ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯವಾಗಿರುವ ಐಶ್ವರ್ಯ ಇದೀಗ ವಿಶ್ವ ತಾಯಂದಿರ ದಿನ ಆಚರಿಸಿದ್ದಾರೆ.
ಐಶ್ವರ್ಯ ವಿಶ್ವ ತಾಯಂದಿರ ದಿನದ ಕುರಿತು ಒಂದು ಪೋಸ್ಟ್ ಮಾಡಿದ್ದಾರೆ. ಒಂದೇ ಪೋಸ್ಟ್‌ನಲ್ಲಿ ಐಶ್ವರ್ಯ ಅಮ್ಮ ಹಾಗೂ ಅತ್ತೆ ಇಬ್ಬರಿಗೂ ಶುಭಾಶಯ ತಿಳಿಸಿದ್ದಾರೆ.
ಅತ್ತೆ ಹಾಗೂ ತಾಯಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಐಶ್ವರ್ಯ, ನನ್ನ ಬದುಕಿಗೆ ಅರ್ಥ ನೀಡಿ, ಜೀವನ ಸೌಂದರ್ಯ ಇಮ್ಮಡಿಗೊಳಿಸಿದ ಇಬ್ಬರು ಮಹಿಳೆಯರ ಕಾರ್ಯವನ್ನು ಶ್ಲಾಘಿಸಬೇಕು ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಪ್ರೀತಿ, ಆಶೀರ್ವಾದ, ಮಾರ್ಗದರ್ಶನ, ನಿರಂತರ ಬೆಂಬಲ ಹಾಗೂ ನೆರವು ನನ್ನ ಅತೀ ದೊಡ್ಡ ಶಕ್ತಿ ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಇನ್‌ಸ್ಟಾ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇಂದು ಹಾಗೂ ಪ್ರತಿ ದಿನ ಅಮ್ಮಂದಿರ ದಿನವನ್ನು ಆಚರಿಸುತ್ತಿರುವ ನನ್ನ ತಾಯಿ ಹಾಗೂ ಅತ್ತೆ ಇಬ್ಬರಿಗೂ ಶುಭಾಶಯಗಳು ಎಂದು ಐಶ್ವರ್ಯ ಪೋಸ್ಟ್‌ನಲ್ಲಿ ಆಪ್ತವಾಗಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ಪಾಡ್‌ಕಾಸ್ಟ್ ಒಂದರಲ್ಲಿ ಐಶ್ವರ್ಯ ತನ್ನ ಅತ್ತೆ ಮಾಳವಿಕಾ ಸಿದ್ದಾರ್ಥ್ ಐಕಾನಿಕ್ ವಿಮೆನ್ ಎಂದು ಹಾಡಿ ಹೊಳಿದ್ದರು. ಅತ್ತೆ ನನ್ನ ಅತೀ ದೊಡ್ಡ ಶಕ್ತಿ ಎಂದಿದ್ದರು.
ಅತ್ತೆ ತನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡುತ್ತಾರೆ. ಇದು ನನ್ನ ಯಶಸ್ಸಿಗೆ ನೆರವಾಗಿದೆ ಎಂದು ಐಶ್ವರ್ಯ ಹೇಳಿಕೊಂಡಿದ್ದರು.
ಶೈಕ್ಷಣಿ ಕ್ಷೇತ್ರದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಐಶ್ವರ್ಯ, ಅಂಬರ್ ವ್ಯಾಲಿ ರೆಸಿಡೆನ್ಶಿ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಇದರ ಜೊತೆಗೆ ಇತರ ಕೆಲ ಉದ್ಯಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.