ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
ನ್ಯೂಯಾರ್ಕ್: ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋ ಮೆಟ್ ಗಾಲಾ 2026ರಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
23
ಮೆರೆಲಾನಿಯ ರಾಣಿ
ಈ ನೆಕ್ಲೇಸ್‌ನಲ್ಲಿ ‘ಮೆರೆಲಾನಿಯ ರಾಣಿ’ ಎಂದು ಕರೆಯಲ್ಪಡುವ 550 ಕ್ಯಾರಟ್‌ನ ನೇರಳೆ ಬಣ್ಣದ ಪದಕ ಪ್ರಮುಖ ಆಕರ್ಷಣೆಯಾಗಿತ್ತು. ನೆಕ್ಲೇಸ್‌ನಲ್ಲಿ ಅಪರೂಪದ ವಜ್ರ ಹಾಗೂ ಹರಳುಗಳನ್ನು ಅಳವಡಿಸಲಾಗಿದೆ.
33
ಜೀವಂತ ಪರಂಪರೆಯ ಸಂಗ್ರಹ
‘ಹೈದರಾಬಾದ್ ನನ್ನ ಮೂಲ ಮಾತ್ರವಲ್ಲ, ಅದು ಭಾಷೆ, ಲಯ ಮತ್ತು ಬದುಕುವ ವಿಧಾನ. ಈ ವಸ್ತ್ರಭೂಷಣದ ಮೂಲಕ ನಾನು ದಕ್ಷಿಣ ಭಾರತೀಯ ಕಲ್ಪನೆಯನ್ನು ಜಾಗತಿಕ ವೇದಿಕೆಗೆ ತಂದಿದ್ದೇನೆ. ಇದು ಕೇವಲ ಅಲಂಕಾರವಲ್ಲ, ಜೀವಂತ ಪರಂಪರೆಯ ಸಂಗ್ರಹ’ ಎಂದು ಸುಧಾ ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.