Mom To Be ಸಮಂತಾ ಫಿಟ್ & ಆಕ್ಟಿವ್ ಆಗಿರಲು ಬೆಳ್ಳಂ ಬೆಳಗ್ಗೆ ಏನ್ ಮಾಡ್ತಾರೆ ಗೊತ್ತಾ?

Published : Jul 18, 2026, 04:15 PM IST

ತಾಯಿಯಾಗಲಿರುವ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ "ಪವರ್ ಮಾರ್ನಿಂಗ್ ರುಟೀನ್" ಬಗ್ಗೆ ತಿಳಿಸಿದ್ದಾರೆ. ತಾವು ಆರೋಗ್ಯದಿಂದ ಹಾಗೂ ಆಕ್ಟೀವ್ ಆಗಿರಲು ಏನೇನು ಮಾಡುತ್ತಾರೆ ಅನ್ನೋದನ್ನು ರಿವೀಲ್ ಮಾಡಿದ್ದು, ಆರೋಗ್ಯಕರ ಜೀವನಶೈಲಿಗಾಗಿ ನೀವು ಸಹ ಈ ದಿನಚರಿಯನ್ನು ಅನುಸರಿಸಬಹುದು.

PREV
18
ನಟಿ ಸಮಂತಾ ರುತ್ ಪ್ರಭು ದಿನಚರಿ

ನಟಿ ಸಮಂತಾ ರುತ್ ಪ್ರಭು ತಮ್ಮ ನಟನೆ ಮತ್ತು ಫಿಟ್ನೆಸ್‌ ನಿಂದಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸದ್ಯ ತಾಯಿಯಾಗಲಿರುವ ನಟಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು, ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ, ನಟಿ ತಮ್ಮ "ಪವರ್ ಮಾರ್ನಿಂಗ್ ರುಟೀನ್" ಬಗ್ಗೆ ರಿವೀಲ್ ಮಾಡಿದ್ದಾರೆ, ಈ ರುಟೀನ್ ನಿಂದಾಗಿ ನಟಿ ದಿನವಿಡೀ ಪವರ್ ಫುಲ್ ಆಗಿ, ಪಾಸಿಟಿವ್ ಆಗಿ ಹಾಗೂ ಫಿಟ್ ಮತ್ತು ಆಕ್ಟಿವ್ ಆಗಿರಲು ಸಹಾಯ ಮಾಡುತ್ತದೆ. ನೀವು ಕೂಡ ಆ ರುಟೀನ್ ಫಾಲೋ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.

28
ನೀವು ಇದನ್ನ ಟ್ರೈ ಮಾಡಿ ನೋಡಿ

ನಟಿ ಸಮಂತಾ ಕೆಲವು ಅಗತ್ಯ ಮಾರ್ನಿಂಗ್ ರುಟೀನ್ ಟಿಪ್ಸ್ ಹಂಚಿಕೊಂಡಿದ್ದಾರೆ, ಇವುಗಳನ್ನು 21 ದಿನಗಳವರೆಗೆ ಅನುಸರಿಸಿದರೆ, ನಿಮ್ಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ನೀವು ಕಾಣಬಹುದು. ನಟಿ ತನ್ನನ್ನು ತಾನು ಫಿಟ್ ಆಗಿ ಮತ್ತು ಆಕ್ಟೀವ್ ಆಗಿರಿಸಿಕೊಳ್ಳಲು ಸಹಾಯ ಮಾಡುವ ಈ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ.

38
ಒಂದು ಗಂಟೆ ಫೋನ್‌ನಿಂದ ದೂರವಿರಿ

ಬೆಳಿಗ್ಗೆ ಎದ್ದ ನಂತರ, ಗೊಂದಲಗಳಿಂದ ದೂರವಿರಿ ಮತ್ತು ನಿಮ್ಮ ದಿನವನ್ನು ನಿಮ್ಮದೇ ಆದ ರೀತಿಯಲ್ಲಿ ಪ್ರಾರಂಭಿಸಿ. ಆದ್ದರಿಂದ, ದಿನದ ಆರಂಭದಿಂದಲೇ ನಿಮ್ಮ ಫೋನ್ ಅನ್ನು ದೂರವಿಡಲು ಪ್ರಾರಂಭಿಸಿ. ಎದ್ದ ಬಳಿಕ ಮೊದಲ 1 ಗಂಟೆ ಮೊಬೈಲ್ ಬಳಕೆ ಮಾಡೋದೆ ಬೇಡ.

48
ದೀರ್ಘ ಉಸಿರಾಟ

ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುವುದರಿಂದ ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಮನಸ್ಸು ಶಾಂತವಾಗಿರುತ್ತದೆ ಎನ್ನುತ್ತಾರೆ ಸಮಂತಾ. ಇದು ಫ್ಯಾಟ್ ಬರ್ನ್ ಮಾಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

58
ಸೂರ್ಯನ ಬಿಸಿಲು ಅಗತ್ಯ

ಎದ್ದ ನಂತರ 10 ನಿಮಿಷಗಳ ಕಾಲ ಬಿಸಿಲಿನಲ್ಲಿ ಕಳೆಯಿರಿ. ಬೆಳಗಿನ ಸೂರ್ಯನ ಬೆಳಕು ದೇಹದ ಶಕ್ತಿಯ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

68
ಬೆಳಗಿನ ಡಿಟಾಕ್ಸ್ ಡ್ರಿಂಕ್ಸ್

ಪ್ರತಿದಿನ ಬೆಳಿಗ್ಗೆ, ಸಮಂತಾ ತನ್ನ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಡಿಟಾಕ್ಸ್ ಡ್ರಿಂಕ್ ಕುಡಿಯುತ್ತಾರೆ. ಸ್ವಲ್ಪ ಬೆಚ್ಚಗಿನ ನೀರು, ನಿಂಬೆ, ಅರಿಶಿನ, ಆಪಲ್ ಸೈಡರ್ ವಿನೆಗರ್, ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿ ಮತ್ತು ಸ್ವಲ್ಪ ಆರ್ಗಾನಿಕ್ ಆಲಿವ್ ಎಣ್ಣೆಯನ್ನು ಬೆರೆಸಿದ ನೀರನ್ನು ಕುಡಿಯುತ್ತಾರೆ. ನೀವು ಟ್ರೈ ಮಾಡಿ.

78
ದೇಹದ ಚಲನೆ-ಸಮತೋಲಿತ ಉಪಹಾರ

ಚಯಾಪಚಯ ಮತ್ತು ಶಕ್ತಿಯನ್ನು ಹೆಚ್ಚಿಸಲು, ಬೆಳಿಗ್ಗೆ 11 ಗಂಟೆಯ ಮೊದಲು ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ಮರೆಯದಿರಿ. ಬೆಳಿಗ್ಗೆ ಯಾವಾಗಲೂ ಸಮತೋಲಿತ ಉಪಹಾರವನ್ನು ಸೇವಿಸಿ. ನಿಮ್ಮ ದಿನವನ್ನು ಎಂದಿಗೂ ಅನಾರೋಗ್ಯಕರ ಆಹಾರದೊಂದಿಗೆ ಪ್ರಾರಂಭಿಸಬೇಡಿ.

88
ಉಪಾಹಾರದ ನಂತರ ಕಾಫಿ ಅಥವಾ ಚಹಾ ಕುಡಿಯಿರಿ

ಉಪಾಹಾರದ ನಂತರ ಮಾತ್ರ ಚಹಾ ಅಥವಾ ಕಾಫಿ ಕುಡಿಯಿರಿ. ಇದು ಒತ್ತಡವನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories