳ ಹೂವಿನಿಂದ ತಯಾರಿಸಿದ ಈ ಹೇರ್ ಮಾಸ್ಕ್ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ದಾಸವಾಳದಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕ ಮತ್ತು ಅಲರ್ಜಿ ವಿರೋಧಿ ಗುಣಗಳು ಕೂದಲಿನ ಬುಡವನ್ನು ಬಲಪಡಿಸಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲನ್ನು ಹೊಳೆಯುವಂತೆ ಮತ್ತು ರೇಷ್ಮೆಯಂತೆ ಮಾಡುತ್ತದೆ. ಅಷ್ಟೇ ಅಲ್ಲ, ಕೂದಲು ಉದ್ದವಾಗಿ ಮತ್ತು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ದಾಸವಾಳ ಹೂವಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲಿನ ಬುಡವನ್ನು ಬಲಪಡಿಸಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ತೆಳುವಾಗುವುದನ್ನು ತಡೆಯುತ್ತದೆ. ದಾಸವಾಳ ಹೂವಿನಲ್ಲಿರುವ ನೈಸರ್ಗಿಕ ಅಂಶಗಳು ಕೂದಲಿಗೆ ತೇವಾಂಶ ನೀಡಿ ಹೊಳೆಯುವಂತೆ ಮಾಡುತ್ತದೆ. ದಾಸವಾಳ ಹೂವು ಕೂದಲನ್ನು ಮೃದುವಾಗಿಸುತ್ತದೆ ಮತ್ತು ರೇಷ್ಮೆಯಂತೆ ಮಾಡುತ್ತದೆ. ಇದರಲ್ಲಿರುವ ಅಲರ್ಜಿ ವಿರೋಧಿ ಗುಣಗಳು ತಲೆಯ ಚರ್ಮದಲ್ಲಿ ಉಂಟಾಗುವ ಉರಿ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.
ಅರ್ಧ ಕಪ್ ದಾಸವಾಳ ಹೂವನ್ನು ಚೆನ್ನಾಗಿ ರುಬ್ಬಿಕೊಂಡು, ಅದಕ್ಕೆ ಕಾಲು ಕಪ್ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
ದಾಸವಾಳ ಹೂ
ಕಾಲು ಕಪ್ ದಾಸವಾಳ ಹೂವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
ಕಾಲು ಕಪ್ ದಾಸವಾಳ ಹೂವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
ದಾಸವಾಳ ಹೂ & ನೆಲ್ಲಿಕಾಯಿ ಮಾಸ್ಕ್:
ಕಾಲು ಕಪ್ ದಾಸವಾಳ ಹೂವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ನಾನ ಮಾಡಿ.
ಗಮನಿಸಿ: ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಿದರೆ ಸಾಕು.