ಒಳ್ಳೆ ಹುಡುಗಿಯರು ಚೆನ್ನಾಗಿ ಡ್ರೆಸ್ ಮಾಡ್ತಾರೆ
ಯಾರೊಬ್ಬರ ಡ್ರೆಸ್ ನೋಡಿ, ಅವರು ಒಳ್ಳೆಯವರೇ ಕೆಟ್ಟವರೇ ಎಂದು ಹೇಳಲು ಸಾಧ್ಯವೇ ಇಲ್ಲ, ಯಾವುದೇ ಹುಡುಗಿ ಆಕೆಯ ಇಷ್ಟದಂತೆ ಡ್ರೆಸ್ ಧರಿಸಲಿ (do not judge women by her dress), ಅದರ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ.
ನಿನ್ನ ಗಂಡ ತುಂಬಾನೆ ಸಣ್ಣಗಿದ್ದಾನೆ, ಯಾಕೆ ಅವನಿಗೆ ಸರಿ ಊಟ ಕೊಡಲ್ವಾ?
ಇದನ್ನಂತೂ ಮದುವೆಯಾದ ಹುಡುಗಿಯರಿಗೆ ಕೇಳಿ, ಕೇಳಿ ಸಾಕಾಗಿರುತ್ತೆ. ಯಾಕೆ ಹೆಂಡತಿ ಮಾಡಿ ಕೊಟ್ರೆ ಮಾತ್ರ ಗಂಡ ಊಟ ಮಾಡಿ ದಪ್ಪ ಆಗೋದಾ? ಹುಡುಗರಿಗೆ ಊಟ ಮಾಡ್ಕೊಂಡು ತಿನ್ನೋಕೆ ಗೊತ್ತಾಗಲ್ವಾ?
ಯಾಕೆ ಹಾಗೆ ಕೂತಿದ್ಯಾ? ಸರಿಯಾಗಿ ಹೆಂಗಸ್ರ ಹಾಗಿ ಕೂತ್ಕೊ…
ಗಂಡಸರಂತೆ ಹೆಂಗಸರಿಗೂ ತಮಗೆ ಇಷ್ಟ ಬಂದಂತೆ ಇರೋ ಹಕ್ಕು ಇದೆ. ಅದೇ ರೀತಿ ಅವರಿಗೆ ಬೇಕಾದ ಹಾಗೆ ಕುಳಿತುಕೊಳ್ಳುವ ಹಕ್ಕು ಸಹ ಇದೆ. ಅದಕ್ಕಾಗಿ ಅವರಿಗೆ ಯಾಕೆ ಗಂಡಸ್ರಾಗೆ ಕುತ್ಕೊಳ್ಳೋದು ಎಂದು ಕೇಳಬೇಡಿ. ಗಂಡಸ್ರಿಗೆ ಸ್ಪೆಷಲ್ ಆಗಿ ಕುಳಿತುಕೊಳ್ಳುವ ರೀತಿ ಅಂತೂ ಇಲ್ವೇ ಇಲ್ಲ.
ಗಂಡಸ್ರ ತರ ನಗ್ಬೇಡ, ನೀನು ಹುಡುಗಿ ನೆನಪಿರಲಿ
ಹುಡುಗೀರು ಅಂದ್ರೆ ಸ್ಮೂತ್ ಆಗಿ, ನಿಧಾನವಾಗಿ ನಗಬೇಕು ಅನ್ನೋ ರೂಲ್ಸ್ ಇದೆಯಾ? ಇಲ್ಲ ತಾನೆ? ಮತ್ಯಾಕೆ ಹೆಣ್ಣು ಮಕ್ಕಳು ಜೋರಾಗಿ ನಕ್ರೆ (loughing) ಯಾಕೆ ಗಂಡಸ್ರ ತರ ನಗೋದು, ನೀನು ಹುಡುಗಿ ನೆನಪಿರಲಿ ಅನ್ನೋದು.
ಸಂಸ್ಕಾರವಂತ ಹುಡುಗೀರೆಲ್ಲಾ, ಮನೆಗೆ ಇಷ್ಟು ಲೇಟಾಗಿ ಬರೋದಿಲ್ಲ…
ಹುಡುಗರು ಮನೆಗೆ ಲೇಟ್ ಆಗಿ ಬಂದ್ರೂ ಅವರಿಗೆ ಸಂಸ್ಕಾರ ಹೆಚ್ಚಾಗಿರುತ್ತಾ? ಹುಡುಗಿಯರು ಮಾತ್ರ ಮನೆಗೆ ಲೇಟ್ ಆಗಿ ಬಂದ್ರೆ ಅವರಿಗೆ ಸಂಸ್ಕಾರ ಇಲ್ಲ ಅಂತ ಅನ್ಸೋದು ಹೇಗೆ? ಅವರಿಗೂ ಅವರದೇ ಆದ ಸ್ವಾತಂತ್ರ್ಯ ಇದೆ ಅಲ್ವಾ?
