ಯಾವುದೇ ಹಬ್ಬಕ್ಕೂ ಮುನ್ನ ಮನೆಯನ್ನು ಕ್ಲೀನ್ ಮಾಡುವುದು ಸಹ ಒಂದು ಪ್ರಮುಖ ಕೆಲಸ. ಮನೆ ಶುಚಿಯಾಗಿದ್ದರೆ, ನಮ್ಮ ಮನಸ್ಸು ಶುಚಿಯಾಗಿರುತ್ತದೆ. ಬಹುತೇಕರು ಎಲ್ಲಾ ಕ್ಲೀನ್ ಮಾಡ್ತಾರೆ. ಆದ್ರೆ ಟಾಯ್ಲೆಟ್ ರೂಂ ಕ್ಲೀನ್ ಕಡೆ ಗಮನವಹಿಸಲ್ಲ. ಜಸ್ಟ್ ನೀರು ಹಾಕಿದರೆ ಸಾಕು ಅಂದುಕೊಳ್ತಾರೆ. ಆದರೆ ಕೇವಲ ನೀರು ಹಾಕುವುದರಿಂದ ಅಲ್ಲಿನ, ಕಲೆ, ದುರ್ವಾಸನೆ ದೂರವಾಗಲ್ಲ. ಅದಕ್ಕೆಂದೇ ಕ್ಲೀನರ್‌ಗಳಿದ್ದು, ಅವುಗಳನ್ನು ಬಳಸುವುದು ಒಳ್ಳೆಯದು. ಆದರೆ ಈಗಿನ ಕ್ಲೀನರ್‌ಗಳಲ್ಲಿ ಹೆಚ್ಚೆಚ್ಚು ಕೆಮಿಕಲ್ ಇರುತ್ತೆ, ಜೊತೆಗೆ ದುಬಾರಿ ಕೂಡ ಹೌದು. ಆದ್ದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಟಾಯ್ಲೆಟ್ ರೂಂ ಕ್ಲೀನ್ ಮಾಡುವ ಸೂಪರ್ ಟಿಪ್ಸ್ ಯಾವುದಾದರೂ ಇದೆಯಾ ಎಂದು ನೀವೇನಾದರೂ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಐಡಿಯಾ. ಇದು ಕೇವಲ 10 ರೂ.ಗೆ ಸಿಗುವುದಲ್ಲದೆ, ಬೇಗನೆ ಶುಚಿಯಾಗುತ್ತೆ.
26
ತಂಪು ಪಾನೀಯದಿಂದ...
ಈಗಾಗಲೇ ಅಡುಗೆ ಸೋಡಾ, ವಿನೆಗರ್ ಮತ್ತಿತರ ಮನೆಮದ್ದುಗಳ ಸಹಾಯದಿಂದ ಟಾಯ್ಲೆಟ್ ರೂಂ ಕ್ಲೀನ್ ಮಾಡುವ ಬಗ್ಗೆ ತಿಳಿದುಕೊಂಡಿದ್ದೀರಿ. ಆದರೆ ಕೇವಲ 10 ರೂಪಾಯಿ ಮೌಲ್ಯದ ತಂಪು ಪಾನೀಯ(Soft drink)ದಿಂದ ನಿಮ್ಮ ಶೌಚಾಲಯವನ್ನು ಸ್ವಚ್ಛಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ?.
36
ತುಂಬಾ ಪರಿಣಾಮಕಾರಿ
ಹೌದು, ಬೇಸಿಗೆಯಲ್ಲಿ ನೀವು ಕುಡಿಯುವ ಅದೇ ಸಾಫ್ಟ್ ಡ್ರಿಂಕ್. ಇದನ್ನು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು, ಆದರೆ ಇದು ಶೌಚಾಲಯ ಶುಚಿಗೊಳಿಸುವ ಸಾಧನವಾಗಿ ತುಂಬಾ ಪರಿಣಾಮಕಾರಿಯಾಗಿದೆ.
46
ಸಾಫ್ಟ್ ಡ್ರಿಂಕ್ ಹೇಗೆ ಕೆಲಸ ಮಾಡುತ್ತೆ?
ತಂಪು ಪಾನೀಯದಲ್ಲಿರುವ ಕಾರ್ಬೊನಿಕ್ ಆಮ್ಲ ಮತ್ತು ಫಾಸ್ಪರಿಕ್ ಆಮ್ಲವು ಶೌಚಾಲಯದ ಮೇಲ್ಮೈಯಲ್ಲಿ ಸಂಗ್ರಹವಾಗಿರುವ ಕೊಳಕು ಮತ್ತು ಹಳದಿ ಕಲೆಗಳನ್ನು ಸಡಿಲಗೊಳಿಸುತ್ತದೆ. ಇದು ಸ್ವಚ್ಛಗೊಳಿಸುವಿಕೆಯನ್ನು ಸುಲಭಗೊಳಿಸುತ್ತದೆ ಮತ್ತು ನೀವು ಹೆಚ್ಚು ಕೆಲಸ ಮಾಡಬೇಕಾಗಿಲ್ಲ.
56
ಸ್ವಚ್ಛಗೊಳಿಸುವುದು ಹೇಗೆ?
*ಶೌಚಾಲಯದಲ್ಲಿ ಕೊಳಕು ಸ್ಥಳಗಳ ಮೇಲೆ ವಿಶೇಷವಾಗಿ ಹಳದಿ ಕಲೆಗಳಿರುವಲ್ಲಿ ತಂಪು ಪಾನೀಯವನ್ನು ಸುರಿಯಿರಿ. *ಇದನ್ನು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. *ಈಗ ಟಾಯ್ಲೆಟ್ ಬ್ರಷ್ ತೆಗೆದುಕೊಂಡು ನಿಧಾನವಾಗಿ ಸ್ಕ್ರಬ್ ಮಾಡಿ. *ನಂತರ ನೀರು ಸೇರಿಸಿ ತೊಳೆಯಿರಿ.
66
ವಾಸನೆಯನ್ನು ತೆಗೆದುಹಾಕಲು ಮನೆಮದ್ದುಗಳು
* ನಿಂಬೆ ಸಿಪ್ಪೆ, ಉಪ್ಪು ಮತ್ತು ನೀರಿನ ದ್ರಾವಣವನ್ನು ತಯಾರಿಸಿ ಅದನ್ನು ಶೌಚಾಲಯದೊಳಗೆ ಸುರಿಯಿರಿ. * ನಿಮಿಷಗಳಲ್ಲಿ ತಾಜಾತನವನ್ನು ತರುವ ಆರೊಮಾ ಡಿಫ್ಯೂಸರ್ ಬಳಸಿ. * ನೈಸರ್ಗಿಕ ಪರಿಮಳ ಬೇಕೆಂದ್ರೆ ಕೆಲವು ಹನಿ ಸಾರಭೂತ ತೈಲವನ್ನು ಬಳಸಬಹುದು. * ಶೌಚಾಲಯದಲ್ಲಿ ಒಳ್ಳೆಯ ಪರಿಮಳವಿರುವ ಸೋಪನ್ನು ಇರಿಸಿ. ಅದು ಪರಿಸರವನ್ನು ಫ್ರೆಶ್ ಆಗಿರಿಸುತ್ತದೆ.