ಒಬ್ಳೇ ಹೋಗ್ತಿದ್ಯಾ? ಹುಡುಗ್ರನ್ನು ಯಾರನ್ನಾದ್ರೂ ಜೊತೆಗೆ ಕರ್ಕೊಂಡು ಹೋಗು…
ಹುಡುಗಿಯರು ಈಗ ತುಂಬಾನೆ ಇಂಡಿಪೆಂಡೆಂಟ್ ಆಗಿದ್ದಾರೆ. ಅವರಿಗೆ ಬೇಕಾದಲ್ಲಿ ಅವರು ಧೈರ್ಯದಿಂದಾನೆ ಹೋಗಿ ಬರ್ತಾರೆ. ಹಾಗಾಗಿ ಅವರು ಹೊರಗೆ ಹೋಗುವಾಗ ಒಬ್ರೇ ಹೋಗಬೇಡ, ಹುಡುಗರನ್ನು ಕರ್ಕೊಂಡು ಹೋಗು ಅನ್ನಬೇಡಿ.
ಹೊಸ ಮೊಬೈಲ್/ಕಾರ್… ವಾವ್… ಯಾರು ಗಿಫ್ಟ್ ಮಾಡಿದ್ರು?
ಹುಡುಗಿಯರು ಹೊಸ ಮೊಬೈಲ್, ಅಥವಾ ಕಾರ್, ಲ್ಯಾಪ್ ಟಾಪ್ ಏನಾದ್ರೂ ಹಿಡಿದುಕೊಂಡ ಕೂಡ್ಲೇ ಯಾರು ತೆಗ್ಸಿ ಕೊಟ್ರು, ಬಾಯ್ ಫ್ರೆಂಡ್ ತೆಗ್ಸಿ ಕೊಟ್ರ, ಅಣ್ಣ ಕೊಟ್ರ? ಎಂದೆಲ್ಲಾ ಕೇಳಬೇಡಿ. ಹುಡುಗಿಯರಿಗೆ ಅವರಿಗೆ ಬೇಕಾದ ವಸ್ತುಗಳನ್ನು ಅವರೇ ಖರೀದಿ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ.
ಹುಡುಗಿಯಾಗಿ ನೀನೊಬ್ಳೇ ಅದನ್ನೆಲ್ಲಾ ಮ್ಯಾನೇಜ್ ಮಾಡಕ್ಕಾಗುತ್ತಾ?
ಹುಡುಗಿಯರು ಮನೆಯ ಜವಾಬ್ಧಾರಿ, ಹಣಕಾಸಿನ ಜವಾಬ್ಧಾರಿ (financial responsibility) ಹೊರಲು ತಯಾರಾಗಿದ್ದರೆ, ಅದನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಹುಡುಗಿಯಾಗಿ ನೀನೊಬ್ಳೇ ಅದನ್ನೆಲ್ಲಾ ಮ್ಯಾನೇಜ್ ಮಾಡಕ್ಕಾಗುತ್ತಾ? ಎಂದು ಕೇಳುವ ಜಮಾನ ಈವಾಗ ಇಲ್ಲ.
ಹುಡುಗಿ ಆಗಿ ಅಡುಗೆ ಮಾಡೋಕೆ ಬರಲ್ವಾ?
ಅಡುಗೆ ಅನ್ನೋದು ಪ್ರತಿಯೊಬ್ಬರೂ ಅಗತ್ಯವಾಗಿರೋವಂತಹ ಕಲೆಯಾಗಿದೆ. ಅದನ್ನು ಹುಡುಗರು ಮತ್ತು ಹುಡುಗಿಯರು ಇಬ್ರೂ ಕಲಿತ್ರೆ ಒಳ್ಳೇದು. ಹುಡುಗರಿಗೆ ಅಡುಗೆ ಮಾಡಲು ಬರದಿದ್ರೆ ಸುಮ್ನೆ ಇರೋ ನೀವು, ಹುಡುಗಿಗೆ ಅಡುಗೆ ಬರಲ್ಲ ಅಂದ್ರೆ ಯಾಕೆ ಮೂಗು ಮುರಿತೀರಾ?
ನೀನು ಡ್ರೈವಿಂಗ್ ಮಾಡೋದಾ? ನೋ ವೇ ಹುಡುಗೀರ ಡ್ರೈವಿಂಗ್ ಸ್ಕಿಲ್ ನಂಬಲ್ಲ
ಈ ಪ್ರಶ್ನೆನ ಕೇಳಿ ಕೇಳಿ ಹುಡುಗಿಯರಿಗೆ ಸಾಕಾಗಿ ಹೋಗಿದೆ. ನಿಮಗೆ ಗೊತ್ತಾ? ರಿಸರ್ಚ್ ಪ್ರಕಾರ ಜಗತ್ತಿನ ಬೆಸ್ಟ್ ಡ್ರೈವರ್ (best driver) ಅಂದ್ರೆ ಜೊತೆಗೆ ಸೇಫ್ ಡ್ರೈವರ್ ಅಂದ್ರೆ ಹುಡುಗಿಯರು. ಸೋ ಇನ್ನು ಮುಂದೆ ಈ ಪ್ರಶ್ನೆ ಎಲ್ಲಾ ಕೇಳೋದೆ ಬೇಡ